Viral Video: ಅರಳು ಹುರಿದಂತೆ ʼಶಿವ ತಾಂಡವ ಸ್ತೋತ್ರ ಪಠಿಸಿದ ಪುಟ್ಟ ಹುಡುಗಿ- ವಿಡಿಯೊ ನೋಡಿ ನೆಟ್ಟಿಗರು ಫುಲ್ ಶಾಕ್!
ಜೋಧ್‌ಪುರದಲ್ಲಿ ಸಂಸ್ಕೃತಿ ಸಚಿವಾಲಯದ "ಏಕ್ ದೇಶ್, ಏಕ್ ಧಡ್ಕನ್" ಉಪಕ್ರಮದ ಭಾಗವಾಗಿ ನಡೆದ ತಿರಂಗ ಯಾತ್ರೆಯ ಸಂದರ್ಭದಲ್ಲಿ ಪುಟ್ಟ ಹುಡುಗಿಯೊಬ್ಬಳು ಶಿವ ತಾಂಡವ ಸ್ತೋತ್ರವನ್ನು ಪಠಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಅವಳ ನಿಶ್ಕಲ್ಮಶವಾದ ಭಕ್ತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.


ಚಿಕ್ಕಮಕ್ಕಳು ಏನೇ ಮಾತನಾಡಿದರೂ, ಹಾಡು ಹೇಳಿದರೂ ಅದು ಕೇಳಲು ಬಹಳ ಸೊಗಸಾಗಿರುತ್ತದೆ. ಅಂತಹದರಲ್ಲಿ ಪುಟ್ಟ ಹುಡುಗಿಯೊಬ್ಬಳು ವಯಸ್ಕರಿಗೂ ಪಠಿಸಲು ಕಷ್ಟಕರವಾದ ಶಿವ ತಾಂಡವ ಸ್ತೋತ್ರವನ್ನು ಉತ್ಸಾಹದಿಂದ ಪಠಿಸಿದ್ದಾಳೆ. ಉಜ್ಜಯಿನಿಯ ಮಹಾಕಾಳೇಶ್ವರಕ್ಕೆ ತೀರ್ಥಯಾತ್ರೆ ಮಾಡಲು ಅಥವಾ ಉತ್ತರಾಖಂಡದ ಕೇದಾರನಾಥದಲ್ಲಿ ಆಶೀರ್ವಾದ ಪಡೆಯಲು ಭಕ್ತರು ಸಿದ್ಧರಾಗುತ್ತಿರುವಾಗ, ಪುಟ್ಟ ಶಿವಭಕ್ತೆಯ ಈ ಶಿವ ತಾಂಡವ ಸ್ತೋತ್ರ( Shiva Tandava Stotram) ಪಠನೆಯ ವಿಡಿಯೊ ವೈರಲ್(Viral Video) ಆಗಿ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ಅವಳ ನಿಶ್ಕಲ್ಮಶವಾದ ಭಕ್ತಿ ನೆಟ್ಟಿಗರ ಹೃದಯಗಳನ್ನು ಗೆದ್ದಿದೆ.
ಸಂಸ್ಕೃತಿ ಸಚಿವಾಲಯದ "ಏಕ್ ದೇಶ್, ಏಕ್ ಧಡ್ಕನ್" ಉಪಕ್ರಮದ ಭಾಗವಾಗಿ ನಡೆದ ತಿರಂಗ ಯಾತ್ರೆಯ ಸಂದರ್ಭದಲ್ಲಿ ಜೋಧ್‌ಪುರದಲ್ಲಿ ಈ ಪ್ರದರ್ಶನವನ್ನು ರೆಕಾರ್ಡ್ ಮಾಡಲಾಗಿದೆ ಎಂದು ವರದಿಯಾಗಿದೆ. ಈ ವೈರಲ್ ವಿಡಿಯೊದಲ್ಲಿ ಶಾಲಾ ಸಮವಸ್ತ್ರ ಧರಿಸಿದ ಪುಟ್ಟ ಹುಡುಗಿಯೊಬ್ಬಳು ಆತ್ಮವಿಶ್ವಾಸದಿಂದ ' ಶಿವ ತಾಂಡವ ಸ್ತೋತ್ರಂ' ಪಠಿಸುತ್ತಿರುವುದು ಸೆರೆಯಾಗಿದೆ. ಇದು ಶಿವನಿಗೆ ಅರ್ಪಿತವಾದ ಮತ್ತು ಹೆಚ್ಚಾಗಿ ರಾವಣನಿಗೆ ಸಮರ್ಪಿತವಾದ ಸ್ತೋತ್ರವಾಗಿದೆ. ಯಾವುದೇ ದೋಷವಿಲ್ಲದೇ ಈ ಸ್ತೋತ್ರವನ್ನು ಆ ಪುಟ್ಟ ಹುಡುಗಿ ಅದ್ಭುತವಾಗಿ ಉಚ್ಚಾರಣೆ ಮಾಡಿದ್ದು, ಇದು ಲಕ್ಷಾಂತರ ಜನರನ್ನು ಆಕರ್ಷಿಸಿದೆ. ಹಾಗಾಗಿ ಆ ಹುಡುಗಿಯನ್ನು ನೆಟ್ಟಿಗರು ಹೃದಯ ಅರವಿಂದ್ ಪುರೋಹಿತ್ ಎಂದು ಗುರುತಿಸಿದರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಆಕೆಯ ಧ್ವನಿ ಸ್ಪಷ್ಟತೆ ಮತ್ತು ಆತ್ಮವಿಶ್ವಾಸದಿಂದ ಹೇಳುವುದು ಅಲ್ಲಿದ್ದ ಪ್ರೇಕ್ಷಕರನ್ನು ಮಾತ್ರವಲ್ಲವೇ ಸೋಶಿಯಲ್ ಮೀಡಿಯಾ ನೆಟ್ಟಿಗರನ್ನು ಬೆರಗಾಗಿಸಿದೆ.
ಬಾಲಕಿಯ ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ 3.2 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳು ಮತ್ತು 16,000 ಕಾಮೆಂಟ್‌ಗಳನ್ನು ಗಳಿಸಿದೆ. ನೆಟ್ಟಿಗರು ಹುಡುಗಿಯ ಸ್ತೋತ್ರ ಪಠಿಸುವ ರೀತಿ ಮತ್ತು ಭಕ್ತಿಯನ್ನು ಹೊಗಳಿದ್ದಾರೆ. ಅನೇಕ ನೆಟ್ಟಿಗರು ಅವಳ ಪಠಣದ ಸಮಯದಲ್ಲಿ ರೋಮಾಂಚನಗೊಂಡಿದ್ದನ್ನು ಗಮನಿಸಿದರೆ, ಇತರರು ಕಾಮೆಂಟ್‌ಗಳಲ್ಲಿ "ದೇವರು ಅವಳನ್ನು ಆಶೀರ್ವದಿಸಲಿ" ಎಂಬಂತಹ ಹೃತ್ಪೂರ್ವಕ ಸಂದೇಶಗಳನ್ನು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಜಿಪ್‍ಲೈನ್ ಮಾಡುವಾಗ ಕೆಳಗೆ ಉರುಳಿ ಬಿದ್ದ ಪುರೋಹಿತ; ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ನೇತೃತ್ವದಲ್ಲಿ ನಡೆದ ತಿರಂಗ ಯಾತ್ರೆಯು ಸಂಸ್ಕೃತಿ ಸಚಿವಾಲಯದ "ಏಕ್ ದೇಶ್, ಏಕ್ ಧಡ್ಕನ್" (ಒಂದು ರಾಷ್ಟ್ರ, ಒಂದು ಹೃದಯ ಬಡಿತ) ಕಾರ್ಯಕ್ರಮದ ಅಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮವು ವಿವಿಧ ಸಮುದಾಯಗಳಲ್ಲಿ ಏಕತೆ ಮತ್ತು ದೇಶಭಕ್ತಿಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ತಿರಂಗ ಯಾತ್ರೆಯಲ್ಲಿ ಹೆಚ್ಚಿನ ಜನರು ಭಾಗವಹಿಸಿದ್ದರು, ಅಲ್ಲಿ ಎಲ್ಲಾ ವಯೋಮಾನದ ವ್ಯಕ್ತಿಗಳು ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಆಚರಿಸಲು ಕೈಜೋಡಿಸಿದರು. ಸಚಿವಾಲಯದ "ಏಕ್ ದೇಶ್, ಏಕ್ ಧಡ್ಕನ್" ಅಭಿಯಾನವು ರಾಷ್ಟ್ರೀಯ ಹೆಮ್ಮೆ ಮತ್ತು ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯೊಂದಿಗೆ ಭಾವನಾತ್ಮಕ ಬಾಂಧವ್ಯವನ್ನು ಪ್ರೇರೇಪಿಸುತ್ತದೆ.