Viral Video: ಏಕಾಏಕಿ ರಿವರ್ಸ್ ತೆಗೆದ ಟ್ರಕ್- ನಡೀತು ಘನಘೋರ ಘಟನೆ! ಇಲ್ಲಿದೆ ವೈರಲ್ ವಿಡಿಯೊ
Car Nearly Gets Crushed: ಕಾರು ಇಳಿಜಾರಿನಲ್ಲಿ ದೊಡ್ಡ ಟ್ರಕ್ ಅನ್ನು ತುಂಬಾ ಹತ್ತಿರದಿಂದ ಹಿಂಬಾಲಿಸಿದೆ. ಆಗ ಇದ್ದಕ್ಕಿದ್ದಂತೆ ಟ್ರಕ್ ಹಿಂದಕ್ಕೆ ಬರಲು ಪ್ರಾರಂಭಿಸಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.


ಭಾರವಾದ ಟ್ರಕ್ ಹಿಂದೆ ವಾಹನ ಚಾಲನೆ ಮಾಡುವುದು ಬಹಳ ಅಪಾಯಕಾರಿ. ಇತ್ತೀಚೆಗೆ ನಡೆದ ಘಟನೆಯ ವಿಡಿಯೊ ನೋಡಿದರೆ ಎಷ್ಟು ಅಪಾಯಕಾರಿ ಎಂಬುದು ಅರಿವಾಗುತ್ತದೆ. ವೈರಲ್ ಆಗಿರುವ ವಿಡಿಯೊದಲ್ಲಿ (Viral Video), ಒಂದು ಕಾರು ಇಳಿಜಾರಿನಲ್ಲಿ ದೊಡ್ಡ ಟ್ರಕ್ (truck) ಅನ್ನು ತುಂಬಾ ಹತ್ತಿರದಿಂದ ಹಿಂಬಾಲಿಸಿದೆ. ಆಗ ಇದ್ದಕ್ಕಿದ್ದಂತೆ ಟ್ರಕ್ ಹಿಂದಕ್ಕೆ ಬರಲು ಪ್ರಾರಂಭಿಸುತ್ತದೆ. ಚಾಲಕ ಹಿಮ್ಮುಖಗೊಳಿಸಲು ಪ್ರಯತ್ನಿಸುತ್ತಿದ್ದನೇ ಅಥವಾ ವಾಹನ ನಿಯಂತ್ರಣ ಕಳೆದುಕೊಂಡನೇ ಎಂಬುದು ಸ್ಪಷ್ಟವಾಗಿಲ್ಲ.
ಕೆಲವೇ ಕ್ಷಣಗಳಲ್ಲಿ, ಹಿಂದೆ ಸಿಲುಕಿಕೊಂಡಿದ್ದ ಕಾರಿಗೆ ಪರಿಸ್ಥಿತಿ ಅಪಾಯಕಾರಿಯಾಯಿತು. ಬೃಹತ್ ಟ್ರಕ್ ಕಾರನ್ನು ನಜ್ಜುಗುಜ್ಜು ಮಾಡುವ ಹಂತಕ್ಕೆ ತಲುಪಿತು. ಈ ವಿಡಿಯೊದಲ್ಲಿ ಟ್ರಕ್, ಕಾರನ್ನು ಒಂದು ಬದಿಯನ್ನು ತೀವ್ರವಾಗಿ ಜಖಂಗೊಳಿಸಿರುವುದನ್ನು ನೋಡಬಹುದು. ಹೀಗಾಗಿ ಟ್ರಕ್ ಹಿಂದೆ ಹೋಗುವುದು ಎಷ್ಟು ಅಪಾಯಕಾರಿ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ಸದ್ಯ, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ, ಈ ಘಟನೆ ಎಲ್ಲಿ ನಡೆದಿದ್ದು ಎಂಬುದು ತಿಳಿದುಬಂದಿಲ್ಲ.
ದೃಶ್ಯಾವಳಿಗಳ ಪ್ರಕಾರ, ದೃಶ್ಯದ ಹಿಂದೆ ಚಲಿಸುತ್ತಿದ್ದ ಮತ್ತೊಂದು ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಈ ಭಯಾನಕ ಕ್ಷಣ ಸೆರೆಯಾಗಿದೆ. ಮುಂದೆ ಇದ್ದ ಕಾರು ಚಾಲಕ ಆತುರದಿಂದ ಟ್ರಕ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಅದು ವಿಫಲವಾದಾಗ, ಟ್ರಕ್ ಇದ್ದಕ್ಕಿದ್ದಂತೆ ನಿಂತು ಹಿಂದಕ್ಕೆ ಬರಲು ಪ್ರಾರಂಭಿಸಿತು. ಈ ವೇಳೆ ಹಿಂದೆಯಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಕಾರು ಚಾಲಕನಿಗೆ ಏನೂ ಮಾಡಲು ತೋಚಲಿಲ್ಲ. ಕಾರಿನೊಳಗಿಂದ ಒಳಗಿನ ಚಾಲಕ ಬಾಗಿಲು ತೆರೆದು ತಪ್ಪಿಸಿಕೊಳ್ಳಲು ಹೆಣಗಾಡಿದ್ದಾನೆ. ಆದರೆ ಅವನಿಗೆ ಹೊರಬರಲು ಸಾಧ್ಯವಾಗಲಿಲ್ಲ.
ವಿಡಿಯೊ ವೀಕ್ಷಿಸಿ:
ಇನ್ನು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, ಟ್ರಕ್ ಚಾಲಕನಿಗೆ ಮೊದಲ ಡಿಕ್ಕಿಯಲ್ಲಿ ತನ್ನ ಹಿಂದೆ ಏನೋ ಇದೆ ಎಂದು ತಿಳಿದಿರಬೇಕಿತ್ತು. ಆದರೂ ಹಿಂದಕ್ಕೆ ಹೋಗುತ್ತಲೇ ಇದ್ದನು ಎಂದು ಹೇಳಿದ್ದಾರೆ. ಟ್ರಕ್ ಹಿಮ್ಮುಖವಾಗಿ ಚಲಿಸಲಿಲ್ಲ. ಅದು ಇಳಿಜಾರಾಗಿದ್ದರಿಂದ ಕೆಳಗೆ ಜಾರಿದೆ. ಬಹುಶಃ ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ತೋರುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು.
ಯಾವಾಗಲೂ ಲೋಡೆಡ್ ಟ್ರಕ್‌ನಿಂದ ದೂರವಿರಲು ಸಾಕಷ್ಟು ಜಾಗವನ್ನು ಬಿಡಿ ಎಂದು ವ್ಯಕ್ತಿಯೊಬ್ಬರು ಹೇಳಿದರು. ಟ್ರಕ್‌ಗಳಿಂದ ಯಾವಾಗಲೂ ದೂರವಿರಿ. ಇಲ್ಲಿ ಟ್ರಕ್‌ನ ಬ್ರೇಕ್‌ಗಳು ವಿಫಲವಾಗಿರಬೇಕು. ಟ್ರಕ್‌ನ ಸಮೀಪ ಕಾರು ಇರಲಿಲ್ಲವಾಗಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ ಎಂದು ಮತ್ತೊಬ್ಬರು ಉಲ್ಲೇಖಿಸಿದ್ದಾರೆ.
ಸಾಮಾನ್ಯವಾಗಿ ಲೋಡ್ ಇರುವ ಟ್ರಕ್‌ಗಳು ಬೆಟ್ಟವನ್ನು ಹತ್ತಿದಾಗ, ಸರಿಯಾದ ಗೇರ್ ಅನ್ನು ಸಮಯಕ್ಕೆ ಸರಿಯಾಗಿ ಹಾಕದಿದ್ದರೆ, ಟ್ರಕ್ ಹಿಂದಕ್ಕೆ ಉರುಳುತ್ತದೆ. ಹಾಗೆಯೇ ಟ್ರಕ್ ಭಾರವಾದ ಹೊರೆಯನ್ನು ಹೊಂದಿರುವುದರಿಂದ ಬ್ರೇಕ್‌ಗಳಿಂದ ಒಮ್ಮೆಲೆ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ ಆದಷ್ಟು ಟ್ರಕ್‍ಗಳಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಇನ್ನೂ ಒಬ್ಬರು ಹೇಳಿದರು.
ಇದನ್ನೂ ಓದಿ: Viral Video: ರಾಷ್ಟ್ರಗೀತೆ ಹಾಡುವಾಗ ಪ್ರತಿಮೆಯಂತೆ ನಿಂತ ವಿದ್ಯಾರ್ಥಿ- ಈ ವಿಡಿಯೊ ವೈರಲ್