ನವದೆಹಲಿ, ಮೇ 25: ಭಾರತ-ಪಾಕಿಸ್ತಾನ ಎಂದಾಗ ಸಾಮಾನ್ಯವಾಗಿ ನೆನಪಿಗೆ ಬರುವುದೇ ಉದ್ವಿಗ್ನತೆ. ಪಾಕಿಸ್ತಾನ ಆಗಾಗ ಭಾರತವನ್ನು ಕೆಣಕುವ ಮೂಲಕ ಶತ್ರುತ್ವ ಬೆಳೆಸಿಕೊಂಡು ಬಂದಿದೆ. ಹಾಗಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ರೇಖೆಯ ಮಧ್ಯೆ ಸೈನಿಕರು ಕಾವಲುಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದಾ ಯುದ್ಧ, ಉದ್ವಿಗ್ನತೆಯಿಂದಲೇ ಸುದ್ದಿಯಾಗುವ ಈ ಗಡಿ ಮಧ್ಯರಾತ್ರಿಯ ವೇಳೆ ಆಕಾಶದಿಂದ ಎಷ್ಟು ಅದ್ಭುತವಾಗಿ ಕಾಣುತ್ತದೆ ಎಂಬುದನ್ನು ಪೈಲೆಟ್ ಒಬ್ಬರು ಶೇರ್ (Viral News) ಮಾಡಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಅಚ್ಚರಿಗೆ ದೂಡಿದ್ದು, ಕತ್ತಲೆಯ ಭೂದೃಶ್ಯದಾದ್ಯಂತ ಚಾಚಿಕೊಂಡಿರುವ ಹೊಳೆಯುವ ರೇಖೆಯನ್ನು ಈ ಫೋಟೊ ತೋರಿಸುತ್ತದೆ.
ಪಾಕಿಸ್ತಾನ ಭಾರತದ ಕಾಶ್ಮೀರದ ಕೆಲವು ಭಾಗವನ್ನು ವಶಪಡಿಸಿಕೊಂಡಾಗಿನಿಂದ ಇಲ್ಲಿಯವರೆಗೆ ಅದು ಪರಿಹರಿಸಲಾಗದ ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಇದನ್ನು ಆಜಾದ್ ಕಾಶ್ಮೀರ ಅಥವಾ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಗುತ್ತದೆ. ಇದೀಗ ಇಂಡಿಗೋ ಪೈಲಟ್ ಹಾರಾಟದ ಸಮಯದಲ್ಲಿ ಫ್ಲೈಟ್ ಸಿಬ್ಬಂದಿ ಭಾರತ-ಪಾಕ್ ಗಡಿಯ ಅಪರೂಪದ ದೃಶ್ಯವನ್ನು ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೊ ನೋಡಿ:
ಇಂಡಿಗೋ ವಿಮಾನದ ಪೈಲಟ್ ಕ್ಯಾಪ್ಟನ್ ಪ್ರದೀಪ್ ಕೃಷ್ಣನ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಎರಡೂ ಬದಿಗಳಲ್ಲಿ ದೀಪಗಳು ಕಂಗೊಳಿಸುತ್ತಿವೆ. ಹೊಳೆಯುವ ಬೆಳಕಿನ ರೇಖೆಯು ವಿಮಾನ ಸ್ಪಷ್ಟವಾಗಿ ಗೋಚರಿಸುತ್ತದೆ.
ರೋಲ್ಸ್ ರಾಯ್ಸ್ ಕಾರಿನಲ್ಲಿ ಚಹಾ ಮಾರಿದ ಇನ್ಫ್ಲುಯೆನ್ಸರ್
ʼʼಕತ್ತಲೆಯನ್ನು ಹೊಡೆದೋಡಿಸುವ ದೀಪಗಳ ಹೊಳೆಯುವ ರೇಖೆ, ಆಕಾಶದಿಂದಲೂ ಗೋಚರಿಸುತ್ತದೆʼʼ ಎಂಬ ಶೀರ್ಷಿಕೆಯೊಂದಿಗೆ ಈ ದೃಶ್ಯ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ, ಪೈಲಟ್ ಪ್ರಯಾಣಿಕರ ಮುಂದೆ ಕಾಕ್‌ಪಿಟ್‌ನಲ್ಲಿ ನಿಂತಿರುವುದನ್ನು ಕಾಣಬಹುದು. "ನೀವು ವಿಮಾನದಿಂದ ಹೊರಗೆ ನೋಡಿದರೆ, ವಿಶ್ವದ ಅತ್ಯಂತ ಸೂಕ್ಷ್ಮ ಹಾಗೂ ಕಟ್ಟುನಿಟ್ಟಿನ ಕಾವಲು ವ್ಯವಸ್ಥೆ ಹೊಂದಿರುವ ಭಾರತ-ಪಾಕಿಸ್ತಾನ ಗಡಿಯ ಅಪರೂಪದ ನೋಟವನ್ನು ಕಾಣಬಹುದು" ಎಂದು ವಿಮಾನದಲ್ಲೆ ಗಟ್ಟಿ ಧ್ವನಿ ಮೂಲಕ ಹೇಳಿದ್ದಾರೆ.
ವಿಡಿಯೊದಲ್ಲಿ ತೀವ್ರ ಕತ್ತಲೆಯ ನಡುವೆ ಭಾರತ ಮತ್ತು ಪಾಕಿಸ್ತಾನವನ್ನು ವಿಭಜಿಸುವ ಗಡಿರೇಖೆಯು ಬೆಳಕಿನ ಸರಪಳಿಯಂತೆ ಕಂಗೊಳಿಸುತ್ತಿದೆ. ಅನೇಕರು ಈ ಅದ್ಭುತ ದೃಶ್ಯವನ್ನು ಹೊಗಳಿದ್ದು ಕೆಲವರು ಗಡಿಯನ್ನು ನೋಡಿದ ನಂತರ ಭಾವುಕರಾಗಿದ್ದಾರೆ. ಒಬ್ಬರು "ನೋಡಲು ಅತ್ಯಂತ ಅದ್ಭುತವಾಗಿದೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.