ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bridge Collapse: ಕುಸಿದ ಸೇತುವೆ... ಕಾರಿನಲ್ಲಿ ಸಿಲುಕಿದ ಮಗ... ಮತ್ತೊಂದೆಡೆ ತಾಯಿಯ ಗೋಳಾಟ! ಭಾರೀ ವೈರಲಾಗ್ತಿದೆ ಈ ಮನಕಲುಕುವ ವಿಡಿಯೊ

ಗುಜರಾತ್‌ನ ವಡೋದರಾ ಜಿಲ್ಲೆಯ ಗಂಭೀರಾ ಸೇತುವೆ(Bridge Collapse) ಕುಸಿದ ಪರಿಣಾಮ ಸೇತುವೆಯ ಮೇಲೆ ಚಲಿಸುತ್ತಿದ್ದ ವಾಹನಗಳು ನದಿಗೆ ಬಿದ್ದಿದ್ದು, ಈ ವೇಳೆ ಕಾರಿನೊಳಗೆ ಸಿಕ್ಕಿಹಾಕಿಕೊಂಡ ತನ್ನ ಮಗನನ್ನು ರಕ್ಷಿಸುವಂತೆ ಅಸಹಾಯಕ ತಾಯಿಯೊಬ್ಬಳು ಬೇಡಿಕೊಂಡಿದ್ದಾಳೆ. ಈ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರು ಮನಸ್ಸನ್ನು ಕಲುಕಿದೆ.

ತಾಯಿ-ಮಗನ ಈ ಮನಕಲುಕುವ ವಿಡಿಯೊ ಫುಲ್‌ ವೈರಲ್‌

Profile pavithra Jul 10, 2025 4:40 PM

ಅಹಮದಾಬಾದ್: ಗುಜರಾತ್‌ನ ವಡೋದರಾ ಜಿಲ್ಲೆಯ ಗಂಭೀರಾ ಸೇತುವೆ(Bridge Collapse) ಕುಸಿದ ಪರಿಣಾಮ ಸೇತುವೆಯ ಮೇಲೆ ಚಲಿಸುತ್ತಿದ್ದ ವಾಹನಗಳು ಆಯತಪ್ಪಿ ನದಿಗೆ ಬಿದ್ದಿವೆ. ಈ ಘಟನೆಯ ವೇಳೆ ಹಲವಾರು ವಾಹನಗಳು ನೀರಿನಲ್ಲಿ ಮುಳುಗಿವೆ. ಆ ಸಮಯದಲ್ಲಿ ಮುಳುಗುತ್ತಿರುವ ಕಾರಿನೊಳಗೆ ತನ್ನ ಮಗ ಸಿಲುಕಿಕೊಂಡಿದ್ದಾನೆ ಎಂದು ಅಸಹಾಯಕ ತಾಯಿಯೊಬ್ಬಳು ಸಹಾಯಕ್ಕಾಗಿ ಹತಾಶರಾಗಿ ಬೇಡಿಕೊಂಡಿದ್ದಾಳೆ. ಈ ಹೃದಯ ವಿದ್ರಾವಕ ಘಟನೆಯ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಕಣ್ಣಂಚು ಒದ್ದೆಯಾಗುವಂತೆ ಮಾಡಿದೆ.

ವೈರಲ್ ಆದ ವಿಡಿಯೊದಲ್ಲಿ ವಾಹನವು ತುಂಬಿ ಹರಿಯುತ್ತಿರುವ ಮಹಿಸಾಗರ್ ನದಿಗೆ ಬಿದ್ದ ದೃಶ್ಯ ಸೆರೆಯಾಗಿದೆ.ವರದಿ ಪ್ರಕಾರ, ಮಹಿಳೆ, ಆಕೆಯ ಪತಿ, ಮಗ, ಮಗಳು ಮತ್ತು ಅಳಿಯ ಸೇರಿದಂತೆ ಇಡೀ ಕುಟುಂಬವು ಬಾಗ್ದಾನಾಕ್ಕೆ ತೆರಳುತ್ತಿದ್ದಾಗ ಸೇತುವೆ ಕುಸಿದು ಬಿದ್ದಿದೆ. ತಾಯಿ ಕಿಟಕಿ ಮುರಿದು ಕಾರಿನೊಳಗಿನಿಂದ ಹೊರಗೆ ಬರುವಲ್ಲಿ ಯಶಸ್ವಿಯಾಗಿದ್ದಾಳೆ. ಆದರೆ ದುರಂತವೆಂದರೆ, ಕಾರು ಸ್ವಯಂಚಾಲಿತವಾಗಿ ಲಾಕ್ ಆಗಿ, ಆಕೆಯ ಕುಟುಂಬದ ಉಳಿದವರು ನದಿಯಲ್ಲಿ ಮುಳುಗುತ್ತಿದ್ದ ಕಾರಿನ ಒಳಗೆ ಸಿಲುಕಿಕೊಂಡಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಬುಧವಾರ (ಜುಲೈ 9) ಬೆಳಿಗ್ಗೆ ಗಂಭೀರ ಸೇತುವೆಯ ಹಳೆಯದಾದ ಭಾಗ ಕುಸಿದ ನಂತರ ಹಲವಾರು ವಾಹನಗಳು ನದಿಗೆ ಬಿದ್ದಿವೆ. ಈ ಘಟನೆ ನಡೆದ ನಂತರ ಒಂಬತ್ತು ಜನರನ್ನು ಸ್ಥಳದಿಂದ ರಕ್ಷಿಸಲಾಗಿದೆ. ಆದರೆ ಈ ದುರಂತದಲ್ಲಿ ಇಬ್ಬರು ಸಹೋದರರು ಸೇರಿದಂತೆ ಹತ್ತು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಸುಮಾರು 900 ಮೀಟರ್ ಉದ್ದದ ಸೇತುವೆಯ ಎರಡು ಕಂಬಗಳನ್ನು ಸಂಪರ್ಕಿಸುವ ಸ್ಲ್ಯಾಬ್ ಕುಸಿದು ಬಿದ್ದಿದ್ದು, ಕಾರುಗಳು, ವ್ಯಾನ್‌ಗಳು, ಟ್ರಕ್‌ಗಳು, ಒಂದು ಆಟೋರಿಕ್ಷಾ ಮತ್ತು ಒಂದು ದ್ವಿಚಕ್ರ ವಾಹನ ನೀರಿಗೆ ಬಿದ್ದಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಚಿಕ್ಕಮ್ಮನನ್ನೇ ಮದುವೆಯಾಗುವಂತೆ ಯುವಕನಿಗೆ ಒತ್ತಾಯಿಸಿದ ಗ್ರಾಮಸ್ಥರು; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ!

ಗುಜರಾತ್ ಆರೋಗ್ಯ ಸಚಿವ ಋಷಿಕೇಶ್ ಪಟೇಲ್, ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿ, 1985 ರಲ್ಲಿ ಉದ್ಘಾಟನೆಯಾದ ಈ ಸೇತುವೆ ದಶಕಗಳ ಕಾಲ ಸ್ಥಗಿತಗೊಂಡಿತ್ತು ಮತ್ತು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಈಗ ಕುಸಿತ ಸಂಭವಿಸಿದೆ ಎಂದು ಹೇಳಿದ್ದಾರೆ. ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿ, ಮೃತರ ಕುಟುಂಬಕ್ಕೆ ಕ್ರಮವಾಗಿ 2 ಲಕ್ಷ ಮತ್ತು 4 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.