ನವದೆಹಲಿ: ವಿಶ್ವದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ರೋಮ್ ಕೂಡ ಒಂದು. ಇಲ್ಲಿನ ಪ್ರಾಚೀನ ಕಟ್ಟಡ , ನಿಸರ್ಗ ಸೌಂದರ್ಯ ಕಾಣಲು ಪ್ರತೀ ವರ್ಷವೂ ವಿಶ್ವದ ಬೇರೆ ಬೇರೆ ಸ್ಥಳದಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ ನೀಡುವ ಸಲುವಾಗಿ ಆಗಾಗ ಕಟ್ಟಡ , ಗೋಪುರ, ಮನೆಗಳ ನವೀಕರಣ ಕಾರ್ಯ ಇಲ್ಲಿ ನಡೆಸಲಾಗುತ್ತದೆ. ಅಂತೆಯೇ ಈ ಬಾರಿ ಇಟಲಿಯ (Italy) ರಾಜಧಾನಿ ರೋಮ್ (Rome) ನಲ್ಲಿ ಮಧ್ಯಕಾಲೀನ ಗೋಪುರದ ನವೀಕರಣ ಕೆಲಸ ಕಾರ್ಯ ನಡೆಯುತ್ತಿದ್ದು ಇದೇ ಸಮಯ ದಲ್ಲಿ ಗೋಪುರ ಭಾಗಶಃ ಕುಸಿದಿದೆ. ಪರಿಣಾಮ ಗೋಪುರದೊಳಗೆ ಸಿಲುಕಿದ್ದ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ ರೋಮ್‌ನ ಇಂಪೀರಿಯಲ್ ಫೋರಂ ಬಳಿಯ ಜನನಿಬಿಡ ಪ್ರದೇಶ ದಲ್ಲಿ ಕೊಲೊಸಿಯಮ್‌ನಿಂದ ಸ್ವಲ್ಪ ದೂರದಲ್ಲಿರುವ ಗೋಪುರ ಒಂದರ ನವೀಕರಣ ಕೆಲಸ ನಡೆದಿದ್ದು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಎರಡು ಬಾರಿ ಗೋಪುರವು ಭಾಗಶಃ ಕುಸಿದಿದೆ. ಮೊದಲ ಸಲ ಕುಸಿತ ಉಂಟಾಗಿ ಒಂದೂವರೆ ಗಂಟೆಯ ನಂತರ ಎರಡನೇ ಸಲ ಕುಸಿದಿದೆ. ಹೀಗಾಗಿ ಸುತ್ರ ಮುತ್ತಲಿನ ಪ್ರದೇಶದಲ್ಲಿ ಧೂಳಿನ ವಾತಾವರಣವಾಗಿದ್ದನ್ನು ವಿಡಿಯೋದಲ್ಲಿ ಕಾಣಬಹುದು.
ವೈರಲ್ ವಿಡಿಯೊ ಇಲ್ಲಿದೆ :
ಘಟನೆ ತಿಳಿದು ಸ್ಥಳದಲ್ಲಿ ತೀವ್ರ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಸುದೀರ್ಘ ರಕ್ಷಣಾ ಕಾರ್ಯಾಚರಣೆಗಳ ಮಾಡಿದ ಬಳಿಕ ರೊಮೇನಿಯನ್ ಪ್ರಜೆಯು ದೇಹದ ಅವಶೇಷ ಪತ್ತೆ ಯಾಗಿದೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲು ಪ್ರಯತ್ನಿಸಿದರು ವ್ಯಕ್ತಿಯು ಆಂಬ್ಯುಲೆನ್ಸ್‌ನಲ್ಲಿ ಕೊನೆಯುಸಿ ರೆಳೆದಿದ್ದು ತಿಳಿದು ಬಂದಿದೆ. ಅವರು ಬೆಳಗ್ಗೆ 12.20 ಕ್ಕೆ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ ಎಂದು ಈ ಬಗ್ಗೆ ರೊಮೇ ನಿಯನ್ ವಿದೇಶಾಂಗ ಸಚಿವಾಲಯ ಅಧಿಕೃತವಾಗಿ ತಿಳಿಸಿದೆ.
ಮೊದಲ ಕುಸಿತದ ಸಮಯದಲ್ಲಿ ಒಳಗಿದ್ದ ಒಬ್ಬ ಕೆಲಸಗಾರ ಬಾಲ್ಕನಿಯ ಮೂಲಕ ತಪ್ಪಿಸಿ ಕೊಳ್ಳಲು ಪ್ರಯತ್ನಿಸಿದ್ದು ಆ ಕಾರ್ಯದಲ್ಲಿ ಆತ ಯಶಸ್ವಿಯಾಗಿದ್ದಾನೆ. ಅದು ಸುರಕ್ಷಿತ ವಾಗಿರಲಿಲ್ಲ ದಿದ್ದರೂ ಆತ ಬದುಕಲೇ ಬೇಕು ಎಂಬ ಹಠಕ್ಕೆ ಬಿದ್ದು ಸಾವನ್ನು ಜಯಿಸಿದ್ದಾನೆ ಎಂದು ಘಟನಾ ಸ್ಥಳದಲ್ಲಿದ್ದ 67 ವರ್ಷದ ಒಟ್ಟಾವಿಯಾನೋ ಎಂಬ ವ್ಯಕ್ತಿ ಘಟನೆ ಬಗ್ಗೆ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ:Viral Video: ಛೀ.. ಈತನೆಂಥಾ ನೀಚ! ಎಂಜಲು ಉಗುಳಿ ರೊಟ್ಟಿ ಮಾಡಿದ ಕಿಡಿಗೇಡಿ- ವಿಡಿಯೊ ಫುಲ್ ವೈರಲ್
ಅಷ್ಟಾದರೂ ಈ ಕುಸಿತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ರೋಮ್ ಸಾಂಸ್ಕೃತಿಕ ಪರಂಪರೆ ನಿರ್ದೇಶನಾಲಯದ ಪ್ರಕಾರ, ನವೀಕರಣ ಸಂದರ್ಭದಲ್ಲಿ ಗೋಪುರದ ಮೆಟ್ಟಿಲುಗಳ ಒಂದು ಭಾಗಕ್ಕೆ ಹಾನಿಯಾಗಿದೆ. ಅದರಿಂದ ಛಾವಣಿಗೆ ಹಾನಿಯನ್ನುಂಟಾಗಿದೆ ಪರಿಣಾಮ ಗೋಪುರ ಕುಸಿದಿರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ನವೀಕರಣದ ಮೊದಲು ಯೋಜನೆಯು ಮುಂದು ವರಿಸಲು ಅಲ್ಲಿ ಸುರಕ್ಷತೆಯನ್ನು ಕೂಡ ಅಧ್ಯಯನ ಮಾಡಲಾಗಿತ್ತು ಹಾಗಿದ್ದರು ಇಂತಹ ಘಟನೆ ನಡೆದಿದೆ ಎಂದು ನಿರ್ದೇಶನಾಲಯ ತಿಳಿಸಿದೆ.
ಈ ಘಟನೆ ಬೆಳಕಿಗೆ ಬಂದಂತೆ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖ ರೋವಾ (Maria Zakharova) ಅವರು ಈ ಬಗ್ಗೆ ಟೆಲಿ ಗ್ರಾಮ್ ನಲ್ಲಿ ಪೋಸ್ಟ್ ಹಂಚಿ ಕೊಂಡಿದ್ದಾರೆ. ಇಟಾಲಿಯನ್ ಸರ್ಕಾರವು ತೆರಿಗೆದಾರರ ಹಣವನ್ನು ವ್ಯರ್ಥ ಮಾಡುತ್ತಲೇ ಇದೆ. ಆರ್ಥಿಕತೆಯಿಂದ ಹಿಡಿದು ಅದರ ಗೋಪುರಗಳವರೆಗೆ ಇಡೀ ಇಟಲಿ ಕುಸಿಯುತ್ತಿದೆ. ಉಕ್ರೇನ್ ಬಗ್ಗೆ ಇಟಲಿಯ ಕೆಲ ನಿರ್ಣಯಗಳೆ ಇದಕ್ಕೆಲ್ಲ ಕಾರಣ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೆ ಇಟಲಿಯ ವಿದೇ ಶಾಂಗ ಸಚಿವ ಆಂಟೋನಿಯೊ ತಜಾನಿ ಅವರು ಜಖರೋವಾ ಅವರ ಹೇಳಿಕೆ ಗಳನ್ನು ಖಂಡಿಸಿದ್ದು ಈ ಮೂಲಕ ಇಂತಹ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.