ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಿತ್ತಳೆ ಹಣ್ಣಿನ ವ್ಯಾಪಾರಿಯ ಬಳಿ‌ ಐಫೋನ್ 17 ಪ್ರೊ ಮ್ಯಾಕ್ಸ್; ನೆಟ್ಟಿಗರು ಫುಲ್ ಶಾಕ್!

Viral Video: ಆಪಲ್‌ನ ಹೊಸ ಐಫೋನ್ 17 ಪ್ರೊ ಮ್ಯಾಕ್ಸ್ ಖರೀದಿ ಮಾಡುವುದು ಹೆಚ್ಚಿನವರ ಕನಸು ಆಗಿರುತ್ತದೆ. ಇದರ ಬೆಲೆ ದುಬಾರಿಯಾಗಿರುವ ಕಾರಣ ಐಟಿ ಉದ್ಯೋಗಿಗಳೂ ಕೂಡ ಈ ಫೋನ್ ಖರೀದಿಸುವ ಮೊದಲು ಹಲವು ಭಾರಿ ಯೋಚಿಸುತ್ತಾರೆ. ಆದರೆ ದೆಹಲಿಯಲ್ಲಿ‌ ಕಿತ್ತಳೆ ಹಣ್ಣುಗಳನ್ನು ಮಾರಾಟ ಮಾಡುವ ಬೀದಿ ವ್ಯಾಪಾರಿಯೊಬ್ಬರು ಆಪಲ್‌ನ ಹೊಸ ಐಫೋನ್ 17 ಪ್ರೊ ಮ್ಯಾಕ್ಸ್ ಅನ್ನು ಬಳಸುತ್ತಿರುವುದು ಕಂಡುಬಂದಿದೆ..

ಹಣ್ಣು ವ್ಯಾಪಾರಿಯ ಕೈಯಲ್ಲಿ ಐಫೋನ್ 17 ಪ್ರೊ ಮ್ಯಾಕ್ಸ್‌

ನವದೆಹಲಿ,ಫೆ.13: ಇತ್ತೀಚೆಗೆ ದುಬಾರಿ ಬೆಲೆಯ ಫೋನ್ ಗಳು ಮಾರುಕಟ್ಟೆಗೆ ಬಂದಿವೆ. ಅದರಲ್ಲೂ ಆಪಲ್‌ನ ಹೊಸ ಐಫೋನ್ 17 ಪ್ರೊ ಮ್ಯಾಕ್ಸ್ ಖರೀದಿ ಮಾಡುವುದು ಹೆಚ್ಚಿನವರ ಕನಸು ಆಗಿ ರುತ್ತದೆ. ಇದರ ಬೆಲೆ ದುಬಾರಿಯಾಗಿರುವ ಕಾರಣ ಐಟಿ ಉದ್ಯೋಗಿಗಳೂ ಕೂಡ ಈ ಫೋನ್ ಖರೀದಿ ಸುವ ಮೊದಲು ಹಲವು ಭಾರಿ ಯೋಚಿಸುತ್ತಾರೆ. ಆದರೆ ದೆಹಲಿಯಲ್ಲಿ‌ ಕಿತ್ತಳೆ ಹಣ್ಣುಗಳನ್ನು ಮಾರಾಟ ಮಾಡುವ ಬೀದಿ ವ್ಯಾಪಾರಿಯೊಬ್ಬರು ಆಪಲ್‌ನ ಹೊಸ ಐಫೋನ್ 17 ಪ್ರೊ ಮ್ಯಾಕ್ಸ್ ಅನ್ನು ಬಳಸುತ್ತಿರುವುದು ಕಂಡುಬಂದಿದೆ. ಸದ್ಯ ಇದರ ವಿಡಿಯೊ‌ ವೈರಲ್ (Viral Video) ಆಗಿದೆ.

ಕಿತ್ತಳೆ ಹಣ್ಣುಗಳನ್ನು ಮಾರಾಟ ಮಾಡುವ ಬೀದಿ ವ್ಯಾಪಾರಿಯೊಬ್ಬರು ರಸ್ತೆಬದಿಯಲ್ಲಿ ಕೆಲಸ ಮಾಡುವಾಗ ಆಪಲ್‌ನ ಹೊಸ ಐಫೋನ್ 17 ಪ್ರೊ ಮ್ಯಾಕ್ಸ್ ಬಳಕೆ ಮಾಡಿದ್ದಾರೆ. ಹಣ್ಣು ಮಾರಾಟಗಾರನೊಬ್ಬ ಇಂತಹ ದುಬಾರಿ ಮೌಲ್ಯದ ಸಾಧನವನ್ನು ನಿರ್ವಹಿಸುತ್ತಿರುವುದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ವ್ಯಾಪಾರಿಯೂ ದುಬಾರಿ 'ಕಾಸ್ಮಿಕ್ ಆರೆಂಜ್' ಬಣ್ಣದ ಫೋನ್‌ ಬಳಸಿದ್ದಾರೆ.

ವಿಡಿಯೋ ನೋಡಿ:



ದಿನವಿಡೀ ಕಷ್ಟಪಟ್ಟು ಕೆಲಸ ಮಾಡುವ ಕಂಪನಿ ಉದ್ಯೋಗಿಗಳಿಗೆ ಐಫೋನ್ ಖರೀದಿ ಎಂಬುದು ಕನಸು.‌ ಸದ್ಯ ಹಲವಾರು ಬಳಕೆದಾರರು ಆ ವ್ಯಕ್ತಿಯ ಪ್ರಯತ್ನ ಮತ್ತು ಯಶಸ್ಸಿಗಾಗಿ ಹೊಗಳಿದರೆ, ಕೆಲವರು ವೀಡಿಯೊದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಬಳಕೆದಾರರೊಬ್ಬರು ಆತ ತನ್ನ ಸ್ವಂತ ಉದ್ಯಮದ ಮಾಲೀಕ ಎಂದು ಬರೆದುಕೊಂಡಿದ್ದಾರೆ

Viral Video: ಅಯ್ಯೊಯ್ಯೋ ಹಸಿಯಾಗಿ ಇದೆಲ್ಲಾ ತಿಂತಾರಾ? ರೈಲಿನಲ್ಲಿ ವಿಚಿತ್ರ ಆಹಾರ ಸೇವನೆ ಮಾಡಿದ ವ್ಯಕ್ತಿ! ವಿಡಿಯೋ ನೋಡಿ

ಕೆಲವರು ದೆಹಲಿಯ ಮಾರುಕಟ್ಟೆಗಳಲ್ಲಿ ಐಫೋನ್ 17 ಪ್ರೊ ಮ್ಯಾಕ್ಸ್‌ನಂತೆ ಕಾಣುವ ಕವರ್‌ಗಳು ಸುಲಭವಾಗಿ ಸಿಗುತ್ತವೆ. ಹೀಗಾಗಿ ಇದು ನಕಲಿ ಇರಬಹುದು ಎಂದು ಕೆಲವರು ಕಾಮೆಂಟ್ ಮಾಡಿ ದ್ದಾರೆ. ಇನ್ನು ಕೆಲವರು ವೈರಲ್ ಆಗುವ ಉದ್ದೇಶದಿಂದ ಫೋನ್ ನೀಡಿ ಈ ವಿಡಿಯೋ ಚಿತ್ರೀಕರಿಸಿರ ಬಹುದು ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಈ ಫೋನ್ ಅಸಲಿಯಾಗಿದ್ದರೆ, ಇದರ ಬೆಲೆ ಸುಮಾರು 1,50,000 ಕ್ಕೂ ಹೆಚ್ಚು ಮೊತ್ತ ಇರಬಹುದು