ಡೆಹ್ರಾಡೂನ್, ಅ. 1: ಉತ್ತರಾಖಂಡದಲ್ಲಿ ಭಾರಿ ಮಳೆಯಾಗುತ್ತಿದ್ದು, ಕುಮಾವುನ್ ಪ್ರದೇಶದಲ್ಲಿ ಪರ್ವತದ ದೊಡ್ಡ ಭಾಗವೊಂದು ಏಕಾಏಕಿ ಕುಸಿದು ಬಿದ್ದ ದೃಶ್ಯವೊಂದು ಭಾರಿ ವೈರಲ್ (Viral Video) ಆಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಕಲ್ಲು ಬಂಡೆಗಳು, ಮಣ್ಣು ಗುಡ್ಡದಿಂದ ಜಾರುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಭೂಕುಸಿತದ ತೀವ್ರತೆಯ ವಿಡಿಯೊ ನೋಡಿ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಉಲ್ಲೇಖಿಸಲಾದ ಪ್ರದೇಶಗಳಲ್ಲಿ ಉತ್ತರಕಾಶಿ, ರುದ್ರಪ್ರಯಾಗ, ಚಮೋಲಿ, ಬಾಗೇಶ್ವರ, ನೈನಿತಾಲ್, ಅಲ್ಮೋರಾ ಮತ್ತು ಪಿಥೋರಗಢ ಸೇರಿದೆ.
ವಿಡಿಯೊ ನೋಡಿ:
ಭೂಕುಸಿತದ ತೀವ್ರತೆ ಭೀಕರವಾಗಿದ್ದರೂ ಈ ಘಟನೆಯಿಂದ ಉಂಟಾದ ಆಸ್ತಿಪಾಸ್ತಿ ಹಾನಿ ಹಾಗೂ ಸಾವುನೋವುಗಳ ಬಗ್ಗೆ ಇನ್ನು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.ಇತ್ತೀಚಿನ ಭೂಕುಸಿತದ ದೃಶ್ಯಗಳು ಉತ್ತರಾಖಂಡದ ಕಡಿದಾದ ಹಿಮಾಲಯ ಭೂ ಪ್ರದೇಶದ ದುರ್ಬಲತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಸ್ಮಶಾನದಲ್ಲಿ ಸುಡುತ್ತಿದ್ದ ಹೆಣದ ಮಾಂಸ ತಿಂದ ಮಹಿಳೆ!
ಕೆಲವು ದಿನಗಳಿಂದ ಸುರಿದ ಭಾರಿ ಮಳೆ ಹಾಗೂ ಎತ್ತರದ ಪ್ರದೇಶಗಳಲ್ಲಿ ಬಿದ್ದ ಹಿಮಪಾತವು ಈ ಭೂಕುಸಿತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಹಿಮಾಲಯದ ಪರ್ವತ ಪ್ರಾಂತ್ಯ ಗಳಲ್ಲಿ ತೆರಳುವ ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳು ಎಚ್ಚರಿಕೆಯಿಂದಿರಲು ಆಡಳಿತ ಸೂಚನೆ ನೀಡಿದೆ.