ಅಹಮದಾಬಾದ್,ಅ.9: ದೇಶದಲ್ಲಿ ಪ್ರತಿದಿನ ಮಹಿಳೆಯರ ಮೇಲೆ ದೌರ್ಜನ್ಯ, ಹಿಂಸೆಯಂತ ಘಟನೆಗಳು ನಡೆಯುತ್ತಲೇ ಇರುತ್ತವೆ. ಸರಕಾರ ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಕಡಿವಾಣ ಬಿದ್ದಿಲ್ಲ. ಈ ನಿಟ್ಟಿನಲ್ಲಿ ಮಹಿಳಾ ಕಂಟೆಂಟ್ ಕ್ರಿಯೇಟರ್‌ವೊಬ್ಬರು ಅಹಮದಾಬಾದ್ ನಗರದಲ್ಲಿ ರಾತ್ರಿ ಸಮಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಹೇಗಿದೆ ಎಂದು ತಿಳಿಯಲು ಹೊಸ ಸಾಹಸ (Viral News) ಮಾಡಲು ಮುಂದಾಗಿದ್ದಾರೆ. ತಡರಾತ್ರಿ ವೊಬ್ಬರೇ ಕೈಯಲ್ಲಿ ಸೂಟ್‌ಕೇಸ್ ಹಿಡಿದು ಓಡಾಡಿದ್ದಾರೆ. ಆದರೆ ಅಲ್ಲಿನ ಜನರ ಪ್ರತಿಕ್ರಿಯೆ ಕಂಡು ಅವರೇ ಅಚ್ಚರಿಗೆ ಒಳಗಾಗಿದ್ದು ಇಲ್ಲಿ ಮಹಿಳೆಯರಿಗೆ ಸಂಪೂರ್ಣ ಗೌರವವಿದೆ ಎಂದು ಕೊಂಡಾಡಿದ್ದಾರೆ.
ಅಹಮದಾಬಾದ್‌ನಲ್ಲಿ ಜನಸಂದಣಿ ಕಡಿಮೆ ಇರುವ ಪ್ರದೇಶಗಳಲ್ಲಿ ರಾತ್ರಿಯ ವೇಳೆ ಮಹಿಳೆಯರಿಗೆ ಎಷ್ಟರ ಮಟ್ಟಿಗೆ ಸುರಕ್ಷತೆ ಇದೆ ಎಂದು ಖಚಿತ ಪಡಿಸಿಕೊಳ್ಳಲು ಕಂಟೆಂಟ್ ಕ್ರಿಯೇಟರ್ ಒಬ್ಬರೇ ಹೊರಟಿದ್ದರು. ಈ ವೇಳೆ ಅವರಿಗೆ ಎದುರಾದ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿ:
ಪ್ರಯೋಗದ ಆರಂಭದಲ್ಲಿ, ಅವರು ಆಟೋ-ರಿಕ್ಷಾವನ್ನು ಹತ್ತಿದ್ದು ಉದ್ದೇಶಪೂರ್ವಕವಾಗಿಯೇ ಚಾಲಕನ ಎದುರು ವಾಹನದ ಸಂಖ್ಯೆಯನ್ನು ದಾಖಲಿಸಿಕೊಂಡಿಲ್ಲ.ಅದೇ ರೀತಿ ಪ್ರಯಾಣದ ಮಧ್ಯೆ ನಿದ್ದೆ ಹೋದಂತೆ ನಟಿಸಿದ್ದಾರೆ. ಆದರೆ ಆಟೋ ಚಾಲಕ ಅವರ ಇಳಿಯುವ ಸ್ಥಳ ಬಂದಾಗ ಯಾವುದೇ ಅಸಭ್ಯ ವರ್ತನೆ ತೋರದೆ ಸುರಕ್ಷಿತವಾಗಿ ತಲುಪಿಸಿದ್ದಾರೆ.
Viral Video: ಗದ್ದೆಯಲ್ಲಿದ್ದ ಆನೆಗೆ ಟಾರ್ಚ್ ತೋರಿಸಿ ಕೆರಳಿಸಿದ ಜನ; ನುಗ್ಗಿ ದಾಳಿ ಮಾಡಿದ ಒಂಟಿ ಸಲಗ
ನಂತರ ಮಹಿಳೆ ಸೂಟ್‌ಕೇಸ್ ಹಿಡಿದುಕೊಂಡು ಸುಮಾರು 10 ರಿಂದ 15 ನಿಮಿಷಗಳ ಕಾಲ ರಸ್ತೆಯ ಮೂಲೆಯೊಂದರಲ್ಲಿ ನಿಂತರು. ಆದಾಗ್ಯೂ, ವ್ಯಕ್ತಿಯೊಬ್ಬರು ತಾವು ಅಲ್ಲಿ ಎಷ್ಟು ಸಮಯದಿಂದ ಕಾಯುತ್ತಿದ್ದೇವೆ ಮತ್ತು ಏನಾದರೂ ಸಹಾಯ ಬೇಕೇ ಎಂದು ಕೇಳಿದ್ದಾರೆ. ನಂತರ ಅವರು ಮತ್ತೊಂದು ಸ್ಥಳದಲ್ಲಿ ಇದೇ ಪರೀಕ್ಷೆಯನ್ನು ಪುನರಾವರ್ತಿಸಿದರು. ಹಲವಾರು ಆಟೋ-ರಿಕ್ಷಾ ಚಾಲಕರು ಅವರಿಗೆ ಸವಾರಿ ಬೇಕೇ ಎಂದು ಕೇಳಿದ್ದಾರೆ.
ಈ ಅನುಭವದ ಆಧಾರದ ಮೇಲೆ, ಪ್ರಯೋಗದ ಉದ್ದಕ್ಕೂ ತಮಗೆ ಆರಾಮದಾಯಕವೆನಿಸಿತು. ನನ್ನ ಅನುಭವದ ಪ್ರಕಾರ ಅಹಮದಾಬಾದ್ ರಾತ್ರಿ ವೇಳೆಯೂ ಮಹಿಳೆಯರಿಗೆ ಅತ್ಯಂತ ಸುರಕ್ಷಿತವಾದ ನಗರ ಎಂಬುದು ಇವತ್ತು ಸಾಬೀತಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಹೆಚ್ಚಿನವರು ಅಹಮದಾಬಾದ್ ನಿಜಕ್ಕೂ ಸುರಕ್ಷಿತ ನಗರ ಎಂದು ಒಪ್ಪಿಕೊಂಡಿದ್ದಾರೆ.