ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾರಿನ ಚಕ್ರದಡಿ ಸಿಲುಕಿದ್ದ ನಾಯಿಮರಿಗೆ ಮರುಜೀವ ನೀಡಿದ ಡೆಲಿವರಿ ಬಾಯ್: ಇವರಿಬ್ಬರ ಅಪರೂಪದ ಸ್ನೇಹಕ್ಕೆ ಮನಸೋತ ನೆಟ್ಟಿಗರು!

Viral News: ಮುಂಬೈ ನಲ್ಲಿ ನಡೆದ ಒಂದು ಸುಂದರ ಘಟನೆಯೂ ಎಲ್ಲರ ಹೃದಯ ಗೆದ್ದಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ನಾಯಿಮರಿಯೊಂದಕ್ಕೆ ಆರೈಕೆ ಮಾಡಿ ಡೆಲಿವರಿ ಬಾಯ್ ಯೊಬ್ಬರು ಮರುಜೀವ ನೀಡಿದ್ದಾರೆ. ಅಷ್ಟೇ ಅಲ್ಲ, ಈಗ ಆ ನಾಯಿಮರಿಯೇ ಅವರ ಆತ್ಮೀಯ ಸ್ನೇಹಿತನಾಗಿ ಬಿಟ್ಟಿದೆ. ಲಿಂಕ್ಡ್‌ಇನ್ ಬಳಕೆದಾರ ರೋಶನ್ ಮ್ಹಾತ್ರೆ ಹೃದಯಸ್ಪರ್ಶಿ ದೃಶ್ಯ ಹಂಚಿಕೊಂಡಿದ್ದಾರೆ.

ಕಾರಿನ ಚಕ್ರದಡಿ ಸಿಲುಕಿದ್ದ ನಾಯಿಮರಿಗೆ ಮರುಜೀವ ನೀಡಿದ ಡೆಲಿವರಿ ಬಾಯ್

ಮುಂಬೈ,ಅ.15: ಕೆಲವೊಮ್ಮೆ ನಾವು ಮಾಡುವ ದಯೆಯ ಕೆಲಸಗಳು ನಮ್ಮನ್ನೇ ತೃಪ್ತಗೊಳಿಸುವ ಜೊತೆಗೆ ಮನಸ್ಸಿಗೂ ಅತೀ ನೆಮ್ಮದಿಯನ್ನು ನೀಡುತ್ತವೆ. ಅಂತಹದ್ದೇ ಮುಂಬೈನಲ್ಲಿ ನಡೆದ ಒಂದು ಸುಂದರ ಘಟನೆಯೂ ಎಲ್ಲರ ಹೃದಯ ಗೆದ್ದಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ನಾಯಿಮರಿಯೊಂದಕ್ಕೆ  ಆರೈಕೆ ಮಾಡಿ ಡೆಲಿವರಿ ಬಾಯ್‌ಯೊಬ್ಬರು ಮರುಜೀವ ನೀಡಿದ್ದಾರೆ. ಅಷ್ಟೇ ಅಲ್ಲ, ಈಗ ಆ ನಾಯಿಮರಿಯೇ ಅವರ ಆತ್ಮೀಯ ಸ್ನೇಹಿತನಾಗಿ ಬಿಟ್ಟಿದೆ. ಲಿಂಕ್ಡ್‌ಇನ್ ಬಳಕೆದಾರ ರೋಶನ್ ಮ್ಹಾತ್ರೆ ಹೃದಯಸ್ಪರ್ಶಿ ದೃಶ್ಯ (Viral News) ಹಂಚಿಕೊಂಡಿದ್ದಾರೆ.

ಡೆಲಿವರಿ ಬಾಯ್‌ವೊಬ್ಬರು ಬ್ಲಿಂಕಿಟ್ ವಸ್ತುಗಳನ್ನು ತಲುಪಿಸಲು ಬಂದಾಗ ಗ್ರಾಹಕರೊಬ್ಬರು ಸಿಬ್ಬಂದಿಯ ಬೈಕ್ ಮೇಲೆ ಕುಳಿತಿದ್ದ ಮುದ್ದಾದ ನಾಯಿಮರಿಯನ್ನು ಕಂಡು ಅಚ್ಚರಿಗೊಂಡಿದ್ದಾರೆ. ಬಳಿಕ ಆ ನಾಯಿಮರಿ ಅವರ ಸ್ನೇಹಿತನಾದ ಕಥೆ ಕೇಳಿ ಭಾವುಕರಾಗಿದ್ದಾರೆ.

ಕಾರಿನ ಟೈರ್ ಅಡಿಯಲ್ಲಿ ಸಿಲುಕಿ ಗಾಯಗೊಂಡಿದ್ದ ನಾಯಿಮರಿಯನ್ನು ಸ್ಥಳೀಯ ಗೋದಾಮಿ ನಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ರಕ್ಷಿಸಿ ಆರೋಗ್ಯಕ್ಕೆ ಮರಳಿಸಿದ್ದಾರೆ.‌ ಅಷ್ಟೇ ಅಲ್ಲ, ತಮ್ಮ ಸ್ವಂತ ಖರ್ಚಿನಲ್ಲಿ ಅದಕ್ಕೆ ಚಿಕಿತ್ಸೆ ನೀಡಿ ಆರೋಗ್ಯಯುತವಾಗಿ ನೋಡಿಕೊಂಡಿದ್ದಾರೆ. ಅಂದಿನಿಂದ ಆ ನಾಯಿಮರಿ ಅವರ ಜೊತೆಗೆ  ಆಶ್ರಯ ಪಡೆದಿದ್ದು, ಡೆಲಿವರಿ ಬಾಯ್ಸ್ ಬೈಕ್ ಹತ್ತಿ ಅವರ ಜೊತೆಯೇ ಸಂಚಾರ ಮಾಡುತ್ತಿದೆ.

Viral Video: ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ: ಇದು ದೇವರ ನಾಡಿನ ಅಯ್ಯಪ್ಪ ಸ್ವಾಮಿ ದೇವಾಲಯದ ವಿಶಿಷ್ಟ ಆಚರಣೆ

ಮುಂಬೈ ಮೂಲದ ವೃತ್ತಿಪರರೊಬ್ಬರು ಲಿಂಕ್ಡ್‌ಇನ್‌ನಲ್ಲಿ ಈ ಅನಿರೀಕ್ಷಿತ ಭೇಟಿಯನ್ನು ಹಂಚಿಕೊಂಡಿದ್ದಾರೆ. ತನ್ನ ಬ್ಲಿಂಕಿಟ್ ಆರ್ಡರ್ ತಲುಪಿದಾಗ ಪ್ರಯಾಣಿಕನೊಂದಿಗೆ ಬಂದ ಅತಿಥಿ ಕಂಡು ಆಶ್ಚರ್ಯವಾದೆ. ಸಿಬ್ಬಂದಿಯೂ ಬೈಕ್‌ನಲ್ಲಿ ನಾಯಿಮರಿಯನ್ನು ಕೂರಿಸಿದ್ದರು. ಇವರಿಬ್ಬರ ಸ್ನೇಹಕ್ಕೆ ಸರಿಸಾಟಿ ಯಾರಿಲ್ಲ ಎಂದು ಬರೆದಿದ್ದರು‌.

ಸೋಷಿಯಲ್‌ ಮೀಡಿಯಾದಲ್ಲಿ ಈ ಘಟನೆಯ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಡೆಲಿವರಿ ಸಿಬ್ಬಂದಿಯ ಮಾನವೀಯತೆಯನ್ನು ಹೊಗಳಿದ್ದಾರೆ. ಬಳಕೆದಾರರೊಬ್ಬರು ಈ ಪೋಸ್ಟ್ ನನ್ನ ದಿನವನ್ನು ಉತ್ತಮಗೊಳಿಸಿತು. ತುಂಬಾ ಹೃದಯಸ್ಪರ್ಶಿಯಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.‌