ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನ ವಿಂಡ್ ಟನಲ್ ರಸ್ತೆ ಬದಿ ಕಸದ ರಾಶಿ: ವಿಡಿಯೊ ವೈರಲ್‌ ಆಗತ್ತಿದ್ದಂತೆ ವಿಲೇವಾರಿಯ ಭರವಸೆ

Viral News: ಬೆಂಗಳೂರು ಎಷ್ಟೇ ಅಭಿವೃದ್ಧಿಗೊಂಡರೂ ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಈಗಲೂ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಸೌಲಭ್ಯ, ನೀರಿನ‌ ಕೊರತೆ, ಅಸಮರ್ಪಕ ತಾಜ್ಯಗಳ ವಿಲೇವಾರಿ ಹೀಗೆ ಹಲವು ಸಮಸ್ಯೆ ಕಂಡು ಬರುತ್ತಿದೆ. ಇದೀಗ ನಗರದ ವಿಂಡ್ ಟನಲ್ ರಸ್ತೆಯಲ್ಲಿ ಬಿದ್ದಿರುವ ತ್ಯಾಜ್ಯದ ರಾಶಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ಕೇಳಿಬಂದಿದೆ.

ಬೆಂಗಳೂರಿನ ವಿಂಡ್ ಟನಲ್ ರಸ್ತೆಯಲ್ಲಿ ಕಸದ ರಾಶಿ

ಬೆಂಗಳೂರು, ಅ. 8: ಸಿಲಿಕಾನ್ ಸಿಟಿ ಬೆಂಗಳೂರು ಎಷ್ಟೇ ಅಭಿವೃದ್ಧಿಗೊಂಡರೂ ಮೂಲಭೂತ ಸೌಕರ್ಯಗಳ ಕೊರತೆ ಈಗಲೂ ಕಂಡು ಬರುತ್ತಿದೆ. ರಸ್ತೆ ಸೌಲಭ್ಯ, ನೀರಿನ‌ ಕೊರತೆ, ಅಸಮರ್ಪಕ ತಾಜ್ಯ ವಿಲೇವಾರಿ ಹೀಗೆ ಹಲವು ಸಮಸ್ಯೆ ಕಾಡುತ್ತಿದೆ. ಇದೀಗ ನಗರದ ವಿಂಡ್ ಟನಲ್ ರಸ್ತೆಯಲ್ಲಿ ಬಿದ್ದಿರುವ ತ್ಯಾಜ್ಯದ ರಾಶಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ​​ಮತ್ತು HAL ಗಡಿಯ ಸಮೀಪವಿರುವ ರಸ್ತೆ ದೈನಂದಿನ ಪ್ರಯಾಣಕ್ಕೆ ಎಷ್ಟು ಅಹಿತಕರ ಸ್ಥಳವಾಗಿ ಮಾರ್ಪಟ್ಟಿದೆ ಎಂಬುದನ್ನು ಮಹಿಳೆಯೊಬ್ಬರು ವಿಡಿಯೊ (Viral News) ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ವಿಂಡ್ ಟನಲ್ ರಸ್ತೆಯ ಮೂಲಕ ಪ್ರತಿದಿನ ಸಂಚರಿಸುವ ಮಹಿಳೆಯೊಬ್ಬರು, ಅಲ್ಲಿ ಸಂಗ್ರಹವಾಗಿರುವ ಕಸದ ರಾಶಿ, ತ್ಯಾಜ್ಯದ ದುರ್ವಾಸನೆಯಿಂದಾಗಿ ತಮ್ಮ ಪ್ರಯಾಣವು ಎಷ್ಟು ಅಸಹನೀಯವಾಗಿದೆ ಎಂಬುದನ್ನು ಹಂಚಿಕೊಂಡಿದ್ದಾರೆ.

ಪ್ರತಿದಿನ ಸಾವಿರಾರು ಜನರು ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ​​ಮತ್ತು HAL ಗಡಿಯ ಸಮೀಪವಿರುವ ರಸ್ತೆಯನ್ನು ಬಳಸುತ್ತಾರೆ. ಆದರೆ ಇಲ್ಲಿನ ರಸ್ತೆಯಲ್ಲಿ ದುರ್ನಾತ ಬೀರುತ್ತಿದ್ದು, ಮಳೆ ಬಂದಾಗ ಚರಂಡಿ ವ್ಯವಸ್ಥೆ ಸರಿಯಿಲ್ಲದೆ ಮಳೆ ನೀರು ಚರಂಡಿ ನೀರು ಒಟ್ಟಾಗುತ್ತಿದೆ. ರಸ್ತೆ ಸ್ವಚ್ಛಗೊಳಿಸಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ದುರಂತ ಎಂದು ಪ್ರಿಯಾ ಎನ್ನುವವರು ವಿಡಿಯೊ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ವಿಡಿಯೊ ನೋಡಿ:



ಸರಿಯಾದ ಸ್ವಚ್ಛತೆ ಏಕೆ ಇಲ್ಲ? ಈ ರಸ್ತೆಯ ಭಾಗವನ್ನು ಸ್ವಚ್ಛವಾಗಿಡಲು ಕಸದ ಬುಟ್ಟಿ ಅಥವಾ ಯಾವುದೇ ವ್ಯವಸ್ಥೆ ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ. ಪ್ರತಿದಿನ ಸಾವಿರಾರು ಜನರು ಬಳಸುವ ರಸ್ತೆಗಳಿಗೆ ನಿರ್ವಹಣೆಯ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ. ರಸ್ತೆಯ ಸ್ಥಿತಿಯು ಅಧಿಕಾರಿಗಳ ನಿರ್ವಹಣೆಯ ಬಗ್ಗೆಯೂ ಪ್ರಶ್ನೆ ಹುಟ್ಟುಹಾಕಿದೆ. ಪ್ರತಿದಿನ ಭಾರಿ ವಾಹನ ದಟ್ಟಣೆ ಇರುವ ರಸ್ತೆಯುದ್ದಕ್ಕೂ ಕಸದ ರಾಶಿ ಸೇರುವುದನ್ನು ತಡೆಯಲು ಸೂಕ್ತ ವ್ಯವಸ್ಥೆ ಏಕೆ ಇಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ!

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಈ ವಿಷಯವನ್ನು BWSMLನ ಉಪ ಪ್ರಧಾನ ವ್ಯವಸ್ಥಾಪಕ ಭೀಮೇಶ್ ಅವರ ಗಮನಕ್ಕೆ ತರಲಾಗಿದೆ. ಕಸ ಸಂಗ್ರಹಿಸುವ ಸಿಬ್ಬಂದಿ ಪ್ರಸ್ತುತ ಮಧ್ಯಾಹ್ನ 2:30ರವರೆಗೆ ಮಾತ್ರ ಕೆಲಸ ಮಾಡುತ್ತಿದ್ದಾರೆ. ಕಸವನ್ನು ಕೂಡಲೇ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ. ಸ್ವಚ್ಛತಾ ಕಾರ್ಯ ಪೂರ್ಣಗೊಂಡ ನಂತರ ವಿಡಿಯೊಗಳನ್ನು ಹಂಚಿಕೊಳ್ಳುವುದಾಗಿಯೂ ಹೇಳಿದ್ದಾರೆ.