ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು! ಮ್ಯಾಜಿಕ್‌ ಅಲ್ಲ, ಕಳಪೆ ಕಾಮಗಾರಿಯ ಎಫೆಕ್ಟ್‌

Indore's Smart City Road: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಭಾರಿ ಕಾಮಗಾರಿ ಅಕ್ರಮವೊಂದು ಬಯಲಾಗಿದೆ. ಸುಮಾರು 80 ಕೋಟಿ ರುಪಾಯಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ನಿರ್ಮಿಸಿದ್ದ ರಸ್ತೆಯೊಂದು ಪೈಪ್‌ಲೈನ್ ಪರೀಕ್ಷೆ ನಡೆಸುತ್ತಿದ್ದ ವೇಳೆಯಲ್ಲೇ ಏಕಾಏಕಿ ಬಿರುಕು ಬಿಟ್ಟಿದೆ. ಈ ಘಟನೆಯ ವಿಡಿಯೊ ವೈರಲ್‌ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಭೋಪಾಲ್‌, ಆ. 18: ದೇಶದ ಅತ್ಯಂತ ಸ್ವಚ್ಛ ನಗರ ಎಂದೇ ಜನಪ್ರಿಯವಾಗಿರುವ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಭಾರಿ ಕಾಮಗಾರಿ ಅಕ್ರಮವೊಂದು ಬಯಲಾಗಿದೆ. ಸುಮಾರು 80 ಕೋಟಿ ರುಪಾಯಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ನಿರ್ಮಿಸಿದ್ದ ರಸ್ತೆಯೊಂದು ಪೈಪ್‌ಲೈನ್ ಪರೀಕ್ಷೆ ನಡೆಸುತ್ತಿದ್ದ ವೇಳೆಯಲ್ಲೇ ಏಕಾಏಕಿ ಬಿರುಕು ಬಿಟ್ಟಿದೆ (Indore's Smart City Road). ಈ ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗಿದೆ.

ಇಂದೋರ್ ನಗರದ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ, ಸ್ಮಾರ್ಟ್ ಸಿಟಿ ರಸ್ತೆಯ ಅಡಿಯಲ್ಲಿ ಪೈಪ್‌ಲೈನ್ ಪರೀಕ್ಷೆ ನಡೆಸಲಾಗಿತ್ತು. ಈ ಸಮಯದಲ್ಲಿ ಪೈಪ್‌ನಲ್ಲಿ ನೀರು ಮತ್ತು ಗಾಳಿಯ ಒತ್ತಡ ಹೆಚ್ಚಿದ ತಕ್ಷಣವೇ, ರಸ್ತೆಯ ಕೆಳಭಾಗದಲ್ಲಿದ್ದ ಪೈಪ್‌ಲೈನ್‌ನಲ್ಲಿ ತೀವ್ರ ಲೀಕೇಜ್ ಉಂಟಾಗಿದೆ. ಇದರಿಂದ ರಸ್ತೆಯ ಮೇಲ್ಪದರ ಕಳಚಿ ಕುಸಿದು ಬಿದ್ದಿದೆ. ರಸ್ತೆಯಲ್ಲಿ ವಾಹನಗಳ ಸಂಚಾರ ಕಡಿಮೆಯಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇದರಿಂದ ಭಾರಿ ಅಪಾಯವೊಂದು ತಪ್ಪಿದಂತಾಗಿದೆ.

ಇಂದೋರ್‌ನಲ್ಲಿ ಬಿರುಕುಬಿಟ್ಟ ರಸ್ತೆ:



ಸಾರ್ವಜನಿಕರ ಆಕ್ರೋಶ, ಕಳಪೆ ಕಾಮಗಾರಿ ಆರೋಪ

ಸ್ಮಾರ್ಟ್ ಸಿಟಿ ಯೋಜನೆಯ ರಸ್ತೆ ಕೇವಲ ಪೈಪ್‌ಲೈನ್ ಪರೀಕ್ಷೆಯ ಒತ್ತಡವನ್ನೇ ತಡೆಯಲಾಗದೆ ಕುಸಿದು ಬಿದ್ದಿರುವುದು ಅಲ್ಲಿನ ನಿವಾಸಿಗಳ ಹಾಗೂ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಮೇಲ್ನೋಟಕ್ಕೆ ಹೊಳೆಯುವ ರಸ್ತೆಗಳನ್ನು ನಿರ್ಮಿಸಿ, ಕೆಳಬಾಗದಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿ ಹಾಗೂ ಪೈಪ್‌ಗಳನ್ನು ಬಳಸಲಾಗಿದೆ ಎಂದು ನಾಗರಿಕರು ಆರೋಪಿಸಿದರು.

ಭಾರಿ ಮಳೆಗೆ ಕುಸಿದ ಸೇತುವೆ; ಟ್ರಕ್‌ನೊಳಗಿದ್ದ ಚಾಲಕನಿಗೆ ಆಗಿದ್ದೇನು? ವಿಡಿಯೊ ವೈರಲ್

ತನಿಖೆಗೆ ಆದೇಶ

ಇಂದೋರ್ ಮಹಾನಗರ ಪಾಲಿಕೆಯ ಮಾಹಿತಿ ಸಮಿತಿ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ರಾಜೇಂದ್ರ ರಾಥೋಡ್ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದು, ಕೇವಲ ನೀರಿನ ಒತ್ತಡಕ್ಕೇ ರಸ್ತೆ ಈ ರೀತಿ ಬೃಹತ್ ತಗ್ಗಿನಂತೆ ಕುಸಿದರೆ ಇನ್ನು ಭವಿಷ್ಯದಲ್ಲಿ ಭಾರೀ ಮಳೆ, ನಿರಂತರ ವಾಹನ ಸಂಚಾರ ಮತ್ತು ರಸ್ತೆ ಕೆಲಸಗಳನ್ನು ಇದು ಹೇಗೆ ತಡೆದುಕೊಳ್ಳಲು ಸಾಧ್ಯ ಎಂದು ಕಳವಳ ವ್ಯಕ್ತಪಡಿಸಿದರು. ʼʼಸ್ಮಾರ್ಟ್ ಸಿಟಿ ಯೋಜನೆಯಡಿ 1,000 ಕೋಟಿ ರುಪಾಯಿ ವೆಚ್ಚದಲ್ಲಿ ನಡೆದಿರುವ ಹಲವು ಕಾಮಗಾರಿಗಳ ಗುಣಮಟ್ಟ ಬಗ್ಗೆ ಮೊದಲಿನಿಂದಲೂ ಗಂಭೀರ ಪ್ರಶ್ನೆಗಳು ಎದ್ದಿದ್ದು, ಈ ಹಿಂದೆ ಕಳಪೆ ನಿರ್ಮಾಣದ ಕುರಿತು ನಾವು ಆಯುಕ್ತರ ಗಮನಕ್ಕೆ ತಂದಿದ್ದರೂ ಅಧಿಕಾರಿಗಳು ಕೇವಲ ನೊಟೀಸ್‌ ನೀಡಿ ಕೈತೊಳೆದುಕೊಂಡಿದ್ದರು. ನಿರ್ಮಿಸಿದ ಕಲವೇ ವರ್ಷಗಳಲ್ಲಿ ಈ ರಸ್ತೆಯನ್ನು ಪದೇ ಪದೆ ರಿಪೇರಿ ಮಾಡಲಾಗುತಿತ್ತುʼʼ ಎಂದು ಅವರು ಆರೋಪಿಸಿದರು.

ಘಟನೆಯ ಗಂಭೀರತಯನ್ನು ಪರಿಗಣಿಸಿ, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ರಾಥೋಡ್ ಪ್ರಧಾನಿ ಕಚೇರಿಗೆ, ಕೇಂದ್ರ ನಗರಾಭಿವೃದ್ಧಿ ಸಚಿವರಿಗೆ ಹಾಗೂ ಮಧ್ಯ ಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಪ್ರಸ್ತುತ ಪಾಲಿಕೆಯು ಹಾನಿಗೊಳಗಾದ ರಸ್ತೆಯ ಭಾಗವನ್ನು ದುರಸ್ತಿ ಮಾಡಲು ಮುಂದಾಗಿದೆ.

ಜನಪ್ರತಿನಿಧಿಗಳ ಗಮನ ಸೆಳೆಯಲು ಹೊಂಡ ಬಿದ್ದ ರಸ್ತೆಗೆ ಪೂಜೆ ಮಾಡಿದ ಸಾರ್ವಜನಿಕರು; ವಿಡಿಯೋ ನೋಡಿ

ಅಧಿಕಾರಿಗಳಿಂದ ಪರಿಶೀಲನೆ

ವೈರಲ್ ವಿಡಿಯೊ ಹಾಗೂ ಸಾರ್ವಜನಿಕರ ತೀವ್ರ ಆಕ್ರೋಶದ ಬೆನ್ನಲೇ ಇಂದೋರ್ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಯೋಜನಾಧಿಕರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪೈಪ್‌ಲೈನ್ ಅಳವಡಿಸಿದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಲೋಪಕ್ಕೆ ಕಾರಣರಾದವರ ಮೇಲ್ವಿಚಾರಣೆ ನಡೆಸಿದ ಎಂಜಿನಿಯರ್‌ಗಳ ಮೇಲೆಯೂ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸ್ವಚ್ಛ ನಗರದ ಸಾಲಿನಲ್ಲಿ ಮೊದಲ ಸಾಲಿನಲ್ಲಿದ್ದ ಇಂದೋರ್‌ನಲ್ಲಿ ಇಂತಹ ಕಳಪೆ ಮೂಲಸೌಕರ್ಯ ಕಾಮುಗಾರಿ ನಡೆದಿರುವುದು ನಗರ ಪಾಲಿಕೆಗೆ ಭಾರಿ ಮುಜುಗರ ತಂದಿಟ್ಟಿದೆ.

ವೈರಲ್‌ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author