ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಸ್ತೆಗೆ ಕಸ ಎಸೆದು ಉದ್ಧಟತನ ತೋರಿದ ಬೈಕ್ ಸವಾರ: ವೈರಲ್ ವಿಡಿಯೋ ಕಂಡು ನೆಟ್ಟಿಗರು ಫುಲ್ ಗರಂ!

Viral News: ಹೈದರಾಬಾದ್‌ನ ರಸ್ತೆಯಲ್ಲಿ ಹೋಗುತ್ತಿದ್ದ ಸವಾರನೊಬ್ಬ ತ್ಯಾಜ್ಯವನ್ನು ರಸ್ತೆಗೆ ಎಸೆದಿದ್ದಾನೆ. ಇದನ್ನು ನೋಡಿದ ಇನ್ನೊಬ್ಬ ವ್ಯಕ್ತಿ ಕಸ ಹಾಕಿದ್ದನ್ನು ಪ್ರಶ್ನಿಸಿ ತಾನೇ ಕಸ ಹೆಕ್ಕಿ ತೊಟ್ಟಿಗೆ ಹಾಕುತ್ತಾನೆ‌. ಆದರೆ ಬೈಕ್ ಸವಾರ ತನ್ನ ತಪ್ಪು ಒಪ್ಪಿಕೊಳ್ಳುವ ಬದಲು ನಿನ್ನನ್ನು ಹೈದರಾಬಾದ್ ಮಹಾನಗರ ಪಾಲಿಕೆ ಕೆಲಸಕ್ಕೆ ಇಟ್ಟುಕೊಂಡಿದೆಯಾ? ಎಂದು ಗೇಲಿ ಮಾಡಿದ್ದಾನೆ. ಈ ಘಟನೆ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತನ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಹೈದರಾಬಾದ್‌ನಲ್ಲಿ ರಸ್ತೆಗೆ ಕಸ ಎಸೆದು ಸಮರ್ಥಿಸಿಕೊಂಡ ಬೈಕ್ ಸವಾರ

ಹೈದರಾಬಾದ್,ಸೆ.13: ಸಾರ್ವಜನಿಕ ಸ್ಥಳದಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ. ಇಂದು ಕೆಲವು ಶಿಕ್ಷಣವಂತರೂ ಕೂಡ ನಾಗರಿಕ ಪ್ರಜ್ಞೆ ಮರೆತು ತಮಗೆ ಬೇಕಾದಂತೆ ವರ್ತನೆ ತೋರುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹೈದರಾಬಾದ್‌ನ ರಸ್ತೆಯಲ್ಲಿ ಹೋಗುತ್ತಿದ್ದ ಸವಾರನೊಬ್ಬ ತ್ಯಾಜ್ಯವನ್ನು ರಸ್ತೆಗೆ ಎಸೆದಿದ್ದಾನೆ. ಇದನ್ನು ನೋಡಿದ ಇನ್ನೊಬ್ಬ ವ್ಯಕ್ತಿ ಕಸ ಹಾಕಿದ್ದನ್ನು ಪ್ರಶ್ನಿಸಿ ತಾನೇ ಕಸ ಹೆಕ್ಕಿ ತೊಟ್ಟಿಗೆ ಹಾಕುತ್ತಾನೆ‌. ಆದರೆ ಬೈಕ್ ಸವಾರ ತನ್ನ ತಪ್ಪು ಒಪ್ಪಿಕೊಳ್ಳುವ ಬದಲು ನಿನ್ನನ್ನು ಹೈದರಾಬಾದ್ ಮಹಾನಗರ ಪಾಲಿಕೆ ಕೆಲಸಕ್ಕೆ ಇಟ್ಟುಕೊಂಡಿದೆಯಾ? ಎಂದು ಗೇಲಿ ಮಾಡಿದ್ದಾನೆ. ಈ ಘಟನೆ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆತನ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಹೈದರಾಬಾದ್‌ನಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಉಂಟಾದ ಘಟನೆಯೂ ನಾಗರಿಕ ಪ್ರಜ್ಞೆ ಹಾಗೂ ವೈಯಕ್ತಿಕ ಜವಾಬ್ದಾರಿಯ ಬಗ್ಗೆ ಪ್ರಶ್ನೆ ಮಾಡುವಂತೆ ಆಗಿದೆ. ಇಷ್ಟು ಅಹಂಕಾರದ ವರ್ತನೆ ತೋರಿಸಲು ಆತನ ಮನೆಯ ರಸ್ತೆಯಲ್ಲ, ಇದು ಸಾರ್ವಜನಿಕ ರಸ್ತೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ವಿಡಿಯೋ ನೋಡಿ:



ಲೈಶ್ರಾಮ್ ಬೆನೆಡಿಕ್ಸನ್ ಸಿಂಗ್ ಎಂಬ ಬೈಕ್ ಸವಾರ ಹೈದರಾ ಬಾದ್‌ನ ರಸ್ತೆಯಲ್ಲಿ ತೆರಳುತ್ತಿದ್ದರು. ಆಗ ಮುಂದೆ ಚಲಿಸುತ್ತಿದ್ದ ಮತ್ತೊಬ್ಬ ಸವಾರ ಕಾಗದದ ತ್ಯಾಜ್ಯವನ್ನು ರಸ್ತೆಗೆ ಎಸೆದಿದ್ದು ಕಂಡು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ ಅವರೇ ಕಸವನ್ನು ಹೆಕ್ಕಿದ್ದಾರೆ. ಇದರಿಂದ ಕೋಪಗೊಂಡ ಕಸ ಎಸೆದ ವ್ಯಕ್ತಿ, "ಉಳಿದ ಕಸವನ್ನೂ ಎತ್ತು, ನಿನ್ನ ಬೈಕ್‌ನಿಂದ ಬೀಳುವ ಮಣ್ಣನ್ನೂ ತೆಗಿ" ಎಂದು ಸಿಂಗ್ ಜೊತೆ ಜಗಳಕ್ಕೆ ಬಿದ್ದಿದ್ದಾನೆ. ಅಲ್ಲದೆ, "ನಿನಗೆ ಹೈದರಾಬಾದ್ ಮಹಾನಗರ ಕೆಲಸ ಕೊಟ್ಟಿದೆಯಾ? ಎಂದು ವ್ಯಂಗ್ಯವಾಡಿದ್ದಾನೆ.

Viral Video: ಹರಿಹರ ಕೋಟೆಯ ಕಿರಿದಾದ ಮೆಟ್ಟಿಲ ಮೇಲೆ ಜನಸಾಗರ; ಮೊಘಲ್ ಸೈನಿಕರೂ ಇಷ್ಟೊಂದು ಸಂಖ್ಯೆಯಲ್ಲಿ ದಾಳಿ ಮಾಡಿರಲಿಲ್ಲ ಎಂದ ನೆಟ್ಟಿಗರು

ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಸಿಂಗ್, ಈಗಾಗಲೇ ಬಿದ್ದಿರುವ ಕಸವನ್ನು ನೆಪವಾಗಿಟ್ಟುಕೊಂಡು ಈಗಾಗಲೇ ಬೇರೆ ಕಸ ಬಿದ್ದಿದೆ, ಹೀಗಾಗಿ ನಾನು ಎಸೆದರೆ ತಪ್ಪೇನು ಎಂಬಂತೆ ಆ ವ್ಯಕ್ತಿ ತನ್ನ ತಪ್ಪು ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದಾನೆ. ಅಂದರೆ, ಬೇರೆಯವರು ಕಸ ಎಸೆದಿದ್ದಾರೆ ಎಂಬ ಕಾರಣಕ್ಕೆ ನೀವೂ ಎಸೆಯುತ್ತೀರಾ? ಹಾಗೆ ಮಾಡುವುದು ಸರಿಯಲ್ಲವಲ್ಲ? ಎಂದು ಬುದ್ದಿ ಮಾತು ಹೇಳಿದ್ದಾರೆ.

ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ಸಿಂಗ್ ಹೀಗೆ ಬರೆದಿದ್ದಾರೆ. ಈ ರೀತಿಯ ನಡವಳಿಕೆಯನ್ನು ನೀವು ಒಪ್ಪುತ್ತೀರಾ? ನಾನು ಫೋನ್ ಹೊರತೆಗೆಯುವ ಮೊದಲು ಸಾಕಷ್ಟು ಶಾಂತವಾಗಿದ್ದೆ. ಕಸ ಎಸೆದಿರುವ ಬಗ್ಗೆ ಸೌಮ್ಯವಾಗಿ ಕೇಳಿದ್ದೆ. ಅದಕ್ಕೆ ಅವರ ಪ್ರತಿಕ್ರಿಯೆ ನಾನು ನಿರೀಕ್ಷಿಸಿದಂತೆಯೇ ಇತ್ತು.ದೇಶದ ನಾಗರಿಕ ಪ್ರಜ್ಞೆ ಈ ಹಂತಕ್ಕೆ ತಲುಪಿರುವುದು ಬೇಸರದ ಸಂಗತಿ ಎಂದು ಬರೆದಿದ್ದಾರೆ.