Viral Video: ಕೋರ್ಟ್ನೊಳಗೆ ವಕೀಲರ ಮಾರಾಮಾರಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!
ದೆಹಲಿಯ ಕೃಷ್ಣ ನಗರದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್ಇಎಂ) ಕೋರ್ಟ್‍ನ ಒಳಗೆ ವಕೀಲರ ಎರಡು ಗುಂಪುಗಳ ನಡುವೆ ಜಗಳ ನಡೆದಿದ್ದು, ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿ, ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.


ನವದೆಹಲಿ: ಇತ್ತೀಚೆಗೆ ವಕೀಲರ ಎರಡು ಗುಂಪುಗಳು ಕಕ್ಷಿದಾರನ ಕುರಿತಾಗಿ ಕೋರ್ಟ್ ಒಳಗೆ ಕಿತ್ತಾಡಿಕೊಂಡ ಘಟನೆ ನಡೆದಿದೆ. ಈ ಆಘಾತಕಾರಿ ಘಟನೆ ದೆಹಲಿಯ ಕೃಷ್ಣ ನಗರದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್ಇಎಂ) ಕೋರ್ಟ್‍ನ ಒಳಗೆ ನಡೆದಿದೆಯಂತೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಎರಡೂ ಕಡೆಯವರ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಮತ್ತು ಐಪಿಸಿ 392 (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವೈರಲ್ ಆದ ವಿಡಿಯೊದಲ್ಲಿ ನ್ಯಾಯಾಲಯದ ಒಳಗೆ ಪುರುಷ ಮತ್ತು ಮಹಿಳಾ ವಕೀಲರು ಚಪ್ಪಲಿ ಹಿಡಿದುಕೊಂಡು ಹೊಡೆದಾಡಿದ ದೃಶ್ಯ ಸೆರೆಯಾಗಿದೆ. ಈ ಹೊಡೆದಾಟದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೋರ್ಟ್‌ನೊಳಗೆ ವಕೀಲರು ಹೊಡೆದಾಡಿಕೊಂಡ ವಿಡಿಯೊ ಇಲ್ಲಿದೆ ನೋಡಿ...
#Delhi #WATCH कृष्णा नगर स्थित स्पेशल एग्जीक्यूटिव मैजिस्ट्रिट (एसईएम) कोर्ट में सिर फुटव्वल। कल क्लाइंट लेने को लेकर कोर्ट में वकीलों ने एक दूसके के सिर फोड़े। दोनों ओर से गैर इरादतन हत्या के प्रयास और लूट की धाराओं में केस दर्ज।@SandhyaTimes4u @NBTDilli #DelhiPolice pic.twitter.com/wh8mGylcjq
— Kunal Kashyap (@kunalkashyap_st) April 16, 2025
ವರದಿ ಪ್ರಕಾರ, ಕಕ್ಷಿದಾರರನ ಕುರಿತಾಗಿ ವಕೀಲರ ಎರಡು ಗುಂಪುಗಳ ನಡುವೆ ಕೋರ್ಟ್‍ನೊಳಗೆ ಜಗಳ ನಡೆದಿದೆಯಂತೆ. ನಂತರ ಈ ಜಗಳ ವಿಪರೀತಕ್ಕೆ ಹೋಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರಂತೆ. ಹಾಗಾಗಿ ಎರಡೂ ಕಡೆಯವರ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಮತ್ತು ಐಪಿಸಿ 392 (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಿಯತಮೆ; ವಿಡಿಯೊ ವೈರಲ್
ಕೋರ್ಟ್‍ನೊಳಗೆ ವಕೀಲರು ಹೊಡೆದಾಡಿಕೊಂಡ ಘಟನೆ ವೈರಲ್ ಆಗಿದ್ದು ಇದೆ ಮೊದಲಲ್ಲ. ಈ ಹಿಂದೆ ಪಾಕಿಸ್ತಾನದಲ್ಲಿ ಕೇಸ್ ಒಂದು ನ್ಯಾಯಾಲಯದ ಹೊರಗೆ ಇತ್ಯರ್ಥವಾಗಿದ್ದು, ಆದರೆ ಅದು ತಪ್ಪಾಗಿ ಇತ್ಯರ್ಥವಾದ ಕಾರಣ ಪಾಕಿಸ್ತಾನದ ನ್ಯಾಯಾಲಯದ ಹೊರಗೆ ವಕೀಲರು ಮತ್ತು ಅವರ ಕಕ್ಷಿದಾರರ ನಡುವೆ ಹಿಂಸಾತ್ಮಕ ಜಗಳ ನಡೆದಿತ್ತು. ಈ ಆತಂಕಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ವೈರಲ್ ಆದ ವಿಡಿಯೊದಲ್ಲಿ ನ್ಯಾಯಾಲಯದ ಕಟ್ಟಡದ ಬಳಿಯ ಅಂಗಳಕ್ಕೆ ಬಂದ ವಕೀಲರ ಗುಂಪು ಕುರ್ಚಿಗಳನ್ನು ಎತ್ತಿಕೊಂಡು ಅಲ್ಲಿದ್ದ ಮೂವರು ಕಕ್ಷಿದಾರರ ಮೇಲೆ ದಾಳಿ ಮಾಡಿದ್ದಾರೆ. ಈ ವಾಗ್ವಾದಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಹಿಂಸಾತ್ಮಕವಾದ ಜಗಳವನ್ನು ಕಂಡು ಅಲ್ಲಿದ್ದ ಜನರು ಆಘಾತಗೊಂಡಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶವನ್ನು ಹುಟ್ಟು ಹಾಕಿತ್ತು. ಅನೇಕರು ಕಾನೂನು ವೃತ್ತಿಯ ನೈತಿಕ ಮಾನದಂಡಗಳನ್ನು ಪ್ರಶ್ನಿಸಿದ್ದಾರೆ.