ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇರಾನ್‌ ಮೇಲೆ ಇಸ್ರೇಲ್-ಅಮೆರಿಕ ಜಂಟಿ ದಾಳಿ: ದಶಕಗಳ ಹಿಂದಿನ ಬಾಬಾ ವಂಗಾ ಭವಿಷ್ಯ ನಿಜವಾಗುತ್ತಿದೆಯೇ?

Israel-Iran War: ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ 2026ರ ಆರಂಭದಲ್ಲಿ ಪೂರ್ವ ದೇಶಗಳಿಂದ ದೊಡ್ಡ ಮಟ್ಟದ ಯುದ್ಧವೊಂದು ಆರಂಭವಾಗಲಿದೆ. ಈ ಸಂಘರ್ಷವು ವಿಶ್ವದ ಪಶ್ಚಿಮ ಭಾಗಗಳನ್ನು ತೀವ್ರವಾಗಿ ಬಾಧಿಸುವ ನಿರೀಕ್ಷೆಯಿದೆ, ಯುರೋಪ್ ಈ ವಿನಾಶದ ಭಾರವನ್ನು ಹೊತ್ತುಕೊಳ್ಳಲಿದೆ. ನಂತರದ ದಿನಗಳಲ್ಲಿ ಯುರೋಪಿನ ಭೂಮಿ ಸಂಪೂರ್ಣವಾಗಿ ಬಂಜರು ಮತ್ತು ಅಸ್ಥಿರವಾಗಬಹುದು ಎಂದು ಅವರು ಭವಿಷ್ಯ ನುಡಿದಿದ್ದರು.‌ ಇರಾನ್‌-ಇಸ್ರೇಲ್‌ ಯುದ್ಧ ಆರಂಭವಾಗುತ್ತಿದ್ಧಂತೆ ಈ ಭವಿಷ್ಯ ನಿಜವಾಗುತ್ತಾ ಎನ್ನುವ ಚರ್ಚೆ ನಡೆಯುತ್ತಿದೆ.

ಇಸ್ರೇಲ್-ಇರಾನ್ ಯುದ್ಧ: ಬಾಬಾ ವಂಗಾ ಭವಿಷ್ಯವಾಣಿ ನಿಜವಾಗುತ್ತಿದೆಯೇ?

ಬಾಬಾ ವಂಗಾ. -

Profile
Pushpa Kumari Mar 1, 2026 2:00 PM

ನವದೆಹಲಿ, ಮಾ. 1: ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಫೆಬ್ರವರಿ 28ರಂದು ಇರಾನ್ ಮೇಲೆ ಸಂಘಟಿತ ಮಿಲಿಟರಿ ದಾಳಿಗಳನ್ನು ನಡೆಸಿವೆ. ಇದಕ್ಕೆ ಪ್ರತೀಕವಾಗಿ ಇರಾನ್ (Israel-Iran War) ಹೊಸ ದಾಳಿಗಳನ್ನು ಪ್ರಾರಂಭಿಸುತ್ತಿದ್ದಂತೆ, ದುಬೈ ಮತ್ತು ಕತಾರ್‌ನ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಕೆಲವೊಂದು ಸ್ಥಳದಲ್ಲಿ ಹಲವಾರು ದೊಡ್ಡ ಸ್ಫೋಟಗಳು ಕೇಳಿಬಂದಿವೆ. ಈ ಯುದ್ಧದ ಬೆನ್ನಲ್ಲೇ ಬಾಬಾ ವಂಗಾ ಅವರ ಭವಿಷ್ಯವಾಣಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜನರು ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ವಂಗಾ ಅವರ ಭವಿಷ್ಯವಾಣಿಯೊಂದಿಗೆ ಜೋಡಿಸುತ್ತಿದ್ದಾರೆ.

ವಂಗಾ ಅವರ ಭವಿಷ್ಯವಾಣಿಯ ಪ್ರಕಾರ 2026ರ ಆರಂಭದಲ್ಲೇ ಪೂರ್ವ ದೇಶಗಳಿಂದ ದೊಡ್ಡ ಮಟ್ಟದ ಯುದ್ಧವೊಂದು ಆರಂಭವಾಗಲಿದೆ. ಈ ಸಂಘರ್ಷವು ವಿಶ್ವದ ಪಶ್ಚಿಮ ಭಾಗಗಳನ್ನು ತೀವ್ರವಾಗಿ ಬಾಧಿಸುವ ನಿರೀಕ್ಷೆಯಿದೆ. ಯುರೋಪ್ ಈ ವಿನಾಶದ ಭಾರವನ್ನು ಹೊತ್ತುಕೊಳ್ಳಲಿದೆ. ನಂತರದ ದಿನಗಳಲ್ಲಿ ಯುರೋಪಿನ ಭೂಮಿ ಸಂಪೂರ್ಣವಾಗಿ ಬಂಜರು ಮತ್ತು ಅಸ್ಥಿರವಾಗಬಹುದು ಎಂದು ಅವರು ಹಲವು ದಶಕಗಳ ಹಿಂದೆಯೇ ಭವಿಷ್ಯ ನುಡಿದಿದ್ದರು.‌

ಇರಾನ್‌-ಇಸ್ರೇಲ್‌ ಯುದ್ಧ:



ಈ ಸಂಘರ್ಷದ ನಂತರ ರಷ್ಯಾ ಜಗತ್ತಿನ ಶ್ರೇಷ್ಠ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬುದು ಅವರ ಭವಿಷ್ಯವಾಣಿಯಾಗಿತ್ತು. ಸದ್ಯ ಅಮೆರಿಕ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ‌. ಖಮೇನಿ ಹತ್ಯೆಯಿಂದ ಆಕ್ರೋಶಗೊಂಡ ಇರಾನ್‌, ಪ್ರತೀಕಾರ ಆರಂಭಿಸಿದೆ. ಮಧ್ಯ ಪ್ರಾಚ್ಯದಲ್ಲಿರುವ ಇಸ್ರೇಲ್ ಮತ್ತು ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ.

ರೀಲ್ಸ್ ತಂದ ಅವಾಂತರ; ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ

ಇರಾನ್ ಈಗ ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗುತ್ತಿದ್ದಂತೆ ಅಮೆರಿಕ ಮತ್ತು ಇಸ್ರೇಲ್ ಹೈ ಅಲರ್ಟ್‌ನಲ್ಲಿದೆ. ಈ ಸಂಘರ್ಷವು ಕೇವಲ ಎರಡು ದೇಶಗಳ ನಡುವೆ ಉಳಿದು ಹೋಗದೆ ಮೂರನೇ ಮಹಾಯುದ್ಧಕ್ಕೆ ಕಾರಣವಾಗಲಿದೆಯೇ? ಎಂಬ ಆತಂಕ ಮೂಡುತ್ತಿದೆ. ಈ ಸಂಘರ್ಷದ ನಂತರ ರಷ್ಯಾ ಜಗತ್ತಿನ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆಯಾ ಎನ್ನುವ ಪ್ರಶ್ನೆ ಎದುರಾಗಿದೆ.