Viral Video: ವಿದ್ಯಾರ್ಥಿಗಳ ಜೊತೆ ಭರ್ಜರಿ ಡಾನ್ಸ್- ಶಿಕ್ಷಕನ ಈ ವಿಡಿಯೊ ಫುಲ್ ವೈರಲ್
Man’s Energetic Dance with Students: ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿನಿಯರೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಾಲಾ ತರಗತಿಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ನೃತ್ಯದ ಸವಾಲು ಸ್ವೀಕರಿಸಿದ ವಿಡಿಯೊ ಇದೀಗ ನೆಟ್ಟಿಗರನ್ನು ಬೆರಗುಗೊಳಿಸಿದೆ.


ನವದೆಹಲಿ: ಇಂದು ಅನೇಕ ಶಿಕ್ಷಕರು ತಮ್ಮ ಬೋಧನೆ ಮತ್ತು ಶಿಸ್ತಿನ ವಿಧಾನಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ, ಶಿಕ್ಷಕನೊಬ್ಬ (Teacher) ತನ್ನ ವಿದ್ಯಾರ್ಥಿನಿಯರೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೊ ವೈರಲ್ (Viral Video) ಆಗಿದೆ. ಶಾಲಾ ತರಗತಿಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ನೃತ್ಯದ ಸವಾಲು ಸ್ವೀಕರಿಸಿದ ವಿಡಿಯೊ ಇದೀಗ ನೆಟ್ಟಿಗರನ್ನು ಬೆರಗುಗೊಳಿಸಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ, ಶಿಕ್ಷಕರು ತಮ್ಮ ವಿದ್ಯಾರ್ಥಿನಿಯರೊಂದಿಗೆ ತಾಲ್ ಸಿನಿಮಾದ ಪ್ರಸಿದ್ಧ ಹಾಡಿಗೆ (ವೆಸ್ಟರ್ನ್ ಆವೃತ್ತಿ) ನೃತ್ಯ ಮಾಡುವುದನ್ನು ಕಾಣಬಹುದು. ವಿದ್ಯಾರ್ಥಿಗಳು ಅವರ ನೃತ್ಯದ ಶೈಲಿಯನ್ನು ಅನುಸರಿಸಿದ್ದಾರೆ. ಶಿಕ್ಷಕರ ನೃತ್ಯವು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಬೆರಗುಗೊಳಿಸಿದೆ. ಎಲ್ಲರೂ ಶಿಕ್ಷಕರ ನೃತ್ಯವನ್ನು ಹಾಡಿ ಹೊಗಳಿದ್ದಾರೆ.
ಶಿಕ್ಷಕರ ವೈರಲ್ ಡಾನ್ಸ್ ವಿಡಿಯೊಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಒಬ್ಬ ಬಳಕೆದಾರರು, ಶಿಕ್ಷಕರ ಅದ್ಭುತ ನೃತ್ಯವನ್ನು ಕೊಂಡಾಡಿದ್ದಾರೆ. ವಿದ್ಯಾರ್ಥಿಗಳು ನಿಜಕ್ಕೂ ಪುಣ್ಯವಂತರು ಎಂದು ಹೇಳಿದ್ದಾರೆ. ಈ ವಿಡಿಯೊ ನೋಡುತ್ತಿದ್ರೆ ಮನಸ್ಸಿಗೆ ಮುದ ನೀಡುತ್ತದೆ. ಇದನ್ನೇ ಪ್ರತಿಭೆ ಎಂದು ಕರೆಯಲಾಗುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಬಿಹಾರದಲ್ಲಿ ರಾಹುಲ್ ಗಾಂಧಿ ಕೆನ್ನೆಗೆ ಮುತ್ತು ಕೊಟ್ಟು ಏಟು ತಿಂದ ಯುವಕ; ವಿಡಿಯೊ ಇಲ್ಲಿದೆ
ವಿಡಿಯೊ ವೀಕ್ಷಿಸಿ:
ಕೆಲವರು, ಆ ಶಿಕ್ಷಕ ನೃತ್ಯ ಮಾಡುವುದಕ್ಕೇ ಹುಟ್ಟಿದ್ದಾರೆ ಎಂದು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಯಾಕೆಂದರೆ ಶಿಕ್ಷಕರ ನೃತ್ಯವು ಅಷ್ಟು ಅದ್ಭುತವಾಗಿದೆ. ಹುಡುಗಿಯರು ಅವರೊಂದಿಗೆ ನೃತ್ಯ ಮಾಡಲು ಸಾಕಷ್ಟು ಆರಾಮದಾಯಕವಾಗಿದ್ದಾರೆ ಎಂಬ ಅಂಶವು ಅವರು ಯೋಗ್ಯ ಮತ್ತು ಗೌರವಾನ್ವಿತ ಶಿಕ್ಷಕ ಎಂಬುದನ್ನು ತೋರಿಸುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಆದರೆ, ಇದು ಯಾವ ಶಾಲೆಯಲ್ಲಿ, ಎಲ್ಲಿ ನಡೆದಿದ್ದು ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ.
ಕೆಲವು ದಿನಗಳ ಹಿಂದೆ ಇದೇ ರೀತಿಯ ವಿಡಿಯೊ ವೈರಲ್ ಆಗಿತ್ತು. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ತರಗತಿಯಲ್ಲಿ ನಡೆದ ದೃಶ್ಯವನ್ನು ಸೆರೆಹಿಡಿಯಲಾಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗಳೊಂದಿಗೆ ಜನಪ್ರಿಯ ಗೀತೆ ‘ದೇಸ್ ರಂಗಿಲಾ’ಗೆ ಉತ್ಸಾಹದಿಂದ ನೃತ್ಯ ಮಾಡುವುದನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಆ ಶಿಕ್ಷಕ ನೃತ್ಯವನ್ನು ಪ್ರ್ಯಾಕ್ಟೀಸ್ ಮಾಡಿಸುತ್ತಿರುವ ವಿಡಿಯೊ ನೆಟ್ಟಿಗರ ಮನಗೆದ್ದಿತ್ತು.