Russia Tsunami: ರಷ್ಯಾ ಸುನಾಮಿಯ ರಣ ಭೀಕರ ದೃಶ್ಯ ಡ್ರೋನ್‌ನಲ್ಲಿ ಸೆರೆ- ಇಲ್ಲಿದೆ ವಿಡಿಯೊ
ರಷ್ಯಾದ ಪೂರ್ವ ಭಾಗದ ಕರಾವಳಿ ನಗರವಾದ ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯ ಆಗ್ನೇಯ ಭಾಗದ ಸುಮಾರು 125 ಕಿ.ಮೀ ದೂರದಲ್ಲಿ ಉಂಟಾದ ಭೂಕಂಪನದಿಂದಾಗಿ ಸೆವೆರೊ- ಕುರಿಲ್ಸ್ ಕ್ ನಲ್ಲಿ ಸುನಾಮಿ ಕಾಣಿಸಿಕೊಂಡಿದೆ. ಇದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ಡ್ರೋನ್ ದೃಶ್ಯಾವಳಿಗಳು ಇಲ್ಲಿವೆ.


ರಷ್ಯಾ: ಸುನಾಮಿಯಿಂದ (Tsunami) ರಷ್ಯಾದ ಕರಾವಳಿ (Russian coast) ಭಾಗದಲ್ಲಿ ಪ್ರವಾಹ ಪೀಡಿತ (Flood affected) ಸನ್ನಿವೇಶ ಸೃಷ್ಟಿಯಾಗಿದೆ. ಇದರ ದೃಶ್ಯಗಳನ್ನು ಡ್ರೋನ್ ಕೆಮರಾದಲ್ಲಿ ( Drone Footage) ಚಿತ್ರಿಸಲಾಗಿದೆ. ರಷ್ಯಾದ ಕಮ್ಚಟ್ಕಾ (Kamchatka) ಕರಾವಳಿಯ ಕೆಲವು ಭಾಗಗಳಲ್ಲಿ ಬುಧವಾರ 3 ರಿಂದ 4 ಮೀಟರ್‌ವರೆಗಿನ ಸುನಾಮಿ ಅಲೆಗಳು ಕಾಣಿಸಿಕೊಂಡಿದ್ದು, ಹತ್ತಿರದ ಭೂಭಾಗವನ್ನು ಅತಿಕ್ರಮಿಸಿಕೊಂಡಿತ್ತು. ಸುನಾಮಿ ಪೀಡಿತ ಬಂದರು ಪಟ್ಟಣದಲ್ಲಿನ ಕಟ್ಟಡಗಳು ಸಮುದ್ರದ ನೀರಿನಲ್ಲಿ ಮುಳುಗಿದ್ದು, ಸುಮಾರು 2,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ರಷ್ಯಾದ ಸೆವೆರೊ- ಕುರಿಲ್ಸ್ ಕ್ ನಲ್ಲಿ ಸುನಾಮಿಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 1952ರ ಬಳಿಕ ಅತ್ಯಂತ ಪ್ರಬಲವಾದ ಭೂಕಂಪ ರಷ್ಯಾದ ಪೂರ್ವ ಭಾಗದ ಕರಾವಳಿ ನಗರವಾದ ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯ ಆಗ್ನೇಯದಲ್ಲಿ ಸುಮಾರು 125 ಕಿ.ಮೀ ದೂರದಲ್ಲಿ ನಡೆದಿದೆ. ಸುಮಾರು 19.3 ಕಿ.ಮೀ ಆಳದಲ್ಲಿ ಭೂಕಂಪನ ಉಂಟಾಗಿದ್ದು, ಇದರಿಂದ ಕಮ್ಚಟ್ಕಾ ಕರಾವಳಿಯ ಕೆಲವು ಭಾಗಗಳಲ್ಲಿ 3 ರಿಂದ 4 ಮೀಟರ್ ವರೆಗಿನ ಸುನಾಮಿ ಅಲೆಗಳು ಕಾಣಿಸಿಕೊಂಡಿದೆ ಎಂದು ಪ್ರಾದೇಶಿಕ ಭೂಕಂಪನ ಮೇಲ್ವಿಚಾರಣಾ ಸೇವೆ ತಿಳಿಸಿದೆ.
ಕಮ್ಚಟ್ಕಾ ವಿರಳ ಜನಸಂಖ್ಯೆ ಇರುವ ದ್ವೀಪವಾಗಿದ್ದು, ಇಲ್ಲಿ ಭೂಕಂಪನ ಸಂಭವಿಸಿದ ಬಳಿಕ ಸೆವೆರೊ- ಕುರಿಲ್ಸ್ ಕ್ ನಲ್ಲಿ ಸುನಾಮಿ ಅಲೆಗಳು ಕಾಣಿಸಿಕೊಂಡಿದೆ ಎಂದು ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಭೂಭೌತಿಕ ಸಮೀಕ್ಷೆ ತಿಳಿಸಿದೆ. ಇದರ ವೈಮಾನಿಕ ದೃಶ್ಯಗಳನ್ನು ಬಿಡುಗಡೆ ಮಾಡಲಾಗಿದೆ. ಕಮ್ಚಟ್ಕಾದಲ್ಲಿ 8.8 ತೀವ್ರತೆಯ ಭೂಕಂಪದ ಬಳಿಕ ಪೆಸಿಫಿಕ್‌ನಾದ್ಯಂತ ನಾಲ್ಕು ಮೀಟರ್ ಅಂದರೆ ಸರಿಸುಮಾರು 12 ಅಡಿಗಳ ವರೆಗಿನ ಸುನಾಮಿ ಉಂಟಾಗಿದೆ. ಇದು ಯುಎಸ್, ಜಪಾನ್, ಚೀನಾ ಮತ್ತು ನ್ಯೂಜಿಲೆಂಡ್‌ವರೆಗೆ ಸಾಗಿದೆ.
❗️Huge List Of Warnings & Advisories Reveals Severity Of #Tsunami Following Massive M8.7 Earthquake Hit Kamchatka
— RT_India (@RT_India_news) July 30, 2025
🇷🇺 Russia (Kamchatka, Kuril Islands)
🇯🇵 Japan (coastal regions: Hokkaido, Pacific coast)
🇺🇸 United States
- Hawaii (warning)
- Alaska (Aleutians, warning/advisory)… pic.twitter.com/pcbubiqBkF
ಸುನಾಮಿ ಪೀಡಿತ ಬಂದರು ಪಟ್ಟಣದಲ್ಲಿನ ಕಟ್ಟಡಗಳು ಸಮುದ್ರದ ನೀರಿನಲ್ಲಿ ಮುಳುಗಿದ್ದು, ಇಲ್ಲಿನ ಸುಮಾರು 2,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಸಚಿವಾಲಯ, ಸೆವೆರೊ-ಕುರಿಲ್ಸ್ ಕ್ ಬಂದರು ಪಟ್ಟಣದ ಕೆಲವು ಭಾಗಗಳನ್ನು ಸುನಾಮಿಯಿಂದ ಪ್ರವಾಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭೂಕಂಪದಿಂದ ಹಲವಾರು ಜನರು ಗಾಯಗೊಂಡಿದ್ದಾರೆ. ಆದರೆ ಯಾವುದೇ ಗಂಭೀರ ಪ್ರಕರಣಗಳಿಲ್ಲ ಎಂದು ತಿಳಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗವರ್ನರ್ ವ್ಲಾಡಿಮಿರ್ ಸೊಲೊಡೊವ್, ಸುನಾಮಿ ಎಚ್ಚರಿಕೆ ನೀಡಲಾಗಿದೆ ಮತ್ತು ಅಲೆಯ ಬಲವನ್ನು ಪರಿಶೀಲಿಸಲಾಗುತ್ತಿದೆ. ಸುನಾಮಿ ಪೀಡಿತ ಪ್ರದೇಶಗಳಲ್ಲಿ ಜನರು ಕರಾವಳಿ ಭಾಗದಿಂದ ದೂರವಿರಲು ನಿರಂತರ ಧ್ವನಿವರ್ಧಕಗಳಲ್ಲಿ ಪ್ರಕಟಣೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಮ್ಚಟ್ಕಾ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಭೂಕಂಪನವು 1952ರ ಬಳಿಕ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪನವಾಗಿದೆ. ಈ ಪ್ರದೇಶದಲ್ಲಿ 7.5 ತೀವ್ರತೆಯವರೆಗಿನ ಭೂಕಂಪನಗಳನ್ನು ನಿರೀಕ್ಷಿಸಲಾಗಿತ್ತು.
ಇದನ್ನೂ ಓದಿ: Baba Vanga Prediction: ರಷ್ಯಾದಲ್ಲಿ ಭೂಕಂಪ, ಜಪಾನಿನಲ್ಲಿ ಸುನಾಮಿ... ಮತ್ತೆ ನಿಜವಾಗಿದೆ ವಂಗಾ ಭವಿಷ್ಯವಾಣಿ!
ಈ ಪ್ರದೇಶದಲ್ಲಿ 6.9 ತೀವ್ರತೆಯ ಒಂದು ಮತ್ತು 6.3 ತೀವ್ರತೆಯ ಮತ್ತೊಂದು ಕಂಪನ ಸೇರಿದಂತೆ ಸುಮಾರು ಆರು ಭೂಕಂಪನಗಳು ಉಂಟಾಗಿದೆ. ಇದರ ಕೇಂದ್ರಬಿಂದುವು ಪೆಸಿಫಿಕ್‌ನಲ್ಲಿ ವಿನಾಶಕಾರಿ ಸುನಾಮಿಗೆ ಕಾರಣವಾದ 9.0 ತೀವ್ರತೆಯ ಬೃಹತ್ ಭೂಕಂಪದಂತೆಯೇ ಇತ್ತು ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.