ದುಬೈ, ಸೆ. 22: ಹೆಚ್ಚಿನ ಜನರಿಗೆ ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಬಹುದೊಡ್ಡ ಕನಸು. ಹೆಚ್ಚಿನ ಪ್ಯಾಕೇಜ್ ಪಡೆಯಬಹುದು, ಸೆಕ್ಯುರ್ಡ್ ಕೆಲಸ ಗಿಟ್ಟಿಸಿಕೊಳ್ಳಬಹುದು ಎಂದುಕೊಳ್ಳುತ್ತಾರೆ. ಹೀಗಂತ ಕನಸು ಕಾಣುತ್ತಿದ್ದರೆ ಈ ವಿಡಿಯೊ (Viral News) ನೋಡಲೇಬೇಕು. ಹೊರಗಿನಿಂದ ನೋಡೋಕೆ ಲಕ್ಷುರಿ ಲೈಫ್, ಕೈತುಂಬಾ ಸಂಬಳ ಪಡೆಯಬಹುದು ಅಂದುಕೊಂಡರೆ ವಾಸ್ತವ ಬೇರೆಯದೇ ಇದೆ ಎಂದು ದುಬೈಯಲ್ಲಿ ವಾಸಿಸುವ ಪಶ್ಚಿಮ ಬಂಗಾಳದ ಕೋಲ್ಕತಾ ಮೂಲದ ಶೆಫ್ ರಾಹುಲ್ ಬಾಲಾ ಸೋಶಿಯಲ್ ಮೀಡಿಯಾದಲ್ಲಿ ಕಹಿ ಅನುಭವ ತೆರೆದಿಟ್ಟಿದ್ದಾರೆ.
ಮೊದಲಿಗೆ ತನಗೂ ವಿದೇಶದಲ್ಲಿ ಕೆಲಸ ಪಡೆಯಬೇಕೆಂಬ ಕನಸು ಇತ್ತು. ಆದರೆ ದುಬೈಗೆ ಬಂದ ಮೇಲೆಯೇ ತಾನು ತೆಗೆದುಕೊಂಡ ನಿರ್ಧಾರ ತಪ್ಪು ಅನಿಸಿದೆ. ಇಲ್ಲಿಗೆ ಸ್ಥಳಾಂತರಗೊಂಡ ನಂತರದ ಜೀವನವು ನಿರೀಕ್ಷಿಸಿದಷ್ಟು ಸುಲಭವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ʼ'ನಮ್ಮ ಭಾರತವೇ ನಮಗೆ ಎಷ್ಟೋ ವಾಸಿ'ʼ ಎಂದು ರಾಹುಲ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ʼʼದುಬೈಯಲ್ಲಿನ ದೈನಂದಿನ ವೆಚ್ಚಗಳು ಸಾಮಾನ್ಯ ಕೆಲಸಗಾರನಿಗೆ ಹಣವನ್ನು ಉಳಿಸಲು ಕಷ್ಟವಾಗಿಸಬಹುದು. ದುಬೈಯಲ್ಲಿ ದುಡಿಯುವ ಹಣವನ್ನು ಭಾರತೀಯ ರೂಪಾಯಿಯಲ್ಲಿ ನೋಡಿದಾಗ ಅದು ದೊಡ್ಡ ಮೊತ್ತವಾಗಿ ಕಾಣಿಸುತ್ತದೆ. ಆದರೆ ಅಲ್ಲಿನ ದಿನನಿತ್ಯದ ವೆಚ್ಚಗಳನ್ನು ನೋಡಿದರೆ ಆ ಹಣ ಎಲ್ಲಿ ಖರ್ಚು ಆಗುತ್ತದೆ ಎಂಬುದು ತಿಳಿಯುವುದಿಲ್ಲ ಎಂದಿದ್ದಾರೆ.
ವಿಡಿಯೊ ನೋಡಿ:
ಇಲ್ಲಿ ಒಂದು ಹೊತ್ತಿನ ಸಾಮಾನ್ಯ ಊಟಕ್ಕೂ 260 ರೂಪಾಯಿ ನೀಡಬೇಕೆಂದರೆ ಯೋಚಿಸಿ. ದಿನನಿತ್ಯದ ಆಹಾರ, ನೀರು ಮತ್ತು ವಸತಿಯ ಖರ್ಚುಗಳನ್ನು ಹೊಂದಿಸಲು ನಮ್ಮ ದುಡಿದ ಹಣ ಪೂರ್ತಿ ಖರ್ಚು ಮಾಡಬೇಕಾಗುತ್ತದೆ. ಇಲ್ಲಿನ ದುಬಾರಿ ಜೀವನ ಶೈಲಿಗೆ ಹೋಲಿಸಿದರೆ ಭಾರತವೇ ವಾಸಿ ಎಂದು ಕಿವಿಮಾತು ಹೇಳಿದ್ದಾರೆ.
ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ
ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೀವು ಹೇಳುತ್ತಿರುವುದು ನೂರಕ್ಕೆ ನೂರರಷ್ಟು ನಿಜ" ಎಂದು ವಿದೇಶದಲ್ಲಿ ಇರುವ ಹಲವು ಭಾರತೀಯರು ಕಾಮೆಂಟ್ ಮಾಡಿದ್ದಾರೆ. ಒಬ್ಬರ, ʼʼಸಾಕಷ್ಟು ಆದಾಯವಿಲ್ಲದೆ ವಿದೇಶದಲ್ಲಿ ಜೀವನವು ಸವಾಲಿನದ್ದಾಗಿರಬಹುದುʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಭಾರತವೇ ತನ್ನ ನೆಚ್ಚಿನ ದೇಶʼʼ ಎಂದು ಕಾಮೆಂಟ್ ಮಾಡಿದ್ದಾರೆ.