ಮುಂಬೈ, ಅ. 9: ಭಾರತದ ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆ ಇಲ್ಲ ಎಂದು ಬಿಂಬಿಸುವಂತಹ ಅನೇಕ ವಿಡಿಯೊಗಳು ವೈರಲ್ ಆಗಿವೆ. ಇದೀಗ ಮುಂಬೈಯಲ್ಲಿ ನೆಲೆಸಿರುವ ಜಪಾನ್ ಕಂಟೆಂಟ್ ಕ್ರಿಯೇಟರ್ ಒಬ್ಬರು ಭಾರತದ ಬಗ್ಗೆ ಹರಡಲಾಗುವ ನಕಾರಾತ್ಮಕ ಪೋಸ್ಟ್‌ಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಭಾರತದ ಕುರಿತಾದ ನಕಾರಾತ್ಮಕ ಚಿತ್ರಣವನ್ನು ಪ್ರಶ್ನಿಸಿದ ಜಪಾನ್‌ನ ಮಹಿಳೆ ಕಸ ಎಸೆಯುವಂತಹ ಸಮಸ್ಯೆಗಳು ಕೇವಲ ಭಾರತಕ್ಕೆ ಸೀಮಿತವಲ್ಲ. ಜಪಾನ್‌ನಲ್ಲೂ ಅಂತಹ ಸ್ಥಳಗಳಿವೆ ಎಂದು ವಿಡಿಯೊದಲ್ಲಿ (Viral News) ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರತದಲ್ಲಿ ಪ್ರಸಿದ್ದ ತಾಣಗಳಿದ್ದರೂ ಅಶುಚಿತ್ವದ ದೇಶವೆಂದು ಹೇಳಲಾಗುತ್ತದೆ.ಇಂತಹ ಟೀಕೆಗಳು ಭಾರತದ ವೈವಿಧ್ಯತೆಯನ್ನು ಮರೆಮಾಚುತ್ತವೆ ಎಂದು ತಿಳಿಸಿದ್ದಾರೆ.
ವಿಡಿಯೊ ನೋಡಿ:
ಕಸ ಎಸೆಯುವಂತಹ ಸಮಸ್ಯೆಗಳು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಹೇಳುವ ಮೂಲಕ ಜಪಾನ್ ಮಹಿಳೆ ಹಿಕಾರು-ಸಾನ್ ಭಾರತದ ಪರ ಮಾತನಾಡಿದ್ದಾರೆ. ಕೇವಲ ಸಮಸ್ಯೆಗಳನ್ನು ಎತ್ತಿ ತೋರಿಸುವ ವಿಡಿಯೊಗಳ ಆಧಾರದ ಮೇಲೆ ಭಾರತವನ್ನು ನಿರ್ಣಯಿಸಬಾರದು. ಯಾವುದೇ ಅಭಿಪ್ರಾಯವನ್ನು ರೂಪಿಸಿಕೊಳ್ಳುವ ಮೊದಲು ದೇಶಕ್ಕೆ ಭೇಟಿ ನೀಡಿ, ಅಲ್ಲಿನ ಸಂಸ್ಕೃತಿಯನ್ನು ಅನುಭವಿಸಿ ಮತ್ತು ಜನರೊಂದಿಗೆ ಬೆರೆತು ಪ್ರೋತ್ಸಾಹಿಸಿ ಎಂದು ಕರೆ ನೀಡಿದ್ದಾರೆ.
ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ
ಕಸ ಎಲ್ಲೆಂದರಲ್ಲಿ ಎಸೆಯುವುದು ಅಥವಾ ಅಶುಚಿತ್ವ ಕೇವಲ ಭಾರತಕ್ಕೆ ಸೀಮಿತವಲ್ಲ. ಜಪಾನ್‌ನಲ್ಲೂ ಇಂತಹ ಸ್ಥಳಗಳಿವೆ. ಪ್ರತಿಯೊಂದು ದೇಶದಲ್ಲೂ ಒಳ್ಳೆಯ ಮತ್ತು ಕೆಟ್ಟ ವಿಚಾರ ಇರುತ್ತದೆ. ಕೇವಲ ಕಂಟೆಂಟ್ ಕ್ರಿಯೇಟರ್‌ಗಳು ದೇಶದ ಸಮಸ್ಯೆಗಳನ್ನು ಮಾತ್ರ ಎತ್ತಿ ತೋರಿಸುವುದು ತಪ್ಪು ಎಂದಿದ್ದಾರೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಭಾರತದ ಬಗ್ಗೆ ಅಭಿಮಾನ ಹೀಗೆ ಇರಲಿ ಎಂದು ಹಾರೈಸಿದ್ದಾರೆ.