ನವದೆಹಲಿ, ಫೆ. 1: ಅಗ್ಗದ ಬೆಲೆಯಲ್ಲಿ ಪ್ರಯಾಣ ಮಾಡಲು ರೈಲು ಸೇವೆ ಮುಂಚೂಣಿಯಲ್ಲಿದೆ. ಹೀಗಾಗಿ ರೈಲ್ವೆ ಇಲಾಖೆ ಪ್ರಯಾಣಿಕರ ಹಿತದೃಷ್ಟಿಯಿಂದ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದೆ. ಒಂದು ವೇಳೆ ಈ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ರೈಲ್ವೆ ಇಲಾಖೆ ದಂಡ ವಿಧಿಸುತ್ತದೆ. ಆದರೆ ಇದಕ್ಕೆ ಕ್ಯಾರೇ ಎನ್ನದೆ ವ್ಯಕ್ತಿಯೊಬ್ಬ ತನ್ನ ಕುಟುಂಬದವರ ಸಮ್ಮುಖದಲ್ಲೇ ರೈಲಿನಲ್ಲಿ ಕುಳಿತು ಮದ್ಯ ಸೇವಿಸಲು ಮುಂದಾದ ಘಟನೆ ನಡೆದಿದೆ. ಆದರೆ ಈ ಕೃತ್ಯಕ್ಕೆ ಆತನ ಅತ್ತೆ ಕೂಡ ಬೆಂಬಲ ವ್ಯಕ್ತ ಪಡಿಸಿದ್ದಾಳೆ. ಈ ದೃಶ್ಯವನ್ನು ಸಹ ಪ್ರಯಾಣಿಕನೊಬ್ಬ ರೆಕಾರ್ಡ್ ಮಾಡಿದ್ದು ಭಾರಿ ವೈರಲ್ (Viral Video) ಆಗಿದೆ.
ರೈಲಿನಲ್ಲಿ ಮದ್ಯಪಾನ ಮಾಡುವುದು ಗಂಭೀರ ಅಪರಾಧ ಮತ್ತು ಕಾನೂನಿನ ಮೂಲಕ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೂ ಕೂಡ ವ್ಯಕ್ತಿಯೊಬ್ಬ ತನ್ನ ಕುಟುಂಬದವರ ಸಮ್ಮುಖದಲ್ಲೇ ರೈಲಿನಲ್ಲಿ ಮದ್ಯ ಸೇವಿಸಲು ಮುಂದಾಗಿದ್ದಾನೆ. ಆದರೆ ಅಚ್ಚರಿಯ ಸಂಗತಿ ಎಂದರೆ ಅಳಿಯ ರೈಲಿನಲ್ಲಿಯೇ ಮದ್ಯಪಾನ ಮಾಡುತ್ತಿದ್ದರೆ ಅತ್ತೆ ಅವನನ್ನು ಸಮರ್ಥಿಸಿಕೊಂಡಿದ್ದಾಳೆ.
ವಿಡಿಯೊ ನೋಡಿ
ಶೇರ್ ಮಾಡಲಾದ ವಿಡಿಯೊದಲ್ಲಿ ಪ್ರಯಾಣಿಕನೊಬ್ಬ ರೈಲಿನಲ್ಲಿ ತನ್ನ ಬಳಿ ಮದ್ಯದ ಬಾಟಲಿಯನ್ನು ಇಟ್ಟುಕೊಂಡಿದ್ದನ್ನು ಕಾಣಬಹುದು. ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು "ಇದು ಏನು ಸಹೋದರ? ನೀವು ಏನು ಮಾಡುತ್ತಿದ್ದೀರಿ? ರೈಲಿನಲ್ಲಿ ಪ್ರಯಾಣಿಸುವಾಗ ನೀವು ಮದ್ಯಪಾನ ಮಾಡಬಹುದೇ?ʼʼ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಅತ್ತೆ, "ದಯವಿಟ್ಟು ಬಿಟ್ಟುಬಿಡಿ ನಮ್ಮನ್ನು ಕ್ಷಮಿಸಿ" ಎಂದು ಅಳಿಯನ ಪರವಾಗಿ ಮಾತನಾಡಿದ್ದಾಳೆ. ರೈಲಿನಲ್ಲಿ ಇದ್ದ ಮತ್ತೊಬ್ಬ ವ್ಯಕ್ತಿ, ʼʼಇಲ್ಲಿ ಮದ್ಯಪಾನ ಮಾಡಬೇಡಿ. ನೀವು ಮನೆಗೆ ತಲುಪಿದ ನಂತರ ಮದ್ಯಪಾನ ಮಾಡಿʼʼ ಎಂದು ಹೇಳಿದ್ದಾನೆ.
ಪಾತ್ರೆಗೆ ತಲೆ ಸಿಲುಕಿಸಿಕೊಂಡ ನಾಯಿಯ ಅವಾಂತರ: ವಿಡಿಯೊ ವೈರಲ್
ಆದಾಗ್ಯೂ, ಭಾರತೀಯ ನ್ಯಾಯ ಸಂಹಿತದ ಸೆಕ್ಷನ್ 292 ಮತ್ತು ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 145ರ ಪ್ರಕಾರ, ರೈಲಿನಲ್ಲಿ ಕುಡಿಯುವುದು, ಮದ್ಯ ಸೇವಿಸುವುದು ಅಥವಾ ರೈಲ್ವೆಯಲ್ಲಿ ಸಾರ್ವಜನಿಕ ಅಡಚಣೆಯನ್ನು ಉಂಟುಮಾಡುವುದು ಕಂಡುಬಂದರೆ ದಂಡ ಅಥವಾ 6 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾ ಸಿಂಗ್ ಈ ವಿಡಿಯೋ ಹಂಚಿಕೊಂಡಿದ್ದು, "ಅಳಿಯ ಪೆಗ್ ಹಾಕಲು ತಯಾರಿ ನಡೆಸುತ್ತಿದ್ದಾನೆ. ಅತ್ತೆ ಆತನನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ಆಕ್ರೋಶ ಹೊರ ಹಾಕಿದ್ದಾರೆ.