ಕ್ಯಾಲಿಫೋರ್ನಿಯಾ: ಮುಸುಕುಧಾರಿ ಕಳ್ಳರ ಗುಂಪೊಂದು ಅಂಗಡಿಯಿಂದ ಡಾಲರ್ 7,000 (ಭಾರತೀಯ ರೂ.ಗಳಲ್ಲಿ ಸುಮಾರು ₹ 5,81,000) ಮೌಲ್ಯದ ಲಬುಬು ಗೊಂಬೆಗಳನ್ನು ಕದ್ದೊಯ್ದ ಘಟನೆ ಕ್ಯಾಲಿಫೋರ್ನಿಯಾದ ಲಾ ಪುಯೆಂಟೆಯಲ್ಲಿ ನಡೆದಿದೆ. ಈ ಘಟನೆ ಆಗಸ್ಟ್ 6ರ ಬೆಳಗ್ಗೆ ಸಂಭವಿಸಿದೆ. ಕಳ್ಳತನದ ಸಮಯದಲ್ಲಿ ಶಂಕಿತರು ಕದ್ದಿರುವ ಟೊಯೋಟಾ ಟಕೋಮಾ ವಾಹನವನ್ನು ಬಳಸಿದ್ದಾರೆ ಎನ್ನಲಾಗಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡರು. ಕಳ್ಳರ ಪತ್ತೆಗಾಗಿ ಶೋಧ ಕಾರ್ಯಾಚರಣೆ(Viral Video) ಕೈಗೊಳ್ಳಲಾಗಿದೆ.
ಕಳ್ಳರು ಅಂಗಡಿಗೆ ನುಗ್ಗಿ ಕಳ್ಳತನ ಮಾಡುತ್ತಿರುವ ದೃಶ್ಯವನ್ನು USA Today ವಿಡಿಯೊ ಹಂಚಿಕೊಂಡಿದೆ. ವಿಡಿಯೊದಲ್ಲಿ, ಮುಸುಕುಧಾರಿ ಕಳ್ಳರು ಅಂಗಡಿಯೊಳಗೆ ನುಗ್ಗಿ, ವಸ್ತುಗಳನ್ನು ಪತ್ತೆ ಹಚ್ಚಿ, ಪೆಟ್ಟಿಗೆಗಳನ್ನು ಹೊರಗೆ ತೆಗೆದುಕೊಂಡು ಹೋಗುವುದನ್ನು ನೋಡಬಹುದು.
ಹಾಂಗ್ ಕಾಂಗ್ ಮೂಲದ ಕಲಾವಿದ ಕೇಸಿಂಗ್ ಲುಂಗ್ ರಚಿಸಿದ ಲಬುಬು ಗೊಂಬೆಗಳು, ಒಂದು ದಶಕದ ಹಿಂದೆ ಬಿಡುಗಡೆಯಾದಾಗಿನಿಂದ ಹೆಚ್ಚು ಬೇಡಿಕೆಯಿರುವ ಸಂಗ್ರಹಯೋಗ್ಯ ವಸ್ತುಗಳಾಗಿವೆ. ಇನ್ನು ಅಂಗಡಿಯಿಂದ ಕಳ್ಳರು ಆಟಿಕೆಗಳನ್ನು ಒಯ್ದಿರುವುದು ಆಘಾತ ತಂದಿದೆ ಎಂದು ಆಟಿಕೆ ಮಾರಾಟಗಾರ ತಿಳಿಸಿದ್ದಾರೆ. ಅಪರಾಧಿಗಳನ್ನು ಗುರುತಿಸಲು ಸಾರ್ವಜನಿಕರು ಸಹಕರಿಸಬೇಕಾಗಿ ಅವರು ಒತ್ತಾಯಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
Authorities are looking for Labubu thieves who broke into a California store and made off with $7,000 worth of the monster doll collection. pic.twitter.com/cNCRO5HSY5
— USA TODAY (@USATODAY) August 9, 2025
ಜುಲೈನಲ್ಲಿ, ಬೋರ್ಕೆ ಸ್ಟ್ರೀಟ್‌ನಲ್ಲಿ ವಿಶೇಷ ಆಟಿಕೆ ಬಿಡುಗಡೆ ಸಮಾರಂಭಕ್ಕಾಗಿ ನೂರಾರು ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರು. ಅಷ್ಟೂ ಜನರು ಪಾಪ್ ಮಾರ್ಟ್ ಎಂಬ ಅಂಗಡಿಯಿಂದ ಸೀಮಿತ ಆವೃತ್ತಿಯ ಲುಬುಬು ಗೊಂಬೆಗಳನ್ನು ಖರೀದಿಸಲು ಉತ್ಸುಕರಾಗಿದ್ದರು. ಪಾಪ್ ಮಾರ್ಟ್ ಹಾಂಗ್ ಕಾಂಗ್ ಮೂಲದ ಕಂಪನಿಯಾಗಿದ್ದು, ಸಂಗ್ರಹಿಸಬಹುದಾದ ವಿಶೇಷ ಆಟಿಕೆಗಳಿಗೆ ಹೆಸರುವಾಸಿಯಾಗಿದೆ. ಅದರಲ್ಲೂ ವಿಶೇಷವಾಗಿ ಲ್ಯಾಬುಬಸ್ ಎಂಬ ದೈತ್ಯಾಕಾರದ ಗೊಂಬೆಗಳಿಗೆ ಇದು ಹೆಸರುವಾಸಿಯಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಮರಿಗಳನ್ನು ಕಾಪಾಡಲು ತಾಯಿ ಕರಡಿಯ ಪರದಾಟ ನೋಡಿದ್ರೆ ನೀವೂ ಕಂಬನಿ ಮಿಡಿಯುವಿರಿ; ಹೃದಯಸ್ಪರ್ಶಿ ವಿಡಿಯೊ ವೈರಲ್
ಟಿಕ್‌ಟಾಕ್‌ನಲ್ಲಿ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಈ ಆಟಿಕೆಗಳು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿವೆ. ಏಪ್ರಿಲ್ 2024 ರಲ್ಲಿ ಕೆ-ಪಾಪ್ ಐಕಾನ್ ಮತ್ತು ವೈಟ್ ಲೋಟಸ್ ನಟಿ ಲಿಸಾ ಮನೋಬಲ್ ಅವರು ಲಬುಬು ಗೊಂಬೆಯನ್ನು ತೆಗೆದುಕೊಂಡು ಹೋದರು. ಆ ಬಳಿಕ ಆಗ್ನೇಯ ಏಷ್ಯಾದಲ್ಲಿ ಲಬುಬು ಗೊಂಬೆ ಖರೀದಿಸುವುದು ಹೆಚ್ಚಾಯಿತು.