ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೀಲ್ಸ್‌ಗಾಗಿ ಫ್ಲೈಓವರ್‌ನಿಂದ ಜಿಗಿದು ರಸ್ತೆಗೆ ಬಿದ್ದು, ನರಳಾಡಿದ ಯುವಕ: ನಿಂಗಿದು ಬೇಕಿತ್ತಾ ಎಂದ ನೆಟ್ಟಿಗರು

Man Jumps Off Flyover: ಇತ್ತೀಚಿನ ದಿನಗಳಲ್ಲಿ ವೈರಲ್ ರೀಲ್ಸ್‌ ಶೂಟ್ ಮಾಡಲು ಜನರು ಮಿತಿ ಮೀರಿ ವರ್ತಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧಿ ಪಡೆಯಲು ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದೇ ರೀತಿ ಇಲ್ಲೊಬ್ಬ ಯುವಕ ಮೇಲ್ಸೇತುವೆ ಮೇಲಿಂದ ಜಿಗಿಯಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ.

ದೆಹಲಿ: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ (Social media reels) ಮಾಡಿ ಲೈಕ್ಸ್, ವ್ಯೂವ್ಸ್‌ ಪಡೆದುಕೊಳ್ಳಲು ಕೆಲವರು ಎಂತಹ ದುಸ್ಸಾಹಸಕ್ಕೂ ಇಳಿಯಲು ಹಿಂಜರಿಯುವುದಿಲ್ಲ. ಇದೇ ರೀತಿ ಇಲ್ಲೊಬ್ಬ ಯುವಕ ವೈರಲ್ ಆಗಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ. ಸದ್ಯ ಈ ವಿಡಿಯೊ ಭಾರಿ ವೈರಲ್ (Viral Video) ಆಗಿದ್ದು, ನಿಂಗಿದ್ದು ಬೇಕಿತ್ತಾ ಎಂದು ನೆಟ್ಟಿಗರು ಲೇವಡಿ ಮಾಡುತ್ತಿದ್ದಾರೆ.

ಈ ಘಟನೆ ಎಲ್ಲಿ ನಡೆದಿದ್ದು ಎಂಬ ಬಗ್ಗೆ ತಿಳಿದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಮಾತ್ರ ಭಾರಿ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆಯುವುದಕ್ಕಾಗಿ ಸ್ಟಂಟ್ ಮಾಡಲು ಹೋದ ಯುವಕ ತನ್ನ ಜೀವಕ್ಕೆ ಸಂಚಕಾರ ತಂದೊಡ್ಡಿದ್ದಾನೆ. ಇವನು ಅಂದುಕೊಂಡಂತೆ ವಿಡಿಯೊ ವೈರಲ್ ಆಗಿದೆ. ಆದರೆ ಆತ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾನೆ.

ಹೌದು, ಇತ್ತೀಚಿನ ದಿನಗಳಲ್ಲಿ ವೈರಲ್ ರೀಲ್ಸ್‌ಗಳನ್ನು ಶೂಟ್ ಮಾಡಲು ಜನರು ಮಿತಿ ಮೀರುತ್ತಿದ್ದಾರೆ. ವ್ಯಕ್ತಿಯೊಬ್ಬ ಮೇಲ್ಸೇತುವೆಯ ಕೆಳಗೆ ಹಾದುಹೋಗುವ ಟ್ರಾಲಿ ವ್ಯಾನ್‌ಗೆ ಜಿಗಿಯುವ ಗುರಿಯನ್ನು ಹೊಂದಿದ್ದ. ಆದರೆ ಅವನ ನಿರ್ಧಾರ ವಿಫಲಗೊಂಡಿದೆ. ವಾಹನಕ್ಕೆ ಹಾರುವ ಬದಲು ಅವನು ರಸ್ತೆಗೆ ಬಿದ್ದಿದ್ದು, ನೋವಿನಿಂದ ಜೋರಾಗಿ ಕೂಗಿದ್ದಾನೆ. ರಸ್ತೆಯಲ್ಲಿ ಹೊರಳಾಡಿ ನೋವಿನಿಂದ ಜೋರಾಗಿ ಅತ್ತಿದ್ದಾನೆ.

ವಿಡಿಯೊ ವೀಕ್ಷಿಸಿ



ಈ ಘಟನೆಯಲ್ಲಿ ಆ ವ್ಯಕ್ತಿ ಫ್ಲೈಓವರ್ ಅನ್ನು ಹತ್ತಿ, ಅದರ ಅಂಚಿನಲ್ಲಿ ನಿಂತು, ಜಿಗಿಯಲು ಸರಿಯಾದ ಕ್ಷಣಕ್ಕಾಗಿ ಕಾದಿದ್ದಾನೆ. ಮೇಲ್ಸೇತುವೆಯ ಕೆಳಗೆ ಹಾದುಹೋಗುವ ಟ್ರಾಲಿ ವ್ಯಾನ್‌ಗೆ ಸಿನಿಮೀಯ ರೀತಿಯಲ್ಲಿ ಜಿಗಿಯಲು ನಿರ್ಧರಿಸಿದ್ದಾನೆ. ವಿಡಿಯೊದಲ್ಲಿ ಕಂಡುಬರುವಂತೆ, ಟೆಂಪೋ ಹಾದುಹೋಗುತ್ತದೆ. ಆದರೆ ಯುವಕ ಕೆಲವು ಸೆಕೆಂಡುಗಳು ತಡವಾಗಿ ಜಿಗಿಯುತ್ತಾನೆ. ಇದರಿಂದ ಅವನ ಗುರಿ ತಪ್ಪಿದೆ. 2 ಸೆಕೆಂಡುಗಳ ವಿಳಂಬವು ಅವನಿಗೆ ಜೀವಮಾನವಿಡೀ ಪಾಠವನ್ನು ಹೇಳಿಕೊಟ್ಟಿದೆ. ಟೆಂಪೋಗೆ ಹಾರುವ ಬದಲು, ಅವನು ನೇರವಾಗಿ ರಸ್ತೆಗೆ ಬಿದ್ದಿದ್ದಾನೆ.

ಈ ವಿಡಿಯೊವನ್ನು @Ldphobiawatch ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ಟೆಂಪೋ ಕೆಳಗೆ ಕಾಣಿಸಿಕೊಂಡ ತಕ್ಷಣ, ಅವನು ಅದರ ಮೇಲೆ ಹಾರಿ, ರೀಲ್ ವೈರಲ್ ಆಗುತ್ತದೆ ಎಂದು ಅವನು ಭಾವಿಸಿದ್ದ. ಈಗ ಈ ವ್ಯಕ್ತಿ ತನ್ನ ಜೀವನದಲ್ಲಿ ಮತ್ತೆಂದೂ ರೀಲ್ ಮಾಡುವ ಬಗ್ಗೆ ಯೋಚಿಸುವುದಿಲ್ಲ” ಎಂದು ಶೀರ್ಷಿಕೆ ನೀಡಲಾಗಿದೆ. ನೆಟ್ಟಿಗರು ಕೂಡ ಅವನ ವರ್ತನೆಯನ್ನು ಖಂಡಿಸಿದ್ದಾರೆ.

ಇದೇ ರೀತಿಯ ಮತ್ತೊಂದು ಘಟನೆ

ಜಾರ್ಖಂಡ್‌ನ ಲಾಲ್ಮಾಟಿಯಾ-ಫರಕ್ಕಾ ಎಂಜಿಆರ್ ರೈಲು ಮಾರ್ಗದಲ್ಲಿ 13ರಿಂದ 14 ವರ್ಷದ ಮಕ್ಕಳು ಚಲಿಸುವ ಸರಕು ರೈಲಿನಿಂದ ಕಲ್ಲಿದ್ದಲು ಕದ್ದಿದ್ದಾರೆ. ಬಾಲಿವುಡ್ ಚಲನಚಿತ್ರಗಳನ್ನು ನೆನಪಿಸುವ ದುಸ್ಸಾಹಸವನ್ನು ತೋರಿಸುವ ವಿಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೊದಲ್ಲಿ ಅಪ್ರಾಪ್ತ ಮಕ್ಕಳು ಬೋಗಿಗಳ ನಡುವೆ ಜಿಗಿಯುವುದು, ಕಳ್ಳತನ ಮಾಡಿರುವ ಕಲ್ಲಿದ್ದಲನ್ನು ಸಂಗ್ರಹಿಸಲು ಜೀವಕ್ಕೆ ಅಪಾಯಕಾರಿಯಾಗುವಂತಹ ತಂತ್ರಗಳನ್ನು ನಿರ್ವಹಿಸುವುದನ್ನು ಸೆರೆಹಿಡಿಯಲಾಗಿದೆ.

ಇದನ್ನೂ ಓದಿ: Viral Video: ಏಕಾಏಕಿ ರಿವರ್ಸ್‌ ತೆಗೆದ ಟ್ರಕ್‌- ನಡೀತು ಘನಘೋರ ಘಟನೆ! ಇಲ್ಲಿದೆ ವೈರಲ್ ವಿಡಿಯೊ