Viral Video: ಮದುವೆಗೆ ನಿರಾಕರಿಸಿದ್ದ ಪ್ರೇಯಸಿ: ವಿದ್ಯುತ್ ಟವರ್ ಏರಿದ ಪಾಗಲ್ ಪ್ರೇಮಿಯ ವಿಡಿಯೋ ವೈರಲ್
19 ವರ್ಷದ ಯುವಕನೊಬ್ಬ ತನ್ನ ಪ್ರೇಯಸಿ ತನ್ನನ್ನು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಸಾಯಲು ನಿರ್ಧರಿಸಿದ್ದ ಘಟನೆ ಮಧ್ಯಪ್ರದೇಶದ ಶಹದೋಲ್‌ನಲ್ಲಿ ನಡೆದಿದೆ. ತನ್ನ ಪ್ರೇಯಸಿಯು ತನ್ನನ್ನು ನಿರ್ಲಕ್ಷ್ಯದಿಂದ ನೋಡಿಕೊಳ್ಳುತ್ತಿದ್ದಾಳೆ, ತನ್ನಿಂದ ಬೇರ್ಪಡಲು ನಿರ್ಧರಿಸಿದ್ದಾಳೆ ಎಂದು ಮನನೊಂದು ಆ ಯುವಕನು ಹೈ ವೋಲ್ಟೇಜ್ ಇರುವ ವಿದ್ಯುತ್ ಟವರ್ ಅನ್ನು ಏರಿದ್ದಾನೆ. ಈ ಸಿನಿಮೀಯ ದೃಶ್ಯವು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿದ್ಯುತ್ ಟವರ್ ಏರಲು ಮುಂದಾದ ಯುವಕ -
ಮಧ್ಯಪ್ರದೇಶ: ಇತ್ತೀಚಿನ ದಿನದಲ್ಲಿ ಪ್ರೀತಿ ಪ್ರೇಮ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಪ್ರೀತಿಸಿದವರು ಮೋಸ ಮಾಡಿದರು, ಅಕ್ರಮ ಸಂಬಂಧ ಇಂತಹ ಅನೇಕ ಕಾರಣಕ್ಕೆ ಪ್ರಾಣ ಕಳೆದು ಕೊಳ್ಳುವ ಪ್ರಮಾಣ ಹೆಚ್ಚಾಗಿದೆ. ಅಂತೆಯೇ 19 ವರ್ಷದ ಯುವಕನೊಬ್ಬ ತನ್ನ ಪ್ರೇಯಸಿ ತನ್ನನ್ನು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಸಾಯಲು ನಿರ್ಧರಿಸಿದ್ದ ಘಟನೆ ಮಧ್ಯಪ್ರದೇಶದ ಶಹದೋಲ್‌ನಲ್ಲಿ ನಡೆದಿದೆ. ತನ್ನ ಪ್ರೇಯಸಿಯು ತನ್ನನ್ನು ನಿರ್ಲಕ್ಷ್ಯದಿಂದ ನೋಡಿಕೊಳ್ಳು ತ್ತಿದ್ದಾಳೆ, ತನ್ನಿಂದ ಬೇರ್ಪಡಲು ನಿರ್ಧರಿಸಿದ್ದಾಳೆ ಎಂದು ಮನನೊಂದು ಆ ಯುವಕನು ಹೈ ವೋಲ್ಟೇಜ್ ಇರುವ ವಿದ್ಯುತ್ ಟವರ್ ಅನ್ನು ಏರಿದ್ದಾನೆ. ಈ ಸಿನಿಮೀಯ ದೃಶ್ಯವು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಡಿಸೆಂಬರ್ 3ರಂದು ಮಧ್ಯಪ್ರದೇಶದ ಶಹದೋಲ್‌ನ ಡೆವೊಲ್ಯಾಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಿಮ್ಹಿಹಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯುವಕನನ್ನು ಸಂತೋಷ್ ಸಾಕೇತ್ (Santosh Saket) ಎಂದು ಗುರುತಿಸಲಾಗಿದೆ. ಪ್ರೇಯಸಿ ನಡುವೆ ವೈಮನಸ್ಸು ಮೂಡಿದ್ದು ಇತ್ತೀಚೆಗೆ ಆಕೆಯು ಬ್ರೇಕಪ್ ಮಾಡಿಕೊಳ್ಳಲು ಒತ್ತಾಯಿಸಿದ್ದಾಳೆ. ಆತನ ಕರೆಗಳನ್ನು ಕೂಡ ಆಕೆ ಸ್ವೀಕರಿಸುವುದನ್ನು ನಿಲ್ಲಿಸಿ ದ್ದಾಳೆ. ಹೀಗಾಗಿ ಆತನು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. 33 ಕೆವಿ ಹೈ ವೋಲ್ಟೆಜ್ (33 kV power tower) ವಿದ್ಯುತ್ ಟವರ್ ಅನ್ನು ಹತ್ತಿ ಹೋಗುವ ದೃಶ್ಯಗಳು ವೈರಲ್ ವಿಡಿಯೋದಲ್ಲಿ ಕಾಣಬಹುದು.
ವಿಡಿಯೋ ನೋಡಿ:
19-Year-Old Youth Climbs 33 kV Power Tower After Girlfriend Refuses To Marry In Shahdol#MadhyaPradesh #MPNews #FPJ pic.twitter.com/GvueM2hI92
— Free Press Madhya Pradesh (@FreePressMP) December 4, 2025
ಮಾಹಿತಿಯ ಪ್ರಕಾರ, ಹುಡುಗಿಯ ಮನೆಯವರು ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದ ಸಂತೋಷ್ ಅಸಮಾಧಾನಗೊಂಡಿದ್ದಾನೆ. ಈ ಬಗ್ಗೆ ಪ್ರೇಯಸಿ ಬಳಿ ಮನವಿ ಮಾಡಿದ್ದರು ಆಕೆ ಕುಟುಂಬದವರ ಮಾತನ್ನೇ ಕೇಳುತ್ತಿದ್ದಳು. ತನ್ನ ಪ್ರೀತಿ ದೂರಾಗುತ್ತದೆ ಎಂದು ಮನನೊಂದು ಆತನು ಡೆವೊಲ್ಯಾಂಡ್ ಪ್ರದೇಶದ ವಿದ್ಯುತ್ ಟವರ್ ಹತ್ತಿ ತಾನು ಆತ್ಮಹತ್ಯೆ ಮಾಡಿಕೊಳ್ಳುದಾಗಿ ತಿಳಿಸಿದ್ದಾನೆ
ಬಳಿಕ ಸ್ಥಳೀಯ ನಿವಾಸಿಗರು ಮತ್ತು ಡೆವೊಲ್ಯಾಂಡ್ ಪೊಲೀಸರು ಅವನನ್ನು ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದರು, ಆದರೆ ಆತನು ಮಾತ್ರ ತನ್ನ ಹಠ ಬಿಡಲಿಲ್ಲ. ಬಳಿಕ ಪೊಲೀಸರು ಮಹಿಳಾ ಕಾನ್‌ಸ್ಟೆಬಲ್ ಒಬ್ಬರನ್ನು ಅವರ ಪ್ರೇಯಸಿಯಂತೆ ನಟಿಸಿ ಫೋನ್ ನಲ್ಲಿ ಮಾತನಾಡು ವಂತೆ ತಿಳಿಸಿದ್ದಾರೆ. ಮಹಿಳಾ ಕಾನ್ ಸ್ಟೇಬಲ್ ಆತನ ಪ್ರೇಯಸಿಯಂತೆ ಮಾತನಾಡಿ, ಅವನನ್ನು ಮದುವೆಯಾಗಲು ಸಿದ್ಧಳಿದ್ದೇನೆ ಎಂದು ಸಂತೋಷ್ ಗೆ ಭರವಸೆ ನೀಡಿದ್ದಾರೆ. ಇದನ್ನು ಕೇಳಿದ ನಂತರವೇ ಸಂತೋಷ್ ಸುರಕ್ಷಿತವಾಗಿ ಕೆಳಗೆ ಬರಲು ಒಪ್ಪಿಕೊಂಡಿದ್ದಾನೆ
ಬಳಕೆದಾರರೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಬಾಲಿವುಡ್ ನ ಬ್ಲಾಕ್ ಬಸ್ಟರ್ ಸಿನಿಮಾ ಶೋಲೆ ಚಿತ್ರವನ್ನೇ ಮರುಕಳಿಸಿದಂತಿದೆ. ಆ ಸಿನಿಮಾದಲ್ಲಿಯೂ ವೀರು ಎಂಬ ಪಾತ್ರದಲ್ಲಿ ಇಂತಹದ್ದೇ ಒಂದು ಸನ್ನೀವೇಶ ಕಾಣಬಹುದಾಗಿದೆ ಎಂದು ತಿಳಿಸಿದ್ದಾರೆ. ಮೂರು ಗಂಟೆಗಳ ಪ್ರಯತ್ನದ ನಂತರ ಪೊಲೀಸರು ಆತನನ್ನು ಕೆಳಗಿಳಿಸಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಪೊಲೀಸರ ಸಕಾಲಿಕ ಮತ್ತು ಚಾತುರ್ಯದ ಕ್ರಮವು ಯುವಕನ ಜೀವವನ್ನು ಉಳಿಸಲು ಸಹಾಯ ಮಾಡಿತು ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಹಾಕಿದ್ದಾರೆ.