ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral News: ಶ್ರಾದ್ಧದ ದಿನ ಭಜನೆ ಬದಲು ರಾತ್ರಿಯಿಡೀ ನಡೆದದ್ದು ಅಶ್ಲೀಲ ನೃತ್ಯ

Viral News: ಬಿಹಾರದ ಬೇಗುಸರಾಯ್ ಜಿಲ್ಲೆಯ ಶಿವನಗರ ಗ್ರಾಮದಲ್ಲಿ ವಿಚಿತ್ರವಾಗಿ ತಾಯಿಯ ಶ್ರಾದ್ಧ ನಡೆಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳ ಬದಲಾಗಿ ರಾತ್ರಿಯಿಡೀ ಅಶ್ಲೀಲ ನೃತ್ಯ ಮಾಡುವ ಮೂಲಕ ಆಚರಿಸಿದ್ದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸದ್ಯ ಇದರ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಿಹಾರದಲ್ಲಿ ನಡೆದ ಶ್ರದ್ಧಾ ಕಾರ್ಯಕ್ರಮದಲ್ಲಿ ಭಜನೆ ಬದಲು ಲೌಂಡಾ ನೃತ್ಯ

ಪಾಟ್ನಾ, ಜೂ. 1: ಹಿಂದೂ ಸಂಪ್ರದಾಯದಲ್ಲಿ ಶ್ರದ್ಧಾ ಆಚರಣೆಗಳು ಸಾಮಾನ್ಯವಾಗಿ ಧಾರ್ಮಿಕ ವಾತಾವರಣದಲ್ಲಿ ನಡೆಸಲಾಗುತ್ತದೆ. ಕುಟುಂಬದ ಸದಸ್ಯರು ಅಗಲಿದ ಆತ್ಮದ ಶಾಂತಿಗಾಗಿ ಭಜನೆ, ಧಾರ್ಮಿಕ ಪ್ರವಚನಗಳನ್ನು ಆಯೋಜಿಸುವುದು ವಾಡಿಕೆ. ಆದರೆ ಬಿಹಾರದ ಬೇಗುಸರಾಯ್ ಜಿಲ್ಲೆಯ ಶಿವನಗರ ಗ್ರಾಮದಲ್ಲಿ ವಿಚಿತ್ರವಾಗಿ ಶ್ರಾದ್ಧ ಆಚರಣೆ ಮಾಡಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳ ಬದಲಾಗಿ, ರಾತ್ರಿಯಿಡೀ ಅಶ್ಲೀಲ ನೃತ್ಯ ಪ್ರದರ್ಶನ ಆಯೋಜಿಸಲಾಗಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಸದ್ಯ ಇದರ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.

ಮೈನಾ ದೇವಿ ಅಲಿಯಾಸ್ ಜಾನಕಿ ದೇವಿ ಮೇ 19ರಂದು ನಿಧನರಾದರು. ಅವರ ಸ್ಮರಣಾರ್ಥ ಮೇ 30ರಂದು ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಇಲ್ಲಿ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮದ ಬದಲು, ಅವರ ಮಗ ಮಹಾರಾಣಾ ಪ್ರತಾಪ್ ಪಾಸ್ವಾನ್ ಬಿಹಾರದ ಕೆಲವು ಭಾಗಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಜಾನಪದ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ

ಹಿಂದೂ ಸಂಪ್ರದಾಯದಲ್ಲಿ ನೃತ್ಯ, ಡಿಜೆ ಮುಂತಾದ ಮನೋರಂಜನಾ ಕಾರ್ಯಕ್ರಮಗಳನ್ನು ಸಂತೋಷದ ಸಮಾರಂಭಗಳಲ್ಲಿ ಆಯೋಜಿಸಲಾಗುತ್ತದೆ. ಆದರೆ ಇಲ್ಲಿ ವೇದಿಕೆಯಲ್ಲಿ ಮೃತ ಮಹಿಳೆಯ ಫೋಟೊ ಅಳವಡಿಸಿ ಅದರ ಮುಂದೆ, ಡ್ಯಾನ್ಸರ್‌ಗಳು ರಾತ್ರಿಯಿಡೀ ಹಿಂದಿ ಮತ್ತು ಭೋಜ್‌ಪುರಿ ಹಾಡುಗಳಿಗೆ ನೃತ್ಯ ಮಾಡಿದ್ದಾರೆ.

ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ವಾರ್ಷಿಕ ಆದಾಯ ಗೊತ್ತಾ? ಐಟಿ ಉದ್ಯೋಗಕ್ಕಿಂತ ಇದೆ ಬೆಸ್ಟ್‌ ಎಂದ ನೆಟ್ಟಿಗರು

ಕಾರ್ಯಕ್ರಮವು ಸಾಂಪ್ರದಾಯಿಕ ಶೋಕ ಆಚರಣೆಯಂತೆ ಕಾಣದೇ ಆರ್ಕೆಸ್ಟ್ರಾ ಪ್ರದರ್ಶನವನ್ನು ಹೋಲುತ್ತಿತ್ತು. ಸ್ಥಳೀಯರು ಮತ್ತು ಬಂದಿದ್ದ ಅತಿಥಿಗಳು ಕೂಡ ಉತ್ಸಾಹದಿಂದ ಈ ನೃತ್ಯವನ್ನು ವೀಕ್ಷಿಸುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ.

ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಅನೇಕರು ಈ ನಡೆಯನ್ನು ಟೀಕಿಸಿದ್ದಾರೆ. ಒಬ್ಬರು ʼʼಇಂತಹ ಮನೋರಂಜನೆಯು ಶ್ರದ್ಧಾ ಸಮಾರಂಭಕ್ಕೆ ಸೂಕ್ತವಲ್ಲʼʼ ಎಂದಿದ್ದಾರೆ. ಮತ್ತೊಬ್ಬರು, ʼʼಆಯಾ ಸಂಸ್ಕೃತಿ ವಿವಿಧ ಪ್ರದೇಶದಲ್ಲಿ ವಿಭಿನ್ನವಾಗಿರುತ್ತದೆʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.