ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಖಮೇನಿ ಚಿತ್ರವನ್ನು ಸುಟ್ಟು ಸಿಗರೇಟ್ ಹೊತ್ತಿಸಿ ಸಂಭ್ರಮಿಸಿದ ಇರಾನಿನ ನಿರಾಶ್ರಿತ ಮಹಿಳೆ

ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ದಾಳಿ ನಡೆಸಿದ ಬಳಿಕ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಸಾವನ್ನಪ್ಪಿರುವುದಾಗಿ ಘೋಷಿಸಲಾಗಿದೆ. ಇದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಇದೀಗ ಮಹಿಳೆಯೊಬ್ಬರು ಸಂಭ್ರಮಾಚರಣೆ ಮಾಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಇರಾನ್ (Iran) ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ (Israel) ಮತ್ತು ಯುಎಸ್ (US) ಸೇನಾ ಪಡೆ ಶನಿವಾರ ನಡೆಸಿದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei,) ಅವರು ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಮಹಿಳೆಯೊಬ್ಬರು ಸಂಭ್ರಮಿಸಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ. ಮಹಿಳೆಯು ಖಮೇನಿಯ ಚಿತ್ರವನ್ನು ಸುಟ್ಟು ಅದರಲ್ಲಿ ಸಿಗರೇಟ್ ಹೊತ್ತಿಸಿ ಸಂಭ್ರಮಿಸಿದ ವಿಡಿಯೊ ಇದಾಗಿದೆ. ಖಮೇನಿ ಸಾವಿನ ಸುದ್ದಿ ಕೇಳಿ ಕೆಲವರು ಪ್ರತಿಭಟನೆ ನಡೆಸಿದರೆ ಇನ್ನು ಕೆಲವೆಡೆ ಜನರು ಸಂಭ್ರಮಿಸಿದ್ದಾರೆ.

ಮೊರ್ಟಿಸಿಯಾ ಆಡಮ್ಸ್ ಎಂಬ ಹೆಸರಿನ ಮಹಿಳೆಯೊಬ್ಬರು ಭಾನುವಾರ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಅಯತೊಲ್ಲಾ ಅಲಿ ಖಮೇನಿಯವರ ಚಿತ್ರದೊಂದಿಗೆ ತಮ್ಮ ಸಿಗರೇಟ ಅನ್ನು ಹೊತ್ತಿಸುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಕೆನಡಾದಲ್ಲಿ ನೆಲೆಸಿರುವ ಅವರು ಇರಾನ್ ಆಡಳಿತ ವಿರೋಧಿ ರಾಲಿಯಲ್ಲಿ ಭಾಗವಹಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.



ಶನಿವಾರವೇ ಇರಾನ್ ಸುಪ್ರೀಂ ನಾಯಕ ಖಮೇನಿ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಮಾಡಿದ್ದೇಕೆ?

ಇರಾನಿನ ನಿರಾಶ್ರಿತ ಮಹಿಳೆ ಎಂದು ಹೇಳಿರುವ ಮೊರ್ಟಿಸಿಯಾ ಆಡಮ್ಸ್, ಈ ವಿಡಿಯೊದೊಂದಿಗೆ "ನಿಮ್ಮ ಸಮಾಧಿಯ ಮೇಲೆ ನಾವು ನೃತ್ಯ ಮಾಡುತ್ತೇವೆ ಎಂದು ನಾನು ಹೇಳಿದೆ, ಅಲ್ಲವೇ?" ಎಂದು ಬರೆದಿದ್ದರೆ, ಇನ್ನೊಂದು ಪೋಸ್ಟ್‌ನಲ್ಲಿ, ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದಂತೆ, ಅವರು ಇಲಿಯಂತೆ ಸತ್ತರು ಎಂದು ತಿಳಿಸಿದ್ದಾರೆ.



ಆಡಮ್ಸ್ ಅವರು ಕಳೆದ ಜನವರಿಯಲ್ಲಿ ಖಮೇನಿಯ ಚಿತ್ರಕ್ಕೆ ಬೆಂಕಿ ಹಚ್ಚಿ ಅದರಿಂದ ತಮ್ಮ ಸಿಗರೇಟನ್ನು ಹೊತ್ತಿಸಿರುವ ವಿಡಿಯೊವನ್ನು ಹಂಚಿಕೊಂಡಿದ್ದರು. ಈ ವಿಡಿಯೊ ಇರಾನ್‌ನಲ್ಲಿ ವರ್ಷಗಳಲ್ಲಿ ನಡೆದ ಅತಿದೊಡ್ಡ ಸರ್ಕಾರಿ ವಿರೋಧಿ ಪ್ರದರ್ಶನಗಳ ನಿರ್ಣಾಯಕ ಚಿತ್ರಗಳಲ್ಲಿ ಒಂದು ಎಂದು ಗುರುತಿಸಲಾಗಿತ್ತು.

ಇರಾನ್‌ ಮೇಲೆ ಇಸ್ರೇಲ್-ಅಮೆರಿಕ ಜಂಟಿ ದಾಳಿ: ದಶಕಗಳ ಹಿಂದಿನ ಬಾಬಾ ವಂಗಾ ಭವಿಷ್ಯ ನಿಜವಾಗುತ್ತಿದೆಯೇ?

ಭಿನ್ನ ಮತೀಯಳಾಗಿರುವುದರಿಂದ ಇರಾನ್‌ನಲ್ಲಿ ಸುರಕ್ಷತೆ ಇರಲಿಲ್ಲ. ಹೀಗಾಗಿ ಟರ್ಕಿ ಪ್ರಯಾಣಿಸಿರುವುದು ಒಂದು ಭಯಾನಕ ಅನುಭವ ಎಂದು ಅವರು ಹೇಳಿದ್ದರು. ಸುರಕ್ಷತಾ ಕಾರಣಗಳಿಗಾಗಿ ತಮ್ಮ ನಿಜವಾದ ಹೆಸರನ್ನು ಬಳಸುವುದಿಲ್ಲ ಎಂದು ಹೇಳಿರುವ ಅವರನ್ನು ಟರ್ಕಿಯಲ್ಲಿ ಬಂಧಿಸಿ, ನಿಂದಿಸಲಾಗಿತ್ತು ಎಂದು ತಿಳಿಸಿದ್ದಾರೆ. ಈಗ ಕೆನಡಾದಲ್ಲಿರುವ ಅವರು ವಿದ್ಯಾರ್ಥಿ ವೀಸಾವನ್ನು ಪಡೆದುಕೊಂಡಿದ್ದು, ಟೊರೊಂಟೊದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ಇಸ್ರೇಲ್ ಮತ್ತು ಯುಎಸ್ ನಡೆಸಿದ ದಾಳಿಯಲ್ಲಿ ಶನಿವಾರ 86 ವರ್ಷದ ಅಲಿ ಖಮೇನಿ ಸಾವನ್ನಪ್ಪಿದ್ದಾರೆ. ಟೆಹ್ರಾನ್‌ನಲ್ಲಿರುವ ಖಮೇನಿಯ ಅರಮನೆ ನಾಶವಾಗಿದೆ. ಈ ದಾಳಿಯಲ್ಲಿ ಖಮೇನಿ ಅವರ ಮಗಳು, ಮೊಮ್ಮಗ, ಅಳಿಯ ಮತ್ತು ಸೊಸೆ ಕೂಡ ಸಾವನ್ನಪ್ಪಿದ್ದಾರೆ -ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author