ಜೈಪುರ, ಮೇ 1: ಇಲ್ಲಿನ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 2026 ರ 43 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR vs DC) ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ(Vaibhav Sooryavanshi) ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ನಂತರ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವೇಗಿ ಕೈಲ್ ಜೇಮಿಸನ್(Kyle Jamieson) ಮಾಡಿದ ಆಕ್ರಮಣಕಾರಿ ಸಂಭ್ರಮಾಚರಣೆಯ ವಿಡಿಯೊ ವೈರಲ್ ಆಗಿದೆ.
ಜೇಮಿಸನ್ ಎಸೆದ ಮೊದಲ ಓವರ್‌ನ 4ನೇ ಎಸೆತದಲ್ಲಿ ವೈಭವ್ ಸೂರ್ಯವಂಶಿ ಬೌಂಡರಿ ಬಾರಿಸಿದರು. ಆದರೆ ಮುಂದಿನ ಎಸೆತವನ್ನು ಯಾರ್ಕರ್ ಎಸೆದು ಸೂರ್ಯವಂಶಿಯನ್ನು ಕ್ಲೀನ್ ಬೌಲ್ಡ್ ಮಾಡಿದರು. ಔಟ್ ಮಾಡಿದ ಖುಷಿಯಲ್ಲಿ ಜೇಮಿಸನ್ ಚೀರಾಡುತ್ತ ಅತಿಯಾದ ಸಂಭ್ರಮಾಚರಣೆ ಮಾಡಿದರು. ಅವರ ಈ ಸಂಭ್ರಮಾರಣೆಗೆ ಐಪಿಎಲ್ ಮಂಡಳಿ ದಂಡ ವಿಧಿಸುವ ಸಾಧ್ಯತೆಯೂ ಇದೆ.
ಸೂರ್ಯವಂಶಿ ಕೇವಲ 4 ರನ್‌ಗೆ ಆಟ ಮುಗಿಸಿದರು. ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಅವರು ಈ ಋತುವಿನ ಮೊದಲ ಪಂದ್ಯವಾಡಿದ ಮಿಚೆಲ್ ಸ್ಟಾರ್ಕ್‌ಗೆ ಸಿಕ್ಸರ್ ಬಾರಿಸುವ ಮೂಲಕ ವೆಲ್‌ಕಮ್ ಮಾಡಿದರೂ ಅವರ ಆಟ ಹೆಚ್ಚು ಹೊತ್ತು ಸಾಗಲಿಲ್ಲ. ಇದೇ ಓವರ್‌ನ ಮೂರನೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಅವರ ಆಟ ಏಕೈಕ ಸಿಕ್ಸರ್‌ಗಷ್ಟೇ ಸೀಮಿತವಾಯಿತು.
ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಡೆಲ್ಲಿ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಮಿಚೆಲ್ ಸ್ಟಾರ್ಕ್, ಶ್ರೀಲಂಕಾದ ಆಟಗಾರರಾದ ಪಾತುಮ್ ನಿಶಾಂಕ, ದುಶ್ಮಂತ ಚಮೀರ ಆಡುವ ಬಳಗದಲ್ಲಿ ಕಾಣಿಸಿಕೊಂಡರು.
ಸ್ಟಾರ್ಕ್ ಅವರು ರಾಜಸ್ಥಾನ್ ವಿರುದ್ಧ ಆಡುವ ಬಗ್ಗೆ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಎಕ್ಸ್‌ನಲ್ಲಿ ಒಂದು ದಿನ ಮೊದಲೇ ವಿಡಿಯೊ ಹಂಚಿಕೊಳ್ಳುವ ಮೂಲಕ ಸುಳಿವು ನೀಡಿತ್ತು. ಡೆಲ್ಲಿ ಈ ಪಂದ್ಯಕ್ಕೆ ಡೇವಿಡ್ ಮಿಲ್ಲರ್ ಅವರನ್ನು ಕೈಬಿಟ್ಟಿತು.
ಉಭಯ ಆಡುವ ಬಳಗ
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್(ವಿಕೆಟ್ ಕೀಪರ್), ಪಾತುಮ್ ನಿಸ್ಸಂಕಾ, ನಿತೀಶ್ ರಾಣಾ, ಸಮೀರ್ ರಿಜ್ವಿ, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್(ನಾಯಕ), ಅಶುತೋಷ್ ಶರ್ಮಾ, ಕೈಲ್ ಜೇಮಿಸನ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಟಿ ನಟರಾಜನ್.
ಡೆಲ್ಲಿ ಕ್ಯಾಪಿಟಲ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್: ಡೇವಿಡ್ ಮಿಲ್ಲರ್, ವಿಪ್ರಜ್ ನಿಗಮ್, ಕರುಣ್ ನಾಯರ್, ಅಭಿಷೇಕ್ ಪೊರೆಲ್, ಔಕಿಬ್ ನಬಿ ದಾರ್.
ಶಿವಂ ಮಾವಿ ಬದಲಿಗೆ ಸನ್‌ರೈಸರ್ಸ್ ಸೇರಿದ 19 ವರ್ಷದ ಯುವ ವೇಗಿ ಅಂಬ್ರೀಶ್
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್(ವಿ.ಕೀ.), ರಿಯಾನ್ ಪರಾಗ್(ನಾಯಕ), ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಶುಭಂ ದುಬೆ, ಜೋಫ್ರಾ ಆರ್ಚರ್, ರವಿ ಬಿಷ್ಣೋಯ್, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ.
ರಾಜಸ್ಥಾನ್ ರಾಯಲ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್: ಆಡಮ್ ಮಿಲ್ನೆ, ದಸುನ್ ಶನಕ, ರವಿ ಸಿಂಗ್, ಯಶ್ ರಾಜ್ ಪುಂಜಾ, ತುಷಾರ್ ದೇಶಪಾಂಡೆ.