ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಲವಂತವಾಗಿ ನಾಯಿಗೆ ಬಿಯರ್ ಕುಡಿಸಿದ ವ್ಯಕ್ತಿ; ವಿಡಿಯೊ ವೈರಲ್ ಬೆನ್ನಲ್ಲೇ ಭಾರಿ ಆಕ್ರೋಶ

Man Forces Dog to Drink Beer: ವ್ಯಕ್ತಿಯೊಬ್ಬ ನಾಯಿಗೆ ಬಲವಂತವಾಗಿ ಬಿಯರ್ ಕುಡಿಸಿರುವ ಘಟನೆ ನಾಗಾಲ್ಯಾಂಡ್‍ನಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೂಡಲೇ ಆ ವ್ಯಕ್ತಿಯ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಕೊಹಿಮಾ: ವ್ಯಕ್ತಿಯೊಬ್ಬ ನಾಯಿಗೆ ಬಿಯರ್ ಕುಡಿಸಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral Video) ಆಗಿದೆ. ನಾಗಾಲ್ಯಾಂಡ್‌ನಲ್ಲಿ (Nagaland) ಈ ಘಟನೆ ನಡೆದಿದ್ದು, ಈತನ ಕೃತ್ಯಕ್ಕೆ ನೆಟ್ಟಿಗರು (Netizens) ಕಿಡಿಕಾರಿದ್ದಾರೆ. ಕೂಡಲೇ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಿಡಿಯೊದಲ್ಲಿ, ಆ ವ್ಯಕ್ತಿ ನಾಯಿಯ ಬಾಯಿಯನ್ನು ತೆರೆದು ಅದರ ಗಂಟಲಿಗೆ ಬಿಯರ್ ಸುರಿಯುವುದನ್ನು ಮತ್ತು ಬಲವಂತವಾಗಿ ಬಾಯಿ ಮುಚ್ಚುವುದನ್ನು ಕಾಣಬಹುದು. ನಾಯಿಯು ತೊಂದರೆಗೀಡಾಗಿರುವುದು, ಕಷ್ಟಪಡುವುದನ್ನು ವಿಡಿಯೊದಲ್ಲಿ ಗಮನಿಸಬಹುದು. ಒಂದು ಹಂತದಲ್ಲಿ, ಮದ್ಯ ಕುಡಿದು ಅದರ ವಾಸನೆ ತಾಳಲಾರದೆ ಅದು ವಾಂತಿ ಮಾಡುವ ಹಂತದಲ್ಲಿದೆ ಎಂದು ತೋರುತ್ತದೆ.

ವಿಡಿಯೊ ವೀಕ್ಷಿಸಿ:



ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಆ ವ್ಯಕ್ತಿಯ ಕೃತ್ಯವನ್ನು ಕ್ರೂರ ಮತ್ತು ಅಮಾನವೀಯ ಎಂದು ಖಂಡಿಸಿದ್ದು, ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿ ಪ್ರಿಯರು ನಾಯಿಯ ಬಗ್ಗೆ ತೋರಿಸಲಾದ ಸಹಾನುಭೂತಿಯ ಕೊರತೆಯ ಬಗ್ಗೆ ಆಘಾತ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೆ, ಆ ವ್ಯಕ್ತಿಯ ವಿರುದ್ಧ ಯಾವುದೇ ಬಂಧನ ಅಥವಾ ಅಧಿಕೃತ ಕ್ರಮ ಕೈಗೊಂಡ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ.

ಇದನ್ನೂ ಓದಿ: ಕ್ಯಾಬ್‍ನಲ್ಲಿದ್ದ ಅಪರೂಪದ ಸಹಪ್ರಯಾಣಿಕನನ್ನು ಕಂಡು ಅಚ್ಚರಿಗೊಂಡ ಯುವಕ; ಸೆಲ್ಫಿ ವೈರಲ್

ಪ್ರಾಣಿ ಹಿಂಸೆ ವಿರುದ್ಧ ನಾಗಾಲ್ಯಾಂಡ್ ನಿಯಮಗಳು

ನಾಗಾಲ್ಯಾಂಡ್‌ನಲ್ಲಿ, ಕೊಹಿಮಾ ಆಡಳಿತವು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ ಅನುಸಾರವಾಗಿ ಬೀದಿ ನಾಯಿಗಳು ಸೇರಿದಂತೆ ಪ್ರಾಣಿಗಳನ್ನು ಕೊಲ್ಲುವುದರ ವಿರುದ್ಧ ಎಚ್ಚರಿಕೆಗಳನ್ನು ನೀಡಿದೆ. ಇದನ್ನು ಉಲ್ಲಂಘಿಸುವವರು ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒಳಪಡುತ್ತಾರೆ.

ಮಕ್ಕಳನ್ನು ರಕ್ಷಿಸಿದ್ದ ಸಾಕುನಾಯಿ

ಇತ್ತೀಚೆಗೆ ಬೀದಿ ನಾಯಿ ದಾಳಿ ಪ್ರಕರಣ ಹೆಚ್ಚಾಗುತ್ತಿದೆ. ಇಲ್ಲೊಂದೆಡೆ ದಾಳಿಗಿಳಿದ ಬೀದಿನಾಯಿಯನ್ನು ಸಾಕುಶ್ವಾನವೊಂದು ಹಿಮ್ಮೆಟ್ಟಿಸಿದ ಘಟನೆಯ ವಿಡಿಯೊ ವೈರಲ್ ಆಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳನ್ನು ಬೀದಿನಾಯಿಯಿಂದ ರಕ್ಷಿಸಿದ ಜರ್ಮನ್ ಶೆಫರ್ಡ್ ಶ್ವಾನದ ಹೃದಯಸ್ಪರ್ಶಿ ವಿಡಿಯೊ ವೈರಲ್ ಆಗಿತ್ತು. ಉತ್ತರಾಖಂಡದ ಋಷಿಕೇಶದಲ್ಲಿ ಈ ಘಟನೆ ನಡೆದಿದ್ದು, ನಿಷ್ಠಾವಂತ ಸಾಕುಪ್ರಾಣಿಯು ಮಕ್ಕಳನ್ನು ರಕ್ಷಿಸಿದೆ. ಜರ್ಮನ್ ಶೆಫರ್ಡ್ ಜಾತಿಯ ಶ್ವಾನದ ಚತುರತೆಯಿಂದ ಬೀದಿನಾಯಿ ದಾಳಿಯಿಂದ ಮಕ್ಕಳು ಪಾರಾಗಿದ್ದಾರೆ.