Viral Video: 5ನೇ ಮಹಡಿಯಿಂದ ವಾಷಿಂಗ್ ಮೆಷಿನ್ ಕೆಳಗೆ ಎಸೆದ ವ್ಯಕ್ತಿ; ಮುಂದೇನಾಯ್ತು? ವಿಡಿಯೊ ನೋಡಿ
Viral Video: ಜರ್ಮನಿಯ ರಾಜಧಾನಿ ಬರ್ಲಿನ್‍ನ ಮರ್ಜಾನ್ ಪಟ್ಟಣದಲ್ಲಿ ವ್ಯಕ್ತಿಯೊಬ್ಬರು ಕಟ್ಟಡದ ಐದನೇ ಮಹಡಿಯಿಂದ ವಾಷಿಂಗ್ ಮೆಷಿನ್ ಅನ್ನು ಕೆಳಗೆ ಇಳಿಸಲು ಹೋಗಿ ಎಡವಟ್ಟು ಮಾಡಿಕೊಂಡ ಪ್ರಕರಣವೊಂದು ನಡೆದಿದೆ. ಆ ಘಟನೆಯ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಬರ್ಲಿನ್: ಇತ್ತೀಚೆಗೆ ಶಾಪಿಂಗ್ ಮಾಲ್‌ನ ಮೂರನೇ ಮಹಡಿಯಿಂದ ಭಾರವಾದ ಚೇರ್ ಕೆಳಗೆ ಎಸೆದ ಪ್ರಕರಣವೊಂದು ನಡೆದಿತ್ತು. ಇದೀಗ ಕಟ್ಟಡದ ಐದನೇ ಮಹಡಿಯಿಂದ ವಾಷಿಂಗ್ ಮೆಷಿನ್ ಕೆಳಗೆ ಇಳಿಸಲು ಹೋಗಿ ಎಡವಟ್ಟು ಮಾಡಿಕೊಂಡ ಪ್ರಕರಣವೊಂದು ನಡೆದಿದೆ. ಜರ್ಮನಿಯ ರಾಜಧಾನಿ ಬರ್ಲಿನ್‍ನ ಮರ್ಜಾನ್ ಪಟ್ಟಣದಲ್ಲಿ ವ್ಯಕ್ತಿಯೊಬ್ಬರು ವಾಷಿಂಗ್ ಮೆಷಿನ್ ಅನ್ನು ಕೆಳಗೆ ಇಳಿಸಲು ಹೋಗಿ ಅದು ನೆಲದ ಮೇಲೆ ಬಿದ್ದು, ಒಡೆದು ಚೂರಾದ ಘಟನೆಯೊಂದು ನಡೆದಿದೆ. ಈ ಸ್ಟಂಟ್‍ನ ವಿಡಿಯೊ ಈಗ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ವೈರಲ್ (Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ ಕಟ್ಟಡದ ಐದನೇ ಮಹಡಿಯ ಕಿಟಕಿಯ ಅಂಚಿನಲ್ಲಿ ವ್ಯಕ್ತಿಯೊಬ್ಬ ವಾಷಿಂಗ್ ಮಷಿನ್ ಹಿಡಿದಿರುವುದು ಸೆರೆಯಾಗಿದೆ. ಸುರಕ್ಷಿತವಾಗಿ ವಾಷಿಂಗ್ ಮೆಷಿನ್ ಅನ್ನು ಇಳಿಸಲು ಕೆಳಗಡೆ ಹಾಸಿಗೆಯನ್ನು ಹಾಕಲಾಗಿತ್ತು. ಆದರೆ ದುರಾದೃಷ್ಟವಶಾತ್ ವ್ಯಕ್ತಿಯು ವಾಷಿಂಗ್ ೆಷಿನ್ ಅನ್ನು ಕಿಟಕಿಯಿಂದ ಹೊರಗೆ ತಳ್ಳಿದ ಕೂಡಲೇ ಅದು ಹಾಸಿಗೆಯ ಮೇಲೆ ಬೀಳುವ ಬದಲು ಅದರ ಪಕ್ಕದಲ್ಲಿ ನೆಲದ ಮೇಲೆ ಬಿದ್ದು ಒಡೆದು ಛಿದ್ರವಾಗಿದೆ.
Trying to make a washing machine land safely on a mattress from 5 floors above pic.twitter.com/pkLB9Bi0I8
— Crazy Clips (@crazyclipsonly) March 7, 2025
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊಗೆ 1.2 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಸಿಕ್ಕಿದೆ. ಅನೇಕರು ಕಾಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು “ಒಂದು ವೇಳೆ ವಾಷಿಂಗ್ ಮೆಷಿನ್ ಹಾಸಿಗೆಯ ಮೇಲೆ ಬಿದ್ದಿದ್ದರೂ ಅದು ಒಡೆದುಹೋಗುತ್ತಿತ್ತುʼʼ ಎಂದು ಹೇಳಿದ್ದಾರೆ. ಇನ್ನೊಬ್ಬರು, “ಆ ಮೆಷಿನ್ ನೆಲದ ಮೇಲೆ ಬಿದ್ದಾಗ ಕೇಳುವ ಶಬ್ದ ಚೆನ್ನಾಗಿದೆ” ಎಂದು ತಮಾಷೆ ಮಾಡಿದ್ದಾರೆ.
ಇತ್ತೀಚೆಗೆ ಲಂಡನ್‍ನ ಸ್ಟ್ರಾಟ್‌ಫೋರ್ಡ್ ವೆಸ್ಟ್‌ಫೀಲ್ಡ್ ಶಾಪಿಂಗ್ ಸೆಂಟರ್‌ನಲ್ಲಿ ಭಾರವಾದ ಚೇರ್ ಅನ್ನು ಹೊತ್ತುಕೊಂಡು ಕೆಳಗೆ ತರುವ ಬದಲು ತಮ್ಮ ಕೆಲಸ ಸುಲಭವಾಗಿಸಲು ಹುಡುಗರಿಬ್ಬರು ಮೂರನೇ ಮಹಡಿಯಿಂದ ಅದನ್ನು ಕೆಳಗೆ ಎಸೆದಿದ್ದಾರೆ. ಈ ಆರೋಪದ ಮೇಲೆ ಅವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅವರು ಚೇರ್ ಕೆಳಗೆ ಎಸೆದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜನರನ್ನು ಬೆಚ್ಚಿ ಬೀಳಿಸಿದೆ.
ಈ ಸುದ್ದಿಯನ್ನೂ ಓದಿ:Viral Video: ಪಾರ್ಕಿಂಗ್ ಏರಿಯಾದ ಎರಡನೇ ಮಹಡಿಯಿಂದ ಬಿದ್ದ ಕಾರು: ಭಯಾನಕ ವಿಡಿಯೊ ವೈರಲ್
ವೈರಲ್ ವಿಡಿಯೊದಲ್ಲಿ ಚೇರ್ ಅನ್ನು ಮಹಡಿಯಿಂದ ಕೆಳಗೆ ಎಸೆಯುವುದು ಹಾಗೂ ನಂತರ ಹುಡುಗರು ಎಸ್ಕಲೇಟರ್ ಮೇಲೆ ಓಡುವುದು ರೆಕಾರ್ಡ್ ಆಗಿದೆ. ಹುಡುಗರು ಚೇರ್ ಕೆಳಗೆ ಎಸೆದಾಗ ಅಲ್ಲಿ ಹಲವು ಜನರು ಓಡಾಡುತ್ತಿದ್ದರು. ಅದು ಅಪ್ಪಿತಪ್ಪಿ ಯಾರ ಮೇಲಾದರೂ ಬಿದ್ದಿದ್ದರೆ ಅನಾಹುತ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ದುರಂತ ಸಂಭವಿಸಿಲ್ಲ. ಈ 14 ವರ್ಷ ಮತ್ತು 16 ವರ್ಷದ ಹುಡುಗರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.