ನವದೆಹಲಿ, ಜೂ. 27: ವಿದೇಶದಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಎಲ್ಲರ ಕನಸು. ಆದರೆ ಅಲ್ಲಿ ಜೀವನ ವೆಚ್ಚ ಇಲ್ಲಿಗೆ ಹೋಲಿಸಿದರೆ ಹಲವು ಪಟ್ಟು ದುಬಾರಿ. ಇದೀಗ ಸ್ವಿಟ್ಜರ್‌ಲ್ಯಾಂಡ್‌ನ 7 ಲಕ್ಷ ರುಪಾಯಿ ಹಾಗೂ ಭಾರತದ 40,000 ರುಪಾಯಿ ಆದಾಯವನ್ನು ಹೋಲಿಕೆ ಮಾಡಿ ದಂಪತಿಶೇರ್ ಮಾಡಿದ ವಿಡಿಯೊವೊಂದು ಭಾರಿ ವೈರಲ್ (Viral News) ಆಗುತ್ತಿದೆ. ಭಾರತದಲ್ಲಿ ವಸತಿಗೆ ಸುಮಾರು 20,000 ರುಪಾಯಿ ವೆಚ್ಚ ಮಾಡಬೇಕಿದ್ದರೆ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸುಮಾರು 2 ಲಕ್ಷ ರುಪಾಯಿ ಬೇಕಾಗುತ್ತದೆ. ಇಲ್ಲಿನ ಜೀವನ ಶೈಲಿ ಅಷ್ಟೊಂದು ದುಬಾರಿ ಎಂದಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ.
ದಿನಸಿ ಬಿಲ್‌ಗಳು, ಸಾರ್ವಜನಿಕ ಸಾರಿಗೆ, ಆರೋಗ್ಯ ವಿಮೆ ಮತ್ತು ಮಕ್ಕಳ ಆರೈಕೆ ಶಿಶುಪಾಲನಾ ವೆಚ್ಚಗಳು ಭಾರತದಲ್ಲಿ ಸುಮಾರು 5,000 ರುಪಾಯಿ ಆಗಿದ್ದರೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 1.5 ಲಕ್ಷ ರುಪಾಯಿ ಎಂದು ಹೇಳಿಕೊಂಡಿದ್ದಾರೆ. ವಿದೇಶದಲ್ಲಿ ಲಕ್ಷ ಲಕ್ಷ ರುಪಾಯಿ ಸಂಬಳ ಸಿಕ್ಕರೂ ಆಯಾ ದೇಶದ ಜೀವನ ವೆಚ್ಚ ಮುಖ್ಯವಾಗುತ್ತದೆ ಎಂದು ಈ ದಂಪತಿ ಹೇಳಿಕೊಂಡಿದ್ದಾರೆ.
ವಿಡಿಯೊ ನೋಡಿ:
ಸ್ವಿಟ್ಜರ್‌ಲ್ಯಾಂಡ್‌ನ 7 ಲಕ್ಷ ರುಪಾಯಿ ಮಾಸಿಕ ಸಂಬಳ ಹಾಗೂ ಭಾರತದ 40,000 ರುರೂಪಾಯಿ ಆದಾಯಕ್ಕೆ ಹೋಲಿಕೆ ಮಾಡಲಾಗಿದೆ. ಚಂತಾಲ್ ಅವರ ಪತಿ ಗುರು ಸ್ವಿಟ್ಜರ್‌ಲ್ಯಾಂಡ್‌ನ ಕಂಟೆಂಟ್ ಕ್ರಿಯೇಟರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ʼʼಗುರು ತಿಂಗಳಿಗೆ 7 ಲಕ್ಷ ರುಪಾಯಿ ಸಂಬಳ ಪಡೆಯುತ್ತಾರೆ ಅಂದ್ರೆ ನಿಮಗೆ ಕೇಳಲು ಅದ್ಭುತ ಎನಿಸಬಹುದು. ಆದರೆ ಇಲ್ಲಿನ ಬಾಡಿಗೆ ಮೊತ್ತ ನೀಡಿದ್ರೆ ನಿಮ್ಮ ಆಯ್ಕೆ ಭಾರತವೋ ಅಥವಾ ಸ್ವಿಟ್ಜರ್‌ಲ್ಯಾಂಡ್‌ನೋ?" ಎಂದು ಪ್ರಶ್ನಿಸಿದ್ದಾರೆ
ಮೊದಲ ಬಾರಿ ಬೆಂಗಳೂರಿಗೆ ಬಂದ ಹಳ್ಳಿ ಯುವಕರನ್ನು ದೋಚಿದ ಆಟೋ ಚಾಲಕ
ದೊಡ್ಡ ಮೊತ್ತದ ಸಂಬಳ ಬಂದರೂ ಇಲ್ಲಿ ಉಳಿತಾಯ ಮಾತ್ರ ಕನಸು ಆಗಿ ಉಳಿದಿದೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿ, ರಸ್ತೆ ಪರಿಸ್ಥಿತಿಗಳು, ಗಾಳಿಯ ಗುಣಮಟ್ಟ, ಭ್ರಷ್ಟಾಚಾರ, ನಾಗರಿಕ ಪ್ರಜ್ಞೆ, ಕಾನೂನು ಸುವ್ಯವಸ್ಥೆ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಹೇಗಿದೆ ಎಂದು ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ವಿಡಿಯೊ ಭಾರಿ ವೈರಲ್ ಆಗಿದ್ದು ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಅನೇಕರು ಹಣಕಾಸಿನ ಹೋಲಿಕೆಯನ್ನು ಮೆಚ್ಚಿಕೊಂಡಿದ್ದಾರೆ. ನೆಟ್ಟಿಗರೊಬ್ಬರು, "ಹೆಚ್ಚಿನ ಉಳಿತಾಯ ಮುಖ್ಯವೋ? ಅಥವಾ ಸುರಕ್ಷಿತ ಜೀವನ ಮುಖ್ಯವೋ?" ಎಂದು ಪ್ರಶ್ನಿಸಿದ್ದಾರೆ.