ಮನಿಲಾ, ಮೇ 15: ಪ್ರವಾಸಿ ಸ್ಥಳ ಎಂದಾಗ ಅಲ್ಲಿಗೆ ಎಂಜಾಯ್ ಮಾಡಲು ಹೆಚ್ಚಿನವರು ತೆರಳುತ್ತಾರೆ. ಆದರೆ ಇಲ್ಲೊಂದು ಸ್ನೇಹಿತರ ಗುಂಪು ರೆಸಾರ್ಟ್ಗೆಂದು ತೆರಳಿದಾಗ ಅಲ್ಲಿ ನಡೆದ ಘಟನೆ ಜೀವನ ಪೂರ್ತಿ ಮರೆಯಲಾಗದಂತೆ ಮಾಡಿದೆ. ಹೌದು ಶೌಚಾಲಯದೊಳಗೆ ಕಾಳಿಂಗ ಸರ್ಪ ವೊಂದು ಪ್ರತ್ಯಕ್ಷ ವಾಗಿದ್ದು ಶೌಚಾಲಯದ ಫ್ಲಶ್ ಒತ್ತುತ್ತಿದ್ದಂತೆ ಹಾವು ಹೆಡೆ ಬಿಚ್ಚಿ ನಿಂತಿದೆ. ಈ ದೃಶ್ಯ (Viral Video) ಕಂಡ ಅನೇಕರು ಇದೀಗ ಬೆಚ್ಚಿ ಬಿದ್ದಿದ್ದಾರೆ.
ಸಾಲ್ವಡಾರ್ ಫಿಲಿಪೈನ್ಸ್‌ನ ಬೆನೆಡಿಕ್ಟೊದಲ್ಲಿ ನಡೆದ ಈ ವಿಚಿತ್ರ ಘಟನೆಯು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಳಕೆದಾರರಲ್ಲಿ ಆಘಾತ ಹಾಗೂ ಆತಂಕವನ್ನು ಹುಟ್ಟುಹಾಕಿದೆ. ಪ್ರವಾಸಿ ತಾಣಕ್ಕೆಂದು ಹೋದಾಗ ಶೌಚಾಲಯ ಒಳಗೆ ಕಾಳಿಂಗ ಸರ್ಪ ವೊಂದು ಪತ್ತೆಯಾಗಿದೆ.ಆದರೆ ಪ್ರವಾಸಿಗರು ಪ್ರಾಣಾಪಾಯದಿಂದ ಪರಾಗಿದ್ದಾರೆ.
ವಿಡಿಯೋ ನೋಡಿ;
ಐದು ಜನ ಸ್ನೇಹಿತರ ಗುಂಪೊಂದು ಜಲಪಾತಗಳು ಮತ್ತು ವನ್ಯಜೀವಿಗಳಿಗೆ ಹೆಸರುವಾಸಿಯಾದ ಜನಪ್ರಿಯ ಪರಿಸರ- ಪ್ರವಾಸೋದ್ಯಮ ತಾಣವಾದ ನಾರ್ದರ್ನ್ ನೀಗ್ರೋಸ್ ನ್ಯಾಚುರಲ್ ಪಾರ್ಕ್‌ನ ಹಚ್ಚ ಹಸಿರಿನ ಸುತ್ತಮುತ್ತಲಿನ ಬಳಿ ಇರುವ ರಮಣೀಯ ರೆಸಾರ್ಟ್‌ನಲ್ಲಿ ತಂಗಿದ್ದರು. ಒಂದೊಮ್ಮೆ ತಂಡದ ಸದಸ್ಯರೊಬ್ಬರು ಶೌಚಾಲಯಕ್ಕೆ ತೆರಳಿದಾಗ ಕಮೋಡ್ ಒಳಗೆ ಏನೋ ವಸ್ತು ಇರುವುದನ್ನು ಗಮನಿಸಿದ್ದಾರೆ.
ಟಾಯ್ಲೆಟ್ ನ ಫ್ಲಶ್ ಬಟನ್ ಒತ್ತಿದಾಗ ಪೈಪ್ ಲೈನ್ ಮೂಲಕ ಹಾವು ಪ್ರವಾಸಿನ ಕಣ್ಣಿಗೆ ಪ್ರತ್ಯಕ್ಷ ವಾಗಿದೆ. ಭಯಭೀತನಾದ ವ್ಯಕ್ತಿ ತಮ್ಮ ಸ್ನೇಹಿತರಿಗೆ ತಿಳಿಸಿದ್ದು ಮೊದಲು ಇದನ್ನು ಗೆಳೆಯರು ತಮಾಷೆ ಎಂದುಕೊಂಡರೂ ಹಾವು ಹೆಡೆ ಬಿಚ್ಚಿ ನಿಂತಿದೆ. ಕೂಡಲೇ ರೆಸಾರ್ಟ್ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ರೆಸಾರ್ಟ್‌ನ ಪ್ಲಂಬಿಂಗ್ ಒಳಗೆ ಹೇಗೆ ಹಾವು ಪ್ರವೇಶಿಸಿತು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಯಾವುದೇ ಹಾವು ಕೊಳಕು ಚರಂಡಿಯಲ್ಲಿ ವಾಸಿಸುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಸ್ಥಳ ನನ್ನ ಟ್ರಾವೆಲ್ ಲಿಸ್ಟ್‌ನಿಂದಲೇ ಹೊರಗೆ ಎಂದು ಬರೆದಿದ್ದಾರೆ.