ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆಟಿಕೆ ಮಾರುತ್ತಿದ್ದ ತಂದೆಯ ಕಾಲನ್ನು ತಬ್ಬಿ ಹಿಡಿದು ನಿದ್ರಿಸಿದ ಬಾಲಕ: ಕಣ್ಣಂಚು ಒದ್ದೆಯಾಗಿಸುವ ವಿಡಿಯೊ ಇಲ್ಲಿದೆ

Viral Video: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಮಾರುಕಟ್ಟೆಯ ಜನಸಂದಣಿಯಲ್ಲಿ ವ್ಯಾಪಾರಕ್ಕಾಗಿ ಕೂಗುತ್ತಿರುವ ತಂದೆ, ಇವೆಲ್ಲದರ ನಡುವೆ ಪುಟ್ಟ ಮಗುವೊಂದು ತಂದೆಯ ಕಾಲನ್ನೇ ಗಟ್ಟಿಯಾಗಿ ಹಿಡಿದಿಟ್ಟು ರಸ್ತೆಯಲ್ಲೇ ಮಲಗಿರುವ ದೃಶ್ಯ ನೋಡುಗರ ಕಣ್ಣುಗಳನ್ನು ತೇವಗೊಳಿಸುತ್ತಿದೆ.

ತಂದೆಯ ಕಾಲುಗಳನ್ನೇ ಹಿಡಿದು ನಿದ್ರಿಸಿದ ಬಾಲಕ

ದೆಹಲಿ, ಡಿ. 8: ಜೀವನದ ಬಂಡಿ ಸಾಗಿಸಲು ಕಷ್ಟಪಟ್ಟು ದುಡಿಯುತ್ತೇವೆ. ಅದರಲ್ಲೂ ಬದುಕನ್ನು ಮುನ್ನಡೆಸುವಾಗ ಹಲವು ರೀತಿಯ ಕಠಿಣ ಸನ್ನಿವೇಶಗಳು ಬರುತ್ತವೆ. ಮಗುವನ್ನೇ ಅಪ್ಪಿಕೊಂಡು ತಾಯಿ ದುಡಿಯುತ್ತಿರುವ ದೃಶ್ಯ, ಬಲೂನ್, ಆಟಿಕೆ ಮಾರಿ ಜೀವನ ಸಾಗಿಸುವ ಅಪ್ಪ...ಹೀಗೆ ಅನೇಕ ಕರುಳು ಹಿಂಡುವ ಕಥೆಯನ್ನು ನೀವು ಕೇಳಿರಬಹುದು...ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ಒಂದು ಕಣ್ಣಂಚು ಇದ್ದೆಯಾಗಿಸುವ ವಿಡಿಯೊ ವೈರಲ್ (Viral Video) ಆಗಿದೆ. ಮಾರುಕಟ್ಟೆಯ ಜನಸಂದಣಿಯಲ್ಲಿ ವ್ಯಾಪಾರಕ್ಕಾಗಿ ಕೂಗುತ್ತಿರುವ ತಂದೆ, ಇವೆಲ್ಲದರ ನಡುವೆ ಪುಟ್ಟ ಮಗುವೊಂದು ತಂದೆಯ ಕಾಲನ್ನೇ ಗಟ್ಟಿಯಾಗಿ ತಬ್ಬಿಕೊಂಡು ರಸ್ತೆಯಲ್ಲೇ ಮಲಗಿರುವ ದೃಶ್ಯ ನೋಡುಗರ ಕಣ್ಣುಗಳನ್ನು ತೇವಗೊಳಿಸುತ್ತಿದೆ.

ಬಡತನ ಎನ್ನುವುದು ಜೀವನಕ್ಕೆ ಪಾಠ ಕಲಿಸುತ್ತದೆ ಎನ್ನುವುದಕ್ಕೆ ಈ ಘಟನೆಯೇ ಜ್ವಲಂತ ಸಾಕ್ಷಿ. ಒಂದೆಡೆ ಹೊಟ್ಟೆ ತುಂಬಿಸಲು ಪಡುವ ಕಷ್ಟ, ಇನ್ನೊಂದಡೆ ತಂದೆಯ ಮಮತೆಯನ್ನು ಸಾರುವ ಈ ವಿಡಿಯೋ ಎಲ್ಲರ ಹೃದಯ ಗೆದ್ದಿದೆ. ದೆಹಲಿಯ ಜನನಿಬಿಡ ರಸ್ತೆಯೊಂದರಲ್ಲಿ ಈ ಘಟನೆ ಕಂಡು ಬಂದಿದ್ದು ಆಟಿಕೆಗಳನ್ನು ಮಾರುತ್ತಿದ್ದ ವ್ಯಕ್ತಿಯೊಬ್ಬರ ಪುಟ್ಟ ಮಗ ತಂದೆಯ ಕಾಲಿಗೆ ಅಂಟಿ ಕೊಂಡು ಮಲಗಲು ಪ್ರಯತ್ನಿಸುತ್ತಿರುವ ದೃಶ್ಯವು ಜನರನ್ನು ತುಂಬಾ ದುಃಖಿತರನ್ನಾಗಿ ಮಾಡಿದೆ.

ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ:



ತಂದೆಯು ಬುಟ್ಟಿಯಿಂದ ಆಟಿಕೆಗಳನ್ನು ತೋರಿಸುತ್ತ ಗ್ರಾಹಕರನ್ನು ಮನವೋಲಿಸುತ್ತಿದ್ದರೆ ಅತ್ತ ಮಗು ಅಪ್ಪನ ಕಾಲಿಗೆ ಅಂಟಿಕೊಂಡು ನಿದ್ರಿಸುತ್ತಿದೆ. ಗ್ರಾಹಕರನ್ನು ಸೆಳೆಯಲು ತಂದೆಯು ಆಟಿಕೆಯಿಂದ ಶಬ್ದ ಮಾಡುತ್ತ ಕೂಗುತ್ತಿರುವುದು ಕಂಡು ಬಂದಿದೆ. ಜನ ಸಂದಣಿಯ ನಡುವೆಯೂ ಪುಟ್ಟ ಬಾಲಕ ತನ್ನ ತಂದೆ‌ ಕಾಲನ್ನು ಬಿಗಿಯಾಗಿ ಹಿಡಿದು ಮಲಗಿರುವುದು ಗಮನ ಸೆಳೆದಿದೆ. ಈ ಆಟಿಕೆ ಮಾರಾಟಗಾರನಿಗೆ ಸಹಾಯ ಮಾಡಲು ಮತ್ತೊಬ್ಬ ಬಾಲಕ ಇದ್ದಾನೆ. ಬಹುಶಃ ಇನ್ನೊಬ್ಬ ಮಗ ಇರಬೇಕು ಆತ.

ಮಗುವಿನ ತೂಕಕ್ಕಿಂತ ಶಾಲಾ ಬ್ಯಾಗ್ ತೂಕವೇ ಹೆಚ್ಚಾಯಿತೇ? ತಂದೆಯ ಭಾವುಕ ಪೋಸ್ಟ್ ವೈರಲ್!

ವಿಡಿಯೊ ನೋಡಿದ ಒಬ್ಬರು ಬಡತನದ ನಿದ್ರೆ ಎಷ್ಟು ಮುಗ್ಧವಾಗಿದೆ. ಮಗುವಿಗೆ ಹಾಸಿಗೆ ಇಲ್ಲದಿದ್ದರೆ ಏನಂತೆ; ತಂದೆಯ ಕಾಲುಗಳಲ್ಲೇ ನಿದ್ರೆ ಸಿಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಬಡತನದ ಜೀವನ ತುಂಬಾ ಕಷ್ಟ. ಆದರೆ ಈ ‌ಮಗು‌ ಜಗತ್ತಿನ ಅತ್ಯಂತ ಸುರಕ್ಷಿತ ಸ್ಥಳದಲ್ಲಿದ್ದಾನೆ ಎಂದು ಹೇಳಿದ್ದಾರೆ. ಇರುವುದರಲ್ಲಿ ನಾವು ಖುಷಿ ಪಡಬೇಕು ಎಂಬುದಕ್ಕೆ ಈ ದೃಶ್ಯ ಸಾಕ್ಷಿ. ಇಂತಹ ವ್ಯಾಪಾರಿಗಳಿಂದ ನಾವು ವಸ್ತುಗಳನ್ನು ಖರೀದಿಸುವ ಮೂಲಕ ಜನರು ನೆರವಾಗಬೇಕು ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.