ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 45 ವರ್ಷದ ಮಹಿಳೆಗೆ 21 ರ ಯುವಕನ ಮೇಲೆ ಲವ್‌; ವಿಷ್ಯ ಗೊತ್ತಾಗ್ತಾ ಇದ್ದಂತೆ ಮದುವೆ ಮಾಡಿಸಿದ ಗಂಡ!

ಇತ್ತೀಚೆಗೆ ನಡೆದ ಇಂದೋರ್‌ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅದಕ್ಕೂ ಮೊದಲು ನೇವಿ ಆಫಿಸರ್‌ ಹತ್ಯೆ ಕೂಡ ಅಷ್ಟೇ ಸದ್ದು ಮಾಡಿತ್ತು. ಹೆಂಡತಿಯರೇ ತಮ್ಮ ಪ್ರಿಯಕರನ ಜೊತೆ ಸೇರಿ ಗಂಡಂದಿರನ್ನು ಕೊಲೆ ಮಾಡಿದ್ದರು. ಇದೀಗ ಅಂತಹ ಪ್ರಕರಣಕ್ಕೆ ಬೆದರಿ ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ.

45 ವರ್ಷದ ಮಹಿಳೆಗೆ 21 ರ ಯುವಕನ ಮೇಲೆ ಲವ್‌; ಏನಿದು ಘಟನೆ?

-

Vishakha Bhat
Vishakha Bhat Jun 21, 2025 12:20 PM

ರಾಂಚಿ: ಇತ್ತೀಚೆಗೆ ನಡೆದ ಇಂದೋರ್‌ ಕೊಲೆ ಪ್ರಕರಣ ಇಡೀ ದೇಶವನ್ನೇ (Viral Video) ಬೆಚ್ಚಿ ಬೀಳಿಸಿತ್ತು. ಅದಕ್ಕೂ ಮೊದಲು ನೇವಿ ಆಫಿಸರ್‌ ಹತ್ಯೆ ಕೂಡ ಅಷ್ಟೇ ಸದ್ದು ಮಾಡಿತ್ತು. ಹೆಂಡತಿಯರೇ ತಮ್ಮ ಪ್ರಿಯಕರನ ಜೊತೆ ಸೇರಿ ಗಂಡಂದಿರನ್ನು ಕೊಲೆ ಮಾಡಿದ್ದರು. ಇದೀಗ ಅಂತಹ ಪ್ರಕರಣಕ್ಕೆ ಬೆದರಿ ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ. ಜಾರ್ಖಂಡ್‌ ರಾಜ್ಯದ ಪಕುರ್ ಜಿಲ್ಲೆಯ ಹಿರಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಘಘರ್ಜನಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ.

ಇಬ್ಬರು ಮಕ್ಕಳ ತಾಯಿಯಾಗಿರುವ 45 ವರ್ಷದ ಮಹಿಳೆಯೊಬ್ಬರಿಗೆ 21 ವರ್ಷದ ಯುವಕನ ಜೊತೆಗೆ ಲವ್ ಆಗಿದ್ದು, ಸದ್ಯ ಅವರಿಬ್ಬರೂ ಮದುವೆಯಾಗಿದ್ದಾರೆ. ಹೆಂಡತಿಯ ಮದುವೆಯನ್ನು ತಾನೇ ಮುಂದೆ ನಿಂತು ಮಾಡಿಸಿದ್ದಾನೆ. ಮಾಹಿತಿ ಪ್ರಕಾರ ಕಳೆದ ಕೆಲ ವರ್ಷಗಳಿಂದ ಆ ಮಹಿಳೆ ಮತ್ತು ಯುವಕ ಇಬ್ಬರೂ ಪ್ರೇಮ ಸಂಬಂಧದಲ್ಲಿದ್ದರಂತೆ. ಈ ವಿಷಯ ಇಡೀ ಗ್ರಾಮದಲ್ಲಿ ಹರಡಿದ್ದು, ಊರಿನವರು ಆಕೆಯ ಗಂಡನಿಗೆ ಹೇಳಿ ಆಡಿಕೊಳ್ಳುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಗಂಡ ಊರವರ ಸಮ್ಮುಖದಲ್ಲಿ ಅವರಿಬ್ಬರಿಗೆ ಮದುವೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಗಂಡ ಊರವರನ್ನು ಪಂಚಾಯತ್ ಸೇರಿಸಿ ಅಲ್ಲಿ ಸ್ವತಃ ಮುಂದೆ ಬಂದು ತನ್ನ ಹೆಂಡತಿಯ ಹಣೆಯ ಮೇಲಿನ ಸಿಂದೂರವನ್ನು ಅಳಿಸಿ ಹಾಕಿದ್ದಾನೆ. ನಂತರ ಆಕೆಯ ಬಳೆಯನ್ನು ಅವನೇ ತೆಗೆದಿದ್ದಾನೆ. ಇದಾದ ನಂತರ, ಅದೇ ವೇದಿಕೆಯಲ್ಲಿ, ಆತ ತನ್ನ ಹೆಂಡತಿಯನ್ನು ಅವಳ ಪ್ರಿಯಕರನ ಜೊತೆ ಮದುವೆ ಮಾಡಿಸಿದನು. ಈ ಮದುವೆಯಲ್ಲಿ ಗ್ರಾಮಸ್ಥರು ಸಹ ಭಾಗವಹಿಸಿದ್ದರು ಮತ್ತು ಈ ಸಂಪೂರ್ಣ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಈ ಸುದ್ದಿಯನ್ನೂ ಓದಿ: Honeymoon Murder Case: ಹನಿಮೂನ್ ಕೊಲೆಗೆ ಹೊಸ ಟ್ವಿಸ್ಟ್- ಸಂಜಯ್ ವರ್ಮಗೆ 234 ಬಾರಿ ಕರೆ ಮಾಡಿದ್ದ ಸೋನಂ-ಅಷ್ಟಕ್ಕೂ ಯಾರೀತಾ?

ಘಟನೆಯ ಬಗ್ಗೆ ಆಡಳಿತ ಅಥವಾ ಪೊಲೀಸರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಗ್ರಾಮಸ್ಥರು ಈ ವಿಷಯವನ್ನು ಪಂಚಾಯತ್ ಮೇಲ್ವಿಚಾರಣೆಯಲ್ಲಿ ಪರಸ್ಪರ ಒಪ್ಪಿಗೆಯಿಂದ ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ. ವೈರಲ್‌ ಆದ ವಿಡಿಯೋಗೆ ನೆಟ್ಟಿಗರು ಕಮೆಂಟ್‌ ಮಾಡಿ ಸದ್ಯ ನಿನ್ನ ಪ್ರಾಣ ಉಳಿಯಿತು. ಒಳ್ಳೆ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಕಮೆಂಟ್‌ ಮಾಡಿ ಮದುವೆಯೇ ಬೇಡ ಸಿಂಗಲ್‌ ಲೈಫ್‌ ಸಾಕು ಎಂದು ಹೇಳಿದ್ದಾರೆ.