ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಪ್ರೇಯಸಿಯನ್ನು ನಿಂದಿಸಿದ ಮಹಿಳೆ ಮೇಲೆ ಪ್ರಿಯಕರನಿಂದ ಹಲ್ಲೆ; ಬಳಿಕ ಆಗಿದ್ದೇನು?

ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಜತೆ ಜಗಳ ಮಾಡಿದ ಮಹಿಳೆಯೊಬ್ಬರಿಗೆ ಥಳಿಸಿದ್ದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಹರ್ಷ್ ಎಂಬ ವ್ಯಕ್ತಿಯೂ ಉದ್ದನೆಯ ಕೋಲಿನಿಂದ ಮಹಿಳೆಗೆ ಹೊಡೆಯುವ ದೃಶ್ಯವು ಸೆರೆಯಾಗಿದ್ದು ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಂತ್ರಸ್ತೆ ಗಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸು ದಾಖಲಿಸಿದ್ದಾರೆ.

Man Hits Woman With Stick

ನವದೆಹಲಿ: ʼಜಾಣನಿಗೆ ಮಾತಿನ ಪೆಟ್ಟು ಕೋಣನಿಗೆ ದೊಣ್ಣೆ ಪೆಟ್ಟುʼ ಎಂಬ ಮಾತಿದೆ. ಮಾತು ಕೇಳ ದಿರುವವರಿಗೆ ನಯವಾಗಿ ತಿಳಿಸುವ ಬದಲು ಅನ್ಯ ಮಾರ್ಗ ಅನುಸರಿಸಿ ಎಂದು ಹೇಳುವವರು ಇದ್ದಾರೆ. ಅಂತೆಯೇ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಜತೆ ಜಗಳ ಮಾಡಿದ ಮಹಿಳೆಯೊಬ್ಬರಿಗೆ ಥಳಿಸಿದ ಘಟನೆಯೊಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಹರ್ಷ್ ಎಂಬ ವ್ಯಕ್ತಿ ಉದ್ದನೆಯ ಕೋಲಿನಿಂದ ಮಹಿಳೆಗೆ ಹೊಡೆಯುವ ದೃಶ್ಯವು ಸೆರೆಯಾಗಿದ್ದು ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ (Viral News) ಆಗಿದೆ. ಸಂತ್ರಸ್ತೆ ಗಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸು ಕೂಡ ದಾಖಲಿಸಿದ್ದಾರೆ.

ಗಾಜಿಯಾಬಾದ್‌ನ ಆರ್‌ಡಿಸಿ ಪ್ರದೇಶದ ಗೌರ್ ಸೆಂಟರ್ ಮಾಲ್‌ಗೆ ತನ್ನ ಇಬ್ಬರು ಸ್ನೇಹಿತರ ಜತೆ ನೈನಾ ವರ್ಮಾ ಎಂಬ ಮಹಿಳೆ ತೆರಳಿದ್ದಾರೆ. ಈ ಸಮಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಿಯಾ ಎಂಬ ಮಹಿಳೆ ಜತೆ ಜಗಳವಾಗಿರುವುದನ್ನು ಸಂತ್ರಸ್ತೆ ನೈನಾ ವರ್ಮಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಜಗಳವಾಗಿ ಸ್ವಲ್ಪ ಸಮಯದ ನಂತರ ಪ್ರಿಯಾಳ ಗೆಳೆಯ ಹರ್ಷ್ ಈ ಜಗಳದಲ್ಲಿ ಮಧ್ಯೆ ಪ್ರವೇಶಿಸಿದ್ದಾರೆ. ಆ ಬಳಿಕ ಕೋಲಿನಿಂದ ಥಳಿಸಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಲ್ಲೆಯ ಸಮಯದಲ್ಲಿ ನೈನಾ ವರ್ಮಾ ಅವರ ತಲೆಗೆ ತೀವ್ರವಾಗಿ ಗಾಯವಾಗಿದ್ದು ರಕ್ತ ಸ್ರಾವವೂ ಆಗಿದೆ. ಹೀಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಒಟ್ಟಿನಲ್ಲಿ ಸಣ್ಣ ಜಗಳವು ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರಕ್ಕೆ ತಿರುಗಿ ಜನ ಸಾಮಾನ್ಯರ ಸುರಕ್ಷತೆ ಬಗ್ಗೆ ಪ್ರಶ್ನೆ ಹುಟ್ಟು ಹಾಕುವಂತೆ ಮಾಡಿದೆ. ಈ ಸುದ್ದಿ ತಿಳಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:Viral News: ರೈಲಿನಲ್ಲಿ ಡ್ರಗ್ಸ್‌ ನೀಡಿ ರಾಬರಿ- ಯೂಟ್ಯೂಬರ್ ಗೋಳಾಟ ಹೇಳೋರಿಲ್ಲ...ಕೇಳೋರಿಲ್ಲ!

ಸಮಾಜದಲ್ಲಿ ಇಂತಹ ಸೈಕೋಗಳಿರುವಾಗ ಮಹಿಳೆಯರಿಗೆ ರಕ್ಷಣೆ ಎಲ್ಲಿದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಸಮಾಜದಲ್ಲಿ ಯಾರನ್ನು ಈ ರೀತಿಯಾಗಿ ಹಿಂಸಿಸಲು ಅಧಿಕಾರ ಇಲ್ಲ, ನಮ್ಮ ಕಾನೂನು ಸುವ್ಯವಸ್ಥೆಗೆ ಬದ್ಧವಾಗಿ ನಾವಿರಬೇಕು ಈ ರೀತಿ ನಡವಳಿಕೆ ಖಂಡನೀಯ ಎಂದು ಬಳಕೆದಾರರೊಬ್ಬರು ಕಾಮೆಂಟ್ ಹಾಕಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಭಾರತೀತ ದಂಡ ಸಮಿತಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.