ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜನಪ್ರತಿನಿಧಿಗಳ ಗಮನ ಸೆಳೆಯಲು ಹೊಂಡ ಬಿದ್ದ ರಸ್ತೆಗೆ ಪೂಜೆ ಮಾಡಿದ ಸಾರ್ವಜನಿಕರು; ವಿಡಿಯೋ ನೋಡಿ

Viral Video: ಪುಣೆಯ ಪ್ರಮುಖ ಐಟಿ ಹಬ್ ಗಳಾದ ಹಿಂಜವಡಿ,ಮಾನ್ ಮತ್ತು ಮರುಂಜಿಯಲ್ಲಿ ರಸ್ತೆ ಗುಂಡಿಯ ಹಾವಳಿ ಹೆಚ್ಚಾಗಿದೆ. ಹೀಗಾಗಿ ಜನಪ್ರತಿನಿಧಿಗಳ ಗಮನ ಸೆಳೆಯಲೆಂದು ಅಲ್ಲಿನ ನಾಗರಿಕರು ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ರಸ್ತೆ ಗುಂಡಿಗಳಿಗೆ 'ಪೂಜೆ' ಮತ್ತು 'ಆರತಿ' ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಹೊಂಡ ಬಿದ್ದ ರಸ್ತೆಗೆ 'ಪೂಜೆ-ಆರತಿ' ಮಾಡಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು

ಜನಪ್ರತಿನಿಧಿಗಳ ಗಮನ ಸೆಳೆಯಲು ಹೊಂಡ ಬಿದ್ದ ರಸ್ತೆಗೆ ಪೂಜೆ- ಆರತಿ ಮಾಡಿ ಪ್ರತಿಭಟಿಸಿದ ಸಾರ್ವಜನಿಕರು -

Profile
Pushpa Kumari Aug 14, 2026 9:01 PM

ಪುಣೆ,ಆ.14: ಇಂದು ನಗರ ಪ್ರದೇಶದಲ್ಲೂ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಪುಣೆಯ ಪ್ರಮುಖ ಐಟಿ ಹಬ್ ಗಳಾದ ಹಿಂಜವಡಿ,ಮಾನ್ ಮತ್ತು ಮರುಂಜಿಯಲ್ಲಿ ರಸ್ತೆ ಗುಂಡಿಯ ಹಾವಳಿ ಹೆಚ್ಚಾಗಿದೆ. ಹೀಗಾಗಿ ಜನಪ್ರತಿನಿಧಿಗಳ ಗಮನ ಸೆಳೆಯ ಲೆಂದು ಅಲ್ಲಿನ ನಾಗರಿಕರು ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ರಸ್ತೆ ಗುಂಡಿಗಳಿಗೆ 'ಪೂಜೆ' ಮತ್ತು 'ಆರತಿ' ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಆಡಳಿತದ ಗಮನ ಸೆಳೆಯಲು ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆಯಲ್ಲಿದ್ದ ಗುಂಡಿ ಗಳಿಗೆಲ್ಲಾ ಹೂವಿನ ಹಾರವನನ್ನು ಹಾಕಿ ಆರತಿ’ ಬೆಳಗುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಸಿಟಿ ಪ್ರದೇಶದಲ್ಲೂ ರಸ್ತೆ ಸಮಸ್ಯೆ ಇದ್ದು ಆಡಳಿತದ ಗಮನ ಸೆಳೆಯುವ ಉದ್ದೇಶದಿಂದ ಈ ಪ್ರತಿಭಟನೆ ನಡೆಸಲಾಯಿತು.

ವಿಡಿಯೋ ನೋಡಿ:



ಪ್ರತಿಷ್ಟಿತ ಐಟಿ ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ಪ್ರದೇಶದ ಜನರಿಂದ ಭಾರೀ ಪ್ರಮಾಣದ ತೆರಿಗೆ ಸಂಗ್ರಹ ವಾಗುತ್ತಿದ್ದರೂ ಇಲ್ಲಿನ ಮೂಲಭೂತ ಸಮಸ್ಯೆಗಳು ಬಗೆಹರಿದಿಲ್ಲ. ಇಲ್ಲಿನ ನಿವಾಸಿಗಳು ಮತ್ತು ಪ್ರಯಾಣಿಕರಿಂದ ಪದೇ ಪದೇ ದೂರುಗಳು ಕೇಳಿ ಬಂದರೂ ಗುಂಡಿಗಳ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಟೀಕೆ ವ್ಯಕ್ತ ಪಡಿಸಿದ್ದಾರೆ.

ಮಳೆಗಾಲದಲ್ಲಿ ಈ ಪ್ರದೇಶಗಳು ಪದೇ ಪದೇ ಒಳಚರಂಡಿ ಸಮಸ್ಯೆಗಳು ಉಂಟು ಮಾಡುತ್ತಿವೆ. ಸಣ್ಣ ಮಳೆ ಬಂದರೂ ರಸ್ತೆಗಳಲ್ಲಿ ನೀರು ನಿಂತು ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಪ್ರತಿದಿನ ಸಂಚರಿಸುವ ಐಟಿ ಉದ್ಯೋಗಿಗಳು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿ ಸುತ್ತಿದ್ದಾರೆ. ಪರಿಸ್ಥಿತಿ ಇನ್ನಷ್ಟು ಹದಗೆಡುವ ಮೊದಲು ಆಡಳಿತವು ತಕ್ಷಣ ಕ್ರಮ ಕೈಗೊಂಡು ಹಾನಿಗೊಳಗಾದ ರಸ್ತೆಗಳನ್ನು ದುರಸ್ತಿ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಜನಪ್ರತಿನಿಧಿಗಳನ್ನು ಟೀಕೆ ಮಾಡಿದರೆ ಮಾತ್ರ ಬುದ್ದಿ ಬರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಗರ ಪ್ರದೇಶ ಎಷ್ಟೇ ಅಭಿವೃದ್ಧಿ ಯಾದರೂ ರಸ್ತೆ ಗುಂಡಿಗೆ ಪರಿಹಾರ ಸಿಕ್ಕಿಲ್ಲ ಅಂದರು.