ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮದುವೆ ಸಂಭ್ರಮದಲ್ಲಿದ್ದ ವಧುವಿನ ಸಂತೋಷಕ್ಕೆ ತನ್ನೀರೆರಚಿದ ಮೇಕಪ್‌ ಆರ್ಟಿಸ್ಟ್‌! ಈ ವಿಡಿಯೊ ನೋಡಿ

ಮದುವೆ ಸಮಾರಂಭದ ಮೊದಲ ಕ್ಷಣದಿಂದ ಕೊನೆಯವರೆಗೂ ಮುಖದ ಮೇಕಪ್ (Makeup) ಚೂರು ಹಾಳಾಗದಂತೆ ಮೇಕಪ್ ಕಲಾವಿದರು ಎಚ್ಚರ ವಹಿಸುತ್ತಾರೆ. ಆದರೆ, ಮದುವೆ (wedding) ದಿನ ಮೇಕಪ್ ಆರ್ಟಿಸ್ಟ್‌ ನಿಮ್ಮ ಸಂತೋಷವನ್ನು ಹಾಳುಮಾಡಿದರೆ ಏನಾಗುತ್ತದೆ? ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ, ಮೇಕಪ್ ಆರ್ಟಿಸ್ಟ್ ಒಬ್ಬರು ವಧುವಿನ ವಿಶೇಷ ದಿನದ ಸಂಭ್ರಮವನ್ನು ಕುಂಠಿತಗೊಳಿಸಿದ್ದಕ್ಕಾಗಿ ಭಾರಿ ಟೀಕೆಗಳು ವ್ಯಕ್ತವಾಗಿವೆ.

ನವದೆಹಲಿ: ಮೇಕಪ್ ಕಲಾವಿದರು (Makeup artists ) ವಧುವಿನ ಮದುವೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ವಧುವಿನ ಸೌಂದರ್ಯ ಹೆಚ್ಚಿಸುವಲ್ಲಿ ಮೇಕಪ್ ಆರ್ಟಿಸ್ಟ್ ಪಾತ್ರ ಮಹತ್ವದ್ದು. ಮದುವೆ ಸಮಾರಂಭದ ಮೊದಲ ಕ್ಷಣದಿಂದ ಕೊನೆಯವರೆಗೂ ಮುಖದ ಮೇಕಪ್ (Makeup) ಚೂರು ಹಾಳಾಗದಂತೆ ಎಚ್ಚರ ವಹಿಸುತ್ತಾರೆ. ಆದರೆ, ಮದುವೆ (Wedding) ದಿನ ಮೇಕಪ್ ಆರ್ಟಿಸ್ಟ್‌ ನಿಮ್ಮ ಸಂತಸವನ್ನು ಹಾಳುಮಾಡಿದರೆ ಏನಾಗುತ್ತದೆ? ಇದೀಗ ವೈರಲ್(Viral Video) ಆಗಿರುವ ವಿಡಿಯೊದಲ್ಲಿ, ಮೇಕಪ್ ಆರ್ಟಿಸ್ಟ್ ಒಬ್ಬರು ವಧುವಿನ ವಿಶೇಷ ದಿನದ ಸಂಭ್ರಮವನ್ನು ಹಾಳು ಮಾಡಿದ್ದಕ್ಕಾಗಿ ಭಾರಿ ಟೀಕೆಗಳನ್ನು ಎದುರಿಸುತ್ತಿದ್ದಾರೆ.

ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಮೇಕಪ್ ಕಲಾವಿದೆಯೊಬ್ಬರು ತನ್ನ ವಧುವನ್ನು ತಯಾರು ಮಾಡುತ್ತಿರುವುದನ್ನು ನೋಡಬಹುದು. ವಧುವಿನ ತೋಳನ್ನು ಹಿಡಿದು ಆಕೆಯ ಗಾಯಗಳನ್ನು ತೋರಿಸುವ ಮೂಲಕ ವಿಡಿಯೊ ಪ್ರಾರಂಭವಾಗುತ್ತದೆ. ವಧುವಿಗೆ ಈ ರೀತಿ ಆದಾಗ, ಅದನ್ನು ಯಾವ ರೀತಿ ಮುಚ್ಚಿಕೊಳ್ಳಬೇಕು ಎಂದು ಮೇಕಪ್ ಕಲಾವಿದೆ ವಿವರಿಸಿದರು. ನಂತರ ವಧುವಿನ ಕೈಯ ಮೇಲೆ ದುಪ್ಪಟ್ಟಾ ಹಾಕುವ ಮೂಲಕ ಗಾಯವನ್ನು ಹೇಗೆ ಮರೆಮಾಡಬಹುದು ಎಂಬುದನ್ನು ಅವರು ತೋರಿಸಿದರು.

ವಿಡಿಯೊಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ: https://www.reddit.com/r/InstaCelebsGossip/comments/1mmjehi/most_of_these_muas_are_so_problematic/?utm_source=embedv2&utm_medium=post_embed&utm_content=whitespace&embed_host_url=https://www.news18.com/viral/aise-kaand-karke-aati-hai-makeup-artists-remark-on-brides-scars-sparks-outrage-aa-9504417.html

ವಧುವು ಗಾಯಮಾಡಿಕೊಂಡಿದ್ದರೆ ಅದನ್ನು ತೋರಿಸದಂತೆ ಮುಚ್ಚಲೇಬೇಕಾಗುತ್ತದೆ. ಅದಕ್ಕಾಗಿಯೇ ಮೊದಲಿಗೆ ದುಪ್ಪಟ್ಟಾವನ್ನು ಪಿನ್‌ನಿಂದ ಡ್ರೇಪ್ ಮಾಡಬೇಕು. ನಂತರ ಹಿಂದೆಯಿಂದ ದುಪ್ಪಟ್ಟಾವನ್ನು ತಂದು ಕೈಯ ಮೇಲಿಟ್ಟರೆ ಗಾಯ ಕಾಣುವುದಿಲ್ಲ ಎಂದು ಹೇಳಿದ್ದಾಳೆ. ಮೇಕಪ್ ಕಲಾವಿದೆ ವಧುವಿನ ಗಾಯದ ಗುರುತುಗಳನ್ನು ತೋರಿಸಿದಾಗ, ವಧು ಅನಾನುಕೂಲವಾಗಿ ಕಂಡಿದ್ದಾಳೆ, ಆದರೂ ಮುಖದಲ್ಲಿ ಸಣ್ಣ ನಗು ತಂದುಕೊಂಡಿದ್ದಾಳೆ. ಹೀಗಾಗಿ ಈ ವಿಡಿಯೊ ನೋಡಿದ ನೆಟ್ಟಿಗರು ಮೇಕಪ್ ಕಲಾವಿದೆಯ ವರ್ತನೆಗೆ ಕಿಡಿಕಾರಿದ್ದಾರೆ.

ಇನ್‌ಸ್ಟಾಗ್ರಾಮ್ ಮೇಕಪ್ ಯುಗದ ಮೊದಲು ನಾನು ಮದುವೆಯಾಗಿದ್ದೇನೆ. ಹೀಗಾಗಿ ತಾನು ಅವರೊಂದಿಗೆ ಈ ರೀತಿ ವ್ಯವಹರಿಸಬೇಕಾಗಿಲ್ಲ ಎಂದು ಸಂತೋಷವಾಗಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮೇಕಪ್ ಆರ್ಟಿಸ್ಟ್‌ಗೆ ಸೂಕ್ಷ್ಮತೆ ಅನ್ನೋದೆ ಇಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಮೊದಲಿಗೆ ಈ ವಿಡಿಯೊವನ್ನು ಮೇಕಪ್ ಕಲಾವಿದೆಯ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.