ನವದೆಹಲಿ: ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ (Rishab Shetty) ಅವರು ನಟಿಸಿ ನಿರ್ದೇಸಿದ್ದ ಕಾಂತಾರ ಚಾಪ್ಟರ್ 1 (Kantara: A Legend Chapter-1) ಸಿನಿಮಾ ಅಭಿಮಾನಿಗಳ ಮನಗೆದ್ದಿದ್ದು ನಮಗೆಲ್ಲ ತಿಳಿದಿದೆ. ಅಕ್ಟೋಬರ್ 2 ರಂದು ತೆರೆ ಕಂಡ ಈ ಸಿನಿಮಾ ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ಮಟ್ಟದ ವರೆಗೂ ಛಾಪು ಮೂಡಿಸಿದೆ. ಈ ಮೂಲಕ ಸಿನಿಮಾ ಇಂಡಸ್ಟ್ರಿ ಯಲ್ಲಿ 2025ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಈ ಸಿನಿಮಾ ಕಂಡ ಅಭಿಮಾನಿಗಳು ಅದನ್ನು ರೀಕ್ರಿಯೇಟ್ ಮಾಡುವ ವಿಡಿಯೋ ಇತ್ತೀಚೆಗೆ ವೈರಲ್ ಆಗುತ್ತಿದೆ. ಈ ಸಿನಿಮಾದಲ್ಲಿ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ಕನಕವತಿ ಪಾತ್ರ ಮಾಡಿದ್ದು ಅವರ ಕಾಸ್ಟ್ಯೂಂ ವಿನ್ಯಾಸವನ್ನು ಅನುಕರಣೆ ಮಾಡಿ ಅನೇಕರು ವಿಡಿಯೋವನ್ನು ಶೇರ್ ಮಾಡಿದ್ದರು. ಇದೀಗ ಕಾಂತಾರ ಸಿನಿಮಾದ ಹುಲಿಯನ್ನು ಕೂಡ ಕಲಾವಿದರೊಬ್ಬರು ರಿಕ್ರಿಯೇಟ್ ಮಾಡಿದ್ದು ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
2022ರಲ್ಲಿ ತೆರೆ ಕಂಡ ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ಮತ್ತು ಗುಳಿಗ ದೈವದ ನಂಬಿಕೆ ಆಚ ರಣೆ ಇತರಗಳ ಬಗ್ಗೆ ತಿಳಿಸಲಾಗಿತ್ತು. ಅಂತೆಯೇ ಕಾಂತಾರ ಚಾಪ್ಟರ್ 1ಸಿನಿಮಾದಲ್ಲಿ ಪಂಜುರ್ಲಿ , ಗುಳಿಗ ದೈವದ ಜೊತೆಗೆ ಹುಲಿ ಯೊಂದು ಎಂಟ್ರಿ ಕೊಡುವ ಪಾತ್ರದ ಬಗ್ಗೆಯೂ ತಿಳಿಸಲಾಗಿದೆ. ಹೀಗಾಗಿ ವಿಎಫ್ ಎಕ್ಸ್ ಎಫೆಕ್ಟ್ ನಲ್ಲಿ ಹುಲಿಯ ಎಂಟ್ರಿಯನ್ನು ಬಹಳ ಅದ್ಭುತವಾಗಿ ತೋರಿಸ ಲಾಗಿತ್ತು. ಅದನ್ನು ಕಂಡ ಕಲಾವಿದರೊಬ್ಬರು ಕಡಿಮೆ ಬಜೆಟ್ ನಲ್ಲಿ ಹುಲಿಯೊಂದನ್ನು ತಯಾರಿಸಿದ್ದು ಆ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ:
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ವೈರಲ್ ಆಗಿದೆ. ಕಾಂತಾರ ಚಿತ್ರದಲ್ಲಿ ಕಂಡು ಬಂದ ದೃಶ್ಯವನ್ನು ಅತ್ಯಂತ ಸುಲಭವಾಗಿ ರಚನೆ ಮಾಡಿದ್ದಾರೆ. ಇಲ್ಲಿ ಹುಲಿಯನ್ನು ದುಬಾರಿ ವಸ್ತುಗಳಿಂದ ಮಾಡಲಾಗಿಲ್ಲ, ಬದಲಾಗಿ ಸಂಪೂರ್ಣವಾಗಿ ತ್ಯಾಜ್ಯದಿಂದ ಮಾಡಲಾಗಿದೆ ಎಂಬುದು ಅಚ್ಚರಿ ಎನಿಸುವಂತಿದೆ. ಹುಲಿ ನೋಡಲು ನೈಜದಂತೆ ಇದ್ದು ಕಾಂತಾರ ಚಿತ್ರದಲ್ಲಿ ಬರುವ ಹುಲಿ ಯನ್ನೇ ಹೋಲುವಂತಿದೆ. ಹೀಗಾಗಿ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಇದನ್ನು ಓದಿ:Udaala Movie: ಯೋಗರಾಜ್ ಭಟ್ ನಿರ್ಮಾಣದ ʼಉಡಾಳʼ ಚಿತ್ರದ ಟ್ರೇಲರ್ ಔಟ್
ವೈರಲ್ ಆಗಿದ್ದ ವೀಡಿಯೊದಲ್ಲಿ, ಕಲಾವಿದರ ಗುಂಪೊಂದು ಹುಲಿ ರಚನೆಯನ್ನು ಮಾಡಲು ಮುಂದಾಗುತ್ತಿರುವ ದೃಶ್ಯವನ್ನು ಕಾಣಬಹುದು. ಮರದ ರೀಪ್ ಬಳಸಿ ಅನಂತರ ಒಣಗಿದ ಬಾಳೆ ಎಲೆಗಳು, ಸ್ಟ್ರಾಗಳು, ರಟ್ಟು, ಪೇಪರ್ ಹೀಗೆ ಇತರ ಬೇಡವಾದ ತ್ಯಾಜ್ಯ ಕಸವನ್ನು ಬಳಸಿ ಲೇಯರ್ ಮಾಡಿದ್ದಾರೆ. ಬಳಿಕ ತೆಂಗಿನ ನಾರಿನ ಸಿಪ್ಪೆಯನ್ನು ಬಳಸಿ ಕಲಾವಿದರು ಹುಲಿಯ ಪ್ರತಿಯೊಂದು ರೂಪ ಚಹರೆಯನ್ನು ಅನುಕರಣೆ ಮಾಡಿದ್ದಾರೆ. ಕೊನೆಗೆ ಸ್ಪ್ರೇ-ಪೇಂಟ್ ಮೂಲಕ ಹುಲಿಯ ಕಪ್ಪು ಪಟ್ಟೆಗಳನ್ನು ಬಿಡಿಸಿದ್ದಾರೆ
ಕಾಂತಾರ ಚಲನಚಿತ್ರದ ಹುಲಿ ಈಗ ಕೇರಳದಲ್ಲಿದೆ, ಇದನ್ನು ವೇಸ್ಟ್ ಮೆಟಿರಿಯಲ್ಸ್ ನಿಂದ ತಯಾರಿ ಸಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ಎಳೆ ಮಗುವಿನ ಜೊತೆಗಿದ್ದ ಹುಲಿಯ ಫೋಟೊವನ್ನು ಕಲಾವಿದರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅವರು ಪೋಸ್ಟ್ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಇಂಟರ್ನೆಟ್‌ನಲ್ಲಿ ಈ ವಿಡಿಯೋ ಸಂಚಲನ ಉಂಟು ಮಾಡಿದೆ. ಈ ಮೂಲಕ ಕಲಾವಿ ದರ ಸೃಜನಶೀಲತೆ ಪ್ರತಿಭೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಹಾಕಿದ್ದಾರೆ. ಕಲೆಯಿಂದ ಏನನ್ನು ಸೃಷ್ಟಿಸಬಹುದು, ಇದು ಪರಿಸರ ಸ್ನೇಹಿಯಾಗಿದ್ದು ನೋಡಲು ಕೂಡ ಬಹಳ ಅದ್ಭುತವಾಗಿ ಕಾಣುತ್ತಿದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.