Viral Video: ತನ್ನದೇ ನಾಪತ್ತೆ ಪೋಸ್ಟರ್ ಹಿಡಿದುಕೊಂಡು ಠಾಣೆಗೆ ಬಂದ ವ್ಯಕ್ತಿ; ದಿಗ್ಭ್ರಮೆಗೊಂಡ ಪೊಲೀಸರು!
Man walks into Police Station: ವ್ಯಕ್ತಿಯೊಬ್ಬ ತನ್ನದೇ ನಾಪತ್ತೆ ಪೋಸ್ಟರ್ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದು, ಇದು ಪೊಲೀಸರನ್ನು ದಿಗ್ಭ್ರಮೆಗೊಳಿಸಿದೆ. ತನ್ನ ನಾಪತ್ತೆ ಪೋಸ್ಟರ್‌ನೊಂದಿಗೆ ಠಾಣೆಗೆ ಬಂದ ಇರ್ಷಾದ್, ಹಂಟರ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.


ಛತ್ರ: ವ್ಯಕ್ತಿಯೊಬ್ಬ ತನ್ನದೇ ನಾಪತ್ತೆ ಪೋಸ್ಟರ್ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದು, ಇದು ಪೊಲೀಸರನ್ನು ದಿಗ್ಭ್ರಮೆಗೊಳಿಸಿದೆ. ಜಾರ್ಖಂಡ್‌ನ ಛತ್ರ ಜಿಲ್ಲೆಯಲ್ಲಿ ವಿಚಿತ್ರ ಘಟನೆ ನಡೆದಿದ್ದು, ತನ್ನ ನಾಪತ್ತೆ ಪೋಸ್ಟರ್‌ನೊಂದಿಗೆ ಪೊಲೀಸ್ ಠಾಣೆಗೆ ನಡೆದು ಬಂದಿದ್ದಾನೆ. ವ್ಯಕ್ತಿಯನ್ನು ಗೆರುವಾ ಗ್ರಾಮದ ಮೊಹಮ್ಮದ್ ಇರ್ಷಾದ್ ಎಂದು ಗುರುತಿಸಲಾಗಿದೆ.
ತನ್ನ ನಾಪತ್ತೆ ಪೋಸ್ಟರ್‌ನೊಂದಿಗೆ ಠಾಣೆಗೆ ಬಂದ ಇರ್ಷಾದ್, ಹಂಟರ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಸ್ಥಳೀಯ ಯುವಕರ ಗುಂಪೊಂದು ನಕಲಿ ಪೋಸ್ಟರ್ ಅನ್ನು ಪ್ರಸಾರ ಮಾಡುವ ಮೂಲಕ ತಾನು ಕಣ್ಮರೆಯಾಗಿದ್ದೇನೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಇರ್ಷಾದ್ ಆರೋಪಿಸಿದ್ದಾರೆ.
ಸುಮಾರು ಎರಡು ತಿಂಗಳಿನಿಂದ ಸುಮಾರು ಹನ್ನೆರಡು ಯುವಕರ ಗುಂಪು ತನ್ನನ್ನು ಹಿಂಸಿಸುತ್ತಿದೆ ಎಂದು ಇರ್ಷಾದ್ ಹೇಳಿದ್ದಾರೆ. ಮನೆಯಿಂದ ಹೊರಬಂದಾಗ, ಸಾರ್ವಜನಿಕ ಸ್ಥಳಗಳು ಮತ್ತು ಅಂಗಡಿಗಳಲ್ಲಿ ತನ್ನ ಫೋಟೋವಿರುವ ಪೋಸ್ಟರ್ ಅಂಟಿಸಿ ನಾಪತ್ತೆಯಾಗಿದ್ದಾರೆ ಎಂದು ಬರೆಯಲಾಗಿತ್ತು. ಇದನ್ನು ನೋಡಿದ ಇರ್ಷಾದ್ ಆಘಾತಕ್ಕೊಳಗಾಗಿದ್ದರು.
ಪೋಸ್ಟರ್‌ಗಳಲ್ಲಿ ಇರ್ಷಾದ್, ತನ್ನ ಫೋಟೋ ನೋಡಿ ಆಘಾತಕ್ಕೊಳಗಾಗಿದ್ದಾರೆ. ಅದರಲ್ಲಿ ಜುಲೈ 5ರಿಂದ ಕಾಣೆಯಾಗಿದ್ದಾರೆ ಎಂದು ಬರೆಯಲಾಗಿದ್ದು, ಮಾಹಿತಿ ಇರುವ ಯಾರಾದರೂ ಅವರ ಕುಟುಂಬವನ್ನು ಸಂಪರ್ಕಿಸುವಂತೆ ಒತ್ತಾಯಿಸಲಾಗಿದೆ. ತನಗೆ ಕಿರುಕುಳ ನೀಡಿದ ಯುವಕರೇ ಈ ಕೃತ್ಯದ ಹಿಂದೆ ಇದ್ದಾರೆ ಎಂಬುದು ಇರ್ಷಾದ್ ಆರೋಪ. ಬೀದಿ-ಬೀದಿಗಳಲ್ಲಿ ಅಂಟಿಸಿರುವ ಪೋಸ್ಟರ್‌ಗಳನ್ನು ಸ್ವತಃ ಇರ್ಷಾದ್ ತೆಗೆದುಹಾಕಿದ್ದಾರೆ. ಆದರೆ ಮಾರುಕಟ್ಟೆಗೆ ಭೇಟಿ ನೀಡಿದಾಗಲೆಲ್ಲಾ ಕಲ್ಲೆಸೆತ ಮತ್ತು ನಿಂದನೆ ಸೇರಿದಂತೆ ಕಿರುಕುಳವನ್ನು ಎದುರಿಸುತ್ತಲೇ ಇರುವುದಾಗಿ ಇರ್ಷಾದ್ ಬೇಸರ ಹೊರಹಾಕಿದ್ದಾರೆ.
ಈ ಸುದ್ದಿಯನ್ನೂ ಓದಿ: Ceasefire Violation: ಪಾಕ್ ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ ಬಾಲಿವುಡ್‌ನ ಈ ಸಿನಿಮಾ ಸೀನ್ ಫುಲ್ ವೈರಲ್-ಅಂತಹದ್ದೇನಿದೆ ಇದರಲ್ಲಿ?
ನಿರಂತರ ಕಿರುಕುಳದಿಂದಾಗಿ, ಇರ್ಷಾದ್ ಈಗ ನಮಾಜ್ ಮಾಡಲು ಮಾತ್ರ ಹೊರಹೋಗುತ್ತಾರಂತೆ. ಬಳಿಕ ಮನೆಯಿಂದ ಹೊರಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಆದರೆ, ಅಂತಹ ಸಮಯವನ್ನೇ ಗುರಿಯಾಗಿಸಿಕೊಂಡ ಯುವಕರ ಗುಂಪೊಂದು ತನಗೆ ಕಲ್ಲೆಸೆಯುವುದು, ಕಿರುಕುಳ ನೀಡುವುದು ಮಾಡುತ್ತಿದ್ದಾರೆ. ತಾನು ಮಾನಸಿಕ ಅಸ್ವಸ್ಥನಲ್ಲ ಎಂದು ಸಹಾಯ ಕೋರುತ್ತಾ ಇರ್ಷಾದ್ ಅಂಗಲಾಚಿದ್ದಾರೆ.
ಪರಿಸ್ಥಿತಿ ಎಷ್ಟರ ಮಟ್ಟಿಗೆ ವಿಕೋಪಕ್ಕೆ ಹೋಗಿದೆ ಎಂದರೆ, ಯುವಕರ ಕೃತ್ಯಕ್ಕೆ ಪತ್ನಿ ಪ್ರತಿಭಟಿಸಿದಾಗ ಅವರ ಜೊತೆ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ. ಕಿರುಕುಳ ನೀಡುವ ಗುಂಪಿನಲ್ಲಿ ಇರ್ಷಾದ್ ನಿರ್ದಿಷ್ಟವಾಗಿ ಮೊಹಮ್ಮದ್ ಆದಿಲ್, ಮೊಹಮ್ಮದ್ ಚೋಟು, ಮೊಹಮ್ಮದ್ ಆಜಾದ್ ಮತ್ತು ಮೊಹಮ್ಮದ್ ಸೈಫ್ ಅವರನ್ನು ಹೆಸರಿಸಿದ್ದಾರೆ. ನಿರಂತರ ಹಿಂಸೆಯು ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.