ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಲಕ್ಷ ಲಕ್ಷ ರೂ. ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಕನಸಿನ ಬೆನ್ನು ಹತ್ತಿದ ಯುವಕ

ಐಐಎಂ ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿ, ಅನಿಲ್ ಜಾಂಗಿಡ್ ಗಾಯಕನಾಗುವ ಆಸೆಯಿಂದ ಅಮೆಜಾನ್‌ನ ಉನ್ನತ ಹುದ್ದೆಯನ್ನು ತ್ಯಜಿಸಿದ್ದಾರೆ. ಈ ವಿಚಾರವನ್ನು ಅವರ ಸ್ನೇಹಿತ ಶ್ರವಣ್ ಟಿಕೂ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೇಜ್‍ನಲ್ಲಿ ಪೋಸ್ಟ್‌ ಮಾಡಿದ್ದು, ವೈರಲ್‌ ಆಗಿದೆ.

ವೃತ್ತಿ ಬದುಕಿಗಿಂತ ಮನಸ್ಸಿನ ಖುಷಿ ಮುಖ್ಯ ಎಂದು ಈತ ಮಾಡಿದ್ದೇನು?

Profile pavithra May 19, 2025 7:02 PM

ಕೈ ತುಂಬ ಸಂಬಳವಿದ್ದರೆ ಬದುಕು ಯಾವ ತೊಂದರೆ ಇಲ್ಲದೇ ಹೋಗುತ್ತದೆ ಎಂಬ ಆಸೆ ಕೆಲವರದ್ದು. ಇನ್ನು ಕೆಲವರ ಮನಸ್ಸು ಒಳ್ಳೆಯ ಸಂಬಳ, ಹುದ್ದೆ ಇದ್ದರೂ ಇನ್ಯಾವುದಕ್ಕಾಗಿಯೋ ತುಡಿಯುತ್ತಿರುತ್ತದೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಎಂಬ ಮಾತಿನಂತೆ ಕೆಲವರಿಗೆ ವೃತ್ತಿ ಜೀವನಕ್ಕಿಂತ ತಮ್ಮ ಕನಸು ಮುಖ್ಯವಾಗಿರುತ್ತದೆ. ಇತ್ತೀಚೆಗೆ ಯುವತಿಯೊಬ್ಬಳು ಲಕ್ಷಾಂತರ ರೂಪಾಯಿ ಸಂಬಳ ಬರುವ ಉದ್ಯೋಗ ಬಿಟ್ಟು ಮೃಗಾಲಯದಲ್ಲಿ ಕೆಲಸ ಮಾಡಲು ಮುಂದಾಗಿದ್ದಳು. ಈ ಸುದ್ದಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿ, ಅಮೆಜಾನ್‌ನಲ್ಲಿ ದೊರೆತ ಒಳ್ಳೆಯ ಕೆಲಸವನ್ನು ಬಿಟ್ಟು ಗಾಯಕನಾಗುವ ಆಸೆಯಿಂದ ಸಂಗೀತ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಈ ವಿಚಾರವನ್ನು ಅವನ ಸ್ನೇಹಿತ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪೇಜ್‍ನಲ್ಲಿ ಪೋಸ್ಟ್‌ ಮಾಡಿದ್ದು, ಇದು ಈಗ ವೈರಲ್ (Viral Video) ಆಗಿದೆ. ನೆಟ್ಟಿಗರು ಅವನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐಐಎಂ ಅಹಮದಾಬಾದ್‌ನಿಂದ ಪದವಿ ಪಡೆದು ಅಮೆಜಾನ್‌ನಲ್ಲಿ ಉತ್ಪನ್ನ ವ್ಯವಸ್ಥಾಪಕನಾಗಿ ಕೆಲಸ ಮಾಡಿದ ನಂತರ, ಅನಿಲ್ ಜಾಂಗಿಡ್ ಅದೇ ಕೆಲಸದಲ್ಲಿ ಮುಂದುವರಿಯುವ ಬದಲು ಗಾಯನದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಈ ವಿಚಾರವನ್ನು ಆತನ ಸ್ನೇಹಿತ ಶ್ರವಣ್ ಟಿಕೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಇದು ತನ್ನ ಆತ್ಮೀಯ ಗೆಳೆಯ ಅನಿಲ್ ಜಾಂಗಿಡ್‌ನ ಕಥೆ ಎಂದು ತಿಳಿಸಿದ್ದಾನೆ.

ʼʼಕೆಲವು ವರ್ಷಗಳ ಹಿಂದೆ ಆತನನ್ನು ಭೇಟಿಯಾದೆ. ಅವನಿಗೆ ಉತ್ತಮ ಎಜುಕೇಷನ್‍ ಮತ್ತು ವೃತ್ತಿಪರ ಹಿನ್ನೆಲೆ ಇದೆ. NITK, IIM ಅಹಮದಾಬಾದ್‍ನಲ್ಲಿ ಅಧ್ಯಯನ ಮಾಡಿದ್ದು, ಒಳ್ಳೆಯ ಸಂಬಳ ಬರುವಂತಹ ಕೆಲಸವಿತ್ತು. ಆದರೆ ಅವನಿಗೆ ಇನ್ನೂ ಹೆಚ್ಚಿನದನ್ನು ಸಾಧಿಸುವ ಬಯಕೆ ಇತ್ತು. ಹೀಗಾಗಿ ಅವನು ಒಳ್ಳೆಯ ಸಂಬಳ ಬರುತ್ತಿದ್ದ ಅಮೆಜಾನ್‌ನಲ್ಲಿನ ತಮ್ಮ ಸ್ಥಾನವನ್ನು ಬಿಟ್ಟಿದ್ದಾನೆ" ಎಂದು ಶ್ರವಣ್ ಟಿಕೂ ತನ್ನ ಪೋಸ್ಟ್‌ನಲ್ಲಿ ಬರೆದಿದ್ದಾನೆ.



ಗಾಯಕನಾಗಬೇಕು ಎಂಬ ಆಸೆಯಿಂದ ಕೈ ತುಂಬ ಸಂಬಳ ತರುವ ಉದ್ಯೋಗವನ್ನು ಬಿಟ್ಟು ಕನಸಿನ ಬೆನ್ನತ್ತಿದ್ದಾರೆ ಅನಿಲ್‌. ಅದು ಅಲ್ಲದೆ ಹಾಡು ಕೂಡ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 1,000ಕ್ಕೂ ಹೆಚ್ಚು ಲೈಕ್‌ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ಈ ಪೋಸ್ಟ್‌ನಲ್ಲಿ ಆತ ಜಾಂಗಿಡ್‌ನ ಧೈರ್ಯವನ್ನು ಮತ್ತು ದಿಟ್ಟತನವನ್ನು ಹೊಗಳಿದ್ದಾನೆ. ಇದಕ್ಕೆ ನೆಟ್ಟಿಗರು ಸಹ ಪ್ರತಿಕ್ರಿಯಿಸಿದ್ದಾರೆ. "ಅನಿಲ್‌ನ ಧೈರ್ಯವು ನಮ್ಮೆಲ್ಲರಿಗೂ ಸ್ಫೂರ್ತಿ" ಎಂದು ಒಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಹುಲಿಯ ಜೊತೆ ರೀಲ್ಸ್ ಮಾಡಿದ ಯುವಕರು; ಶಾಕಿಂಗ್ ವಿಡಿಯೊ ವೈರಲ್

"ಅವರ ಹಾಡನ್ನು ಕೇಳಿದಾಗ ಅದು ನಿಜಕ್ಕೂ ಅದ್ಭುತವಾಗಿತ್ತು. ಎಂತಹ ಸ್ಫೂರ್ತಿ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ವಾವ್. ಇದು ಅದ್ಭುತ" ಎಂದು ಇನ್ನೊಬ್ಬರು ಬರೆದಿದ್ದಾರೆ. “ಈ ರೀತಿಯ ಧೈರ್ಯಕ್ಕೆ ಜೋರಾಗಿ ಚಪ್ಪಾಳೆ ತಟ್ಟಬೇಕು" ಎಂದು ಮಗದೊಬ್ಬರು ಬರೆದಿದ್ದಾರೆ. ಅನಿಲ್ ಜಾಂಗಿಡ್‌ನ ಕಥೆಯು ಸರಿ ಎನಿಸುವ ಜೀವನವನ್ನು ಆಯ್ಕೆ ಮಾಡಿಕೊಳ್ಳುವುದರ ಮಹತ್ವವನ್ನು ತಿಳಿಸುತ್ತದೆ ಎಂದಿದ್ದಾರೆ.