Viral News: ಗರ್ಲ್‌ಫ್ರೆಂಡ್ ಜೊತೆ ಸರಸವಾಡುತ್ತಿದ್ದ ವೇಳೆಯೇ ವೃದ್ಧ ಪರಲೋಕಕ್ಕೆ!
Man Dies During Sex: ಅನೈತಿಕ ಸಂಬಂಧವಿಟ್ಟುಕೊಂಡಿದ್ದ 66 ವರ್ಷದ ವಿವಾಹಿತ ವ್ಯಕ್ತಿಯೊಬ್ಬ, ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ ಮೃತಪಟ್ಟಿದ್ದಾನೆ. ರಾತ್ರಿ ಗೆಳತಿ ಜೊತೆ ಮಲಗಿದ್ದವ, ಬೆಳಗಾದ ಇನ್ನಿಲ್ಲವಾಗಿದ್ದಾನೆ. ಚೀನಾದಲ್ಲಿ ಈ ಘಟನೆ ನಡೆದಿದೆ.


ಬೀಜಿಂಗ್: 66 ವರ್ಷದ ವಿವಾಹಿತ ವ್ಯಕ್ತಿಯೊಬ್ಬ ತನ್ನ ವಯಸ್ಸಿನ ಹೊರತಾಗಿಯೂ ವಿವಾಹೇತರ ಸಂಬಂಧವನ್ನು ಹೊಂದಿದ್ದನು. ಮದುವೆಯಾಗಿದ್ದರೂ ಬೇರೊಬ್ಬಾಕೆಯೊಂದಿಗೆ ರಹಸ್ಯ ಸಂಬಂಧವಿಟ್ಟುಕೊಂಡಿದ್ದ ಈ ವೃದ್ಧ, ಲೈಂಗಿಕ ಕ್ರಿಯೆ ನಡೆಸಿದ ನಂತರ ಸಾವಿಗೀಡಾಗಿದ್ದಾನೆ. ಚೀನಾದಲ್ಲಿ ಈ ಘಟನೆ ನಡೆದಿದೆ. ವೃದ್ಧ ವ್ಯಕ್ತಿಯು ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ತನ್ನ ಗೆಳತಿಯೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಭಯಾನಕ ಘಟನೆ ನಡೆದಿದೆ. ಇದನ್ನು ನೋಡಿದ ಹೋಟೆಲ್ ಸಿಬ್ಬಂದಿ ದಿಗ್ಭ್ರಮೆಗೊಂಡರು. ಆಘಾತಕಾರಿ ಸತ್ಯ ಬೆಳಕಿಗೆ ಬರುವವರೆಗೂ ಆತನ ಕುಟುಂಬಕ್ಕೆ ಈ ಬಗ್ಗೆ ತಿಳಿದಿರಲಿಲ್ಲ. ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಮಲಗಿದ್ದಾತ ಶವವಾಗಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಎಂಬ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.
ವರದಿಗಳ ಪ್ರಕಾರ, ಆ ವ್ಯಕ್ತಿ 1980 ರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಮಾಜಿ ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧ ಮತ್ತೆ ಬೆಳೆಸಿದ್ದಾನೆ. 2023 ರಲ್ಲಿ ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದಾರೆ. ಆ ಬಳಿಕ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಜುಲೈ 24 ರಂದು, ಈ ಜೋಡಿಯು ಹೋಟೆಲ್‌ನಲ್ಲಿ ಉಳಿದುಕೊಂಡರು. ಆ ರಾತ್ರಿಯನ್ನು ಇಬ್ಬರು ಒಟ್ಟಿಗೆ ಕಳೆದರು. ಆದರೆ ಮಹಿಳೆ ಎಚ್ಚರವಾದಾಗ, ಆಕೆಯ ಸಂಗಾತಿ ಆಕೆಯ ಪಕ್ಕದಲ್ಲಿ ನಿರ್ಜೀವವಾಗಿ ಬಿದ್ದಿದ್ದ.
ಮಹಿಳೆಯು ಕೋಣೆಯಿಂದ ಹೊರಬಂದಿದ್ದಾಳೆ. ಮತ್ತೆ ಹಿಂತಿರುಗಿ ಕೋಣೆಗೆ ಬಂದಾಗ ಬಾಗಿಲು ಲಾಕ್ ಆಗಿತ್ತು. ಹೀಗಾಗಿ ಸಹಾಯಕ್ಕಾಗಿ ಹೋಟೆಲ್ ಸಿಬ್ಬಂದಿಯನ್ನು ಕರೆದಿದ್ದಾಳೆ. ಈ ವೇಳೆ ಮಲಗಿದ್ದ ವ್ಯಕ್ತಿಯನ್ನು ಎಷ್ಟೇ ಎಬ್ಬಿಸಿದರೂ ಪ್ರಯೋಜನವಾಗಲಿಲ್ಲ. ಕೂಡಲೇ ವೈದ್ಯರಿಗೆ ಕರೆ ಮಾಡಲಾಯಿತು. ಅಷ್ಟೊತ್ತಿಗಾಗಲೇ ಆತ ಸಾವನ್ನಪ್ಪಿರುವ ಬಗ್ಗೆ ವೈದ್ಯರು ಘೋಷಿಸಿದರು.
ಇನ್ನು ಈ ವಿಚಾರ ತಿಳಿದ ನಂತರ, ಆ ವ್ಯಕ್ತಿಯ ಕುಟುಂಬವು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಕುಟುಂಬಕ್ಕೆ $ 77,000 (ಸುಮಾರು ರೂ. 67 ಲಕ್ಷ) ಪರಿಹಾರ ನೀಡುವಂತೆ ಗೆಳತಿಗೆ ಆದೇಶಿಸಿತು. ನಂತರ ಈ ಮೊತ್ತವನ್ನು $ 8,600 (ಸುಮಾರು ರೂ. 7.5 ಲಕ್ಷ) ಕ್ಕೆ ಇಳಿಸಲಾಯಿತು. ಆ ವ್ಯಕ್ತಿಯ ಸಾವಿಗೆ ಪ್ರಾಥಮಿಕವಾಗಿ ಅವನ ಆರೋಗ್ಯ ಸಮಸ್ಯೆಗಳೇ ಕಾರಣ ಎಂದು ತಿಳಿದ ನಂತರ ನ್ಯಾಯಾಲಯವು ಈ ತೀರ್ಮಾನ ತೆಗೆದುಕೊಂಡಿತು. ಆತನ ಸಾವಿಗೆ ಅವನೇ ಕಾರಣ ಎಂದು ನ್ಯಾಯಾಲಯ ನಿರ್ಧರಿಸಿತು. ಆದರೆ, ಗೆಳತಿ ಬೇಗ ಹಿಂತಿರುಗಿದ್ದರೆ ಆತನ ಜೀವ ಉಳಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿತು.
ಇದನ್ನೂ ಓದಿ: viral video: ಕ್ರಿಕೆಟ್ ಮೈದಾನಕ್ಕೆ ನುಗ್ಗಿ ಆಟಗಾರರ ಮೇಲೆ ದಾಳಿ ಮಾಡಿದ ಕೋತಿ