Viral News: ಮೊದಲ ಬಾರಿ ಬೆಂಗಳೂರಿಗೆ ಬಂದ ಹಳ್ಳಿ ಯುವಕರನ್ನು ದೋಚಿದ ಆಟೋ ಚಾಲಕ; ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ
ಬೆಂಗಳೂರಿನ ಆಟೋ ಚಾಲಕನೊಬ್ಬ ಹಳ್ಳಿಯಿಂದ ಮೊದಲ ಬಾರಿಗೆ ನಗರಕ್ಕೆ ಬಂದಿದ್ದ ಯುವಕರನ್ನು ದೋಚಿದ್ದಾನೆ ಎಂದು ಟೆಕ್ಕಿಯೊಬ್ಬ ಸಾಮಾಜಿಕ ಮಾಧ್ಯಮದ ಮೂಲಕ ಹೇಳಿಕೊಂಡಿದ್ದಾರೆ. ಬಸ್ ನಿಲ್ದಾಣಕ್ಕೆ ಹೋಗಲು ತಲಾ 50 ರೂ. ಬಾಡಿಗೆ ಬದಲಿಗೆ ಆತ ಯುವಕರಿಂದ 2,400 ರೂ. ಗಳನ್ನು ಪಡೆದಿದ್ದಾನೆ ಎಂದು ಆರೋಪಿಸಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ಹಳ್ಳಿಯಿಂದ ಮೊದಲ ಬಾರಿಗೆ ಪೇಟೆಗೆ ಬಂದಿದ್ದ ಹದಿ ಹರೆಯದ ಯುವಕರಿಬ್ಬರನ್ನು ಬೆಂಗಳೂರಿನ ಆಟೋ ಚಾಲಕನೊಬ್ಬ ( Bengaluru auto driver) ಸುಲಿಗೆ ಮಾಡಿದ್ದಾನೆ ಎಂದು ಟೆಕ್ಕಿಯೊಬ್ಬರು (bengaluru Techie) ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಇದು ಬಾರಿ ವೈರಲ್ (Viral news) ಆಗಿದೆ. ಆಟೋ (Bengaluru auto) ಚಾಲಕನು ಯುವಕರನ್ನು ಬಸ್ ನಿಲ್ದಾಣಕ್ಕೆ ಬಿಡಲು ತಲಾ 50 ರೂ. ಬಾಡಿಗೆ ಬದಲಿಗೆ 2,400 ರೂ. ಗಳನ್ನು ಪಡೆದಿದ್ದಾನೆ ಎಂದು ಟೆಕ್ಕಿ ಆರೋಪಿಸಿದ್ದಾರೆ. ಈ ಘಟನೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣದ ಬಳಿ ನಡೆದಿದೆ.
ಬೆಂಗಳೂರು ನಗರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದ ಇಬ್ಬರು ಯುವಕರನ್ನು ಬೆಂಗಳೂರಿನ ಆಟೋ ಚಾಲಕ ದೋಚಿದ್ದಾನೆ. ಸಾನು ಎಂಬ ಬೆಂಗಳೂರಿನ ಟೆಕ್ಕಿ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆಟೋ ಚಾಲಕನು ಯುವಕರ ಬಳಿ 3,000 ರೂ. ಗೆ ಬೇಡಿಕೆ ಇಟ್ಟಿದ್ದಾನೆ. ಕೊನೆಗೆ 2,400 ರೂ. ಗಳನ್ನು ನೀಡುವಂತೆ ಒತ್ತಾಯಿಸಿದ್ದಾನೆ ಎಂದು ಅವರು ಹೇಳಿದ್ದಾರೆ.
ನೀಟ್ ಮರು ಪರೀಕ್ಷೆ: ನಿರ್ಬಂಧ ಮುಕ್ತಾಯದ ಬಳಿಕ ಮತ್ತೆ ಟೆಲಿಗ್ರಾಮ್ ಆ್ಯಪ್ ಆ್ಯಕ್ಟೀವ್
ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣದ ಬಳಿ ಸುಮಾರು 16-18 ವರ್ಷ ವಯಸ್ಸಿನ ಇಬ್ಬರು ಯುವಕರು ಹೊಸೂರಿಗೆ ತೆರಳುವ ಬಸ್ ನಿಲ್ದಾಣವಾದ ಅತ್ತಿಬೆಲೆಗೆ ಬಿಡಲು ಆಟೋ ಚಾಲಕನ ಬಳಿ ಕೇಳಿಕೊಂಡಿದ್ದಾರೆ. ಆಟೋ ಚಾಲಕ ಮೊದಲು ತಲಾ 50 ರೂ.ಗಳಿಗೆ ಅವರನ್ನು ಬಿಡಲು ಒಪ್ಪಿಕೊಂಡಿದ್ದಾನೆ. ಬಸ್ ನಿಲ್ದಾಣ ತಲುಪುತ್ತಿದ್ದಂತೆ ಆಟೋ ಚಾಲಕ ಅವರ ಬಳಿ 35 ಕಿ.ಮೀ ಪ್ರಯಾಣಕ್ಕೆ 3000 ರೂ. ಕೇಳಿದ್ದಾನೆ. ಇದರಿಂದ ಭಯಭೀತರಾದ ಯುವಕರು ತನಗೆ ಕರೆ ಮಾಡಿದ್ದಾರೆ. ಅವರು ನನ್ನೊಂದಿಗೆ ಮಾತನಾಡುತ್ತಿದ್ದಾಗಲೇ ಆಟೋ ಚಾಲಕ ಅವರಿಂದ ಮೊಬೈಲ್ ಕಸಿದುಕೊಂಡಿದ್ದಾನೆ. ಬಳಿಕ ಅವರು ಕರೆಗಳಿಗೆ ಉತ್ತರಿಸಲಿಲ್ಲ.
ಸಾಕಷ್ಟು ಬೇಡಿಕೊಂಡ ಬಳಿಕ ಆಟೋ ಚಾಲಕ ಮೊಬೈಲ್ ಹಿಂದಿರುಗಿಸಿದ್ದು, ಅವರು ಅತ್ತಿಬೆಲೆ ಬಸ್ ನಿಲ್ದಾಣಕ್ಕೆ ಬರಲು 2,000 ರೂ.ಗಳನ್ನು ಖರ್ಚು ಮಾಡಿದ್ದಾಗಿ ಹೇಳಿದ್ದಾರೆ ಎಂದು ಸಾನು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
Bangalore auto walas are brutal to innocent people!
— Sanu (@SanuThink) June 22, 2026
Hoping to earn their livelihood, two young boys from a village just reached SMVT railway station. They took an auto to Attibele as they wanted to go to Hosur.
After the ride, the auto driver demanded ₹3000 just for 35 km???…
ಈ ಪೋಸ್ಟ್ ಅನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಎಂದು ಹೇಳಿರುವ ಸಾನು, ಆಟೋ ಚಾಲಕನಿಗೆ ಪಾವತಿ ಮಾಡಿರುವ ಯುಪಿಐ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ಆಟೋ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಒಬ್ಬರು ಕಾಮೆಂಟ್ ಮಾಡಿ, ನಗರಕ್ಕೆ ಕೆಟ್ಟ ಹೆಸರು ತರುವ ಜನರ ಪಟ್ಟಿಯಲ್ಲಿ ಆಟೋ ಗೂಂಡಾಗಳು ಅಗ್ರಸ್ಥಾನದಲ್ಲಿದ್ದಾರೆ. ಅವರು ಒಂದು ವರ್ಗದ ಗೂಂಡಾಗಳು ಎಂದು ಹೇಳಿದ್ದಾರೆ. ಇನ್ನೊಬ್ಬರು ಇದು ಸ್ವೀಕಾರಾರ್ಹವಲ್ಲ. ಮಿತಿಮೀರಿದ ಶುಲ್ಕ ವಿಧಿಸುವುದು ಮತ್ತು ಫೋನ್ ಕಸಿದುಕೊಳ್ಳುವುದು ಗಂಭೀರ ಆರೋಪಗಳಾಗಿವೆ ಎಂದು ತಿಳಿಸಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ: ರಾಷ್ಟ್ರೀಯ ಅಧ್ಯಕ್ಷರಿಗೆ ಸಮಗ್ರ ವರದಿ ಸಲ್ಲಿಸುತ್ತೇವೆ ಎಂದ ವಿಜಯೇಂದ್ರ
ಇನ್ನೊಬ್ಬರು ಕಾಮೆಂಟ್ ನಲ್ಲಿ ಬೆಂಗಳೂರು ಆಟೋ ಚಾಲಕರು ಅತ್ಯಂತ ಕೆಟ್ಟವರು. ದೆಹಲಿ ಕೆಟ್ಟವರು ಎಂದು ನಾನು ಭಾವಿಸಿದ್ದೆ ಆದರೆ ಬೆಂಗಳೂರಿನ ಆಟೋ ಚಾಲಕರು ನಗರಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ. ಈ ಗೂಂಡಾಗಳು ರಸ್ತೆಯನ್ನು ಹೊಂದಿದ್ದಾರೆ ಎಂಬಂತೆ ಅತಿಯಾದ ವರ್ತನೆ ತೋರುತ್ತಾರೆ ಎಂದು ಹೇಳಿದ್ದಾರೆ.