ಲಂಡನ್, ಅ.12: ಇಂಗ್ಲೆಂಡ್‌ನ ಯಾರ್ಕ್‌ಶೈರ್ ವೈಲ್ಡ್‌ಲೈಫ್ ಪಾರ್ಕ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ನಿರ್ಬಂಧಿತ ಗೂಡಿನೊಳಗೆ ಪ್ರವೇಶಿಸಿದ್ದು, ಹುಲಿ ಭೀಕರವಾಗಿ ದಾಳಿ ನಡೆಸಿ ಹತ್ಯೆ ಮಾಡಿದೆ. ಈ ಮಾರಣಾಂತಿಕ ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಾಳಿಗೂ ಸ್ವಲ್ಪ ಮೊದಲು ಆ ವ್ಯಕ್ತಿ ಆವರಣದೊಳಗೆ ಇರುವುದನ್ನು ತೋರಿಸುವ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.
ವ್ಯಕ್ತಿ ನಿರ್ಬಂಧಿತ ಹುಲಿಯ ಗೂಡಿನೊಳಗೆ ಪ್ರವೇಶಿಸಿದ್ದಾನೆ. ತಕ್ಷಣವೇ ಹುಲಿ ಭೀಕರವಾಗಿ ದಾಳಿ ನಡೆಸಿದೆ. ಇದನ್ನು ಗಮನಿದ ವೈಲ್ಡ್‌ಲೈಫ್ ಪಾರ್ಕ್ ಸಿಬ್ಬಂದಿ ಹಾಗೂ ತುರ್ತು ವೈದ್ಯಕೀಯ ತಂಡ ಸ್ಥಳಕ್ಕೆ ಬಂದು ಕಾರ್ಯಚರಣೆ ನಡೆಸಿದರೂ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಾಗಿಲ್ಲ.
ವಿಡಿಯೊ ನೋಡಿ:
ಆ ವ್ಯಕ್ತಿ ಆವರಣದೊಳಗೆ ಪ್ರವೇಶಿಸಲು ಹೇಗೆ ಸಾಧ್ಯವಾಯಿತು ಮತ್ತು ನಿರ್ಬಂಧಿತ ಪ್ರದೇಶಕ್ಕೆ ಹೋಗಲು ಕಾರಣವೇನು ಎಂಬಿತ್ಯಾದಿ ಘಟನೆಗೆ ಸಂಬಂಧಿಸಿದ ವಿವರಗಳು ಇನ್ನೂ ತಿಳಿದು ಬಂದಿಲ್ಲ. ಮೃತನ ಗುರುತು ಇನ್ನೂ ಬಹಿರಂಗಗೊಂಡಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದು ಪಾರ್ಕ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
'ʼಕಾರಲ್ಲಿ 4 ಕಿ.ಮೀ. ಕ್ರಮಿಸಲು 35 ನಿಮಿಷ'ʼ; ಮತ್ತೊಮ್ಮೆ ಸದ್ದು ಮಾಡುತ್ತಿದೆ ಬೆಂಗಳೂರು ಟ್ರಾಫಿಕ್
ಈ ದುರ್ಘಟನೆಯಲ್ಲಿ ಹುಲಿಗೆ ಯಾವುದೇ ಗಾಯಗಳಾಗಿಲ್ಲ ಮತ್ತು ಅದು ತನ್ನ ಆವರಣದಲ್ಲೇ ಸುರಕ್ಷಿತವಾಗಿದೆ. ಈ ಗಂಭೀರ ಘಟನೆಯ ನಂತರ ಯಾರ್ಕ್‌ಶೈರ್ ವನ್ಯಜೀವಿ ಉದ್ಯಾನವನವು ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಆ ವ್ಯಕ್ತಿ ನಿಷೇಧಿತ ಪ್ರದೇಶದೊಳಗೆ ಹೇಗೆ ಪ್ರವೇಶಿಸಿದ ಮತ್ತು ಆತನ ಹಿನ್ನೆಲೆ ಏನು ಎಂಬ ಬಗ್ಗೆ ಸೌತ್ ಯಾರ್ಕ್‌ಷೈರ್ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.