Viral Video: ಛೀ.. ಈತನೆಂಥಾ ನೀಚ! ಎಂಜಲು ಉಗುಳಿ ರೊಟ್ಟಿ ಮಾಡಿದ ಕಿಡಿಗೇಡಿ- ವಿಡಿಯೊ ಫುಲ್ ವೈರಲ್
Spitting on Rotis at Wedding: ಮದುವೆಗೆ ಬಂದ ಅತಿಥಿಗಳಿಗೆ ಊಟಕ್ಕೆ ರೊಟ್ಟಿ ತಯಾರಿಸುತ್ತಿದ್ದ ವ್ಯಕ್ತಿಯೊಬ್ಬ ಆ ರೊಟ್ಟಿಯ ಹಿಟ್ಟಿನ ಮೇಲೆ ಉಗುಳುತ್ತಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರೋಪ ಮಾಡಿದ್ದ ವ್ಯಕ್ತಿ ವಿರುದ್ಧ ಕಠಿಣ ಶಿಕ್ಷೆ ಜಾರಿಗೆ ತರಲು ಸೋಶಿಯಲ್ ಮಿಡಿಯಾದಲ್ಲಿ ಅಧಿಕಾರಿಗಳನ್ನು ಟ್ಯಾಗ್ ಮಾಡಿ ವಿಡಿಯೊ ಪೋಸ್ಟ್ ಹಂಚಿಕೊಳ್ಳಲಾಗಿದೆ.ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ರೊಟ್ಟಿಯನ್ನು ಎಂಜಲು ಉಗುಳಿ ತಯಾರಿಸಿದ ವ್ಯಕ್ತಿ -
ಬುಲಂದ್‌ಶಹರ್: ಮದುವೆ ಮನೆಯಲ್ಲಿ ನಡೆಯುವ ಅನೇಕ ಘಟನೆಗಳು ಆಗಾಗ ಸುದ್ದಿಯಾಗುತ್ತಲೆ ಇರುತ್ತದೆ. ಮದುವೆ ಮನೆಗೆ ಕುದುರೆ ಏರಿ ಬರುವ ವರ, ವಿಚಿತ್ರವಾಗಿ ಬಟ್ಟೆ ತೊಟ್ಟು ಬರುವ ವಧು.. ಹೀಗೆ ನಾನಾತರನಾಗಿ ವಿಡಿಯೊ ಹರಿದಾಡುತ್ತಿರುತ್ತದೆ. ಅಂತೆಯೇ ಮದುವೆಗೆ ಬಂದ ಅತಿಥಿಗಳಿಗೆ ಊಟಕ್ಕೆ ರೊಟ್ಟಿ ತಯಾರಿಸುತ್ತಿದ್ದ ವ್ಯಕ್ತಿಯೊಬ್ಬ ಆ ರೊಟ್ಟಿಯ ಹಿಟ್ಟಿನ ಮೇಲೆ ಉಗುಳುತ್ತಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ (Bulandshahr) ನಡೆದಿದೆ. ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡ ನೆಂಟರು, ಬಂಧುಗಳಿಗೆ ಆತಿಥ್ಯ ನೀಡುವ ಬದಲು ಉಗುಳಿದ್ದ ರೊಟ್ಟಿಯನ್ನು ತಿನ್ನಲು ನೀಡಿದರೆ ಹೇಗಾಗಬೇಡ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿ ಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ವೈರಲ್ ಆದ ವಿಡಿಯೊದಲ್ಲಿ ರೊಟ್ಟಿ ತಯಾರಿಸುತ್ತಿದ್ದ ವ್ಯಕ್ತಿಯು ತಂದೂರ್ ಒಳಗೆ ರೊಟ್ಟಿ ಹಾಕುವ ಮೊದಲು ಅವುಗಳ ಮೇಲೆ ಉಗುಳುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಮಾಧ್ಯ ಮದಲ್ಲಿ ಈ ಕ್ಲಿಪ್ ಗೆ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಕೃತ್ಯಕ್ಕಾಗಿ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆನ್ಲೈನ್ ನಲ್ಲಿ ನೆಟ್ಟಿಗರು ಒತ್ತಾಯಿಸಿದರು. ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕೃತ್ಯ ಮಾಡಿದ್ದ ಬುಲಂದ್‌ಶಹರ್ ಜಿಲ್ಲೆಯ ಪಠಾಣ್ ಟೋಲಾ ಪ್ರದೇಶದ ನಿವಾಸಿ ಡ್ಯಾನಿಶ್ ನನ್ನು ಬಂಧಿಸಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ:
#Bulandshahr , UP:Major controversy during wedding ceremony in Aterna village under #Pahasu police station area Video goes viral
— Indian Observer (@ag_Journalist) November 4, 2025
— Allegations that the person making rotis in the feast mixed "spit" into the food Police are engaged in investigation
#UttarPradesh #ThookJihad pic.twitter.com/nLOvon6nRr
ಇದನ್ನೂ ಓದಿ:Viral Video: ಚಿಕನ್ ಫ್ರೈ ವಿಚಾರಕ್ಕೆ ಮದ್ವೆ ಮನೆ ಆಯ್ತು ರಣಾಂಗಣ! ಬಂಧುಗಳ ನಡುವೆ ಮಾರಾಮಾರಿ
ಆರೋಪಿಯನ್ನು ನವೆಂಬರ್ 2 ರಂದು ಪಹಸು ಪೊಲೀಸ್ ಠಾಣೆಯಲ್ಲಿ ಬಂಧಿಸಿದ್ದಾರೆ. ವಿವಿಧ ವಿಭಾಗಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವ್ಯಕ್ತಿಯನ್ನು ವಶಕ್ಕೆ ಪಡೆದು ಕೊಳ್ಳಲಾಗಿದ್ದು ತನಿಖೆ ಬಳಿಕ ಏನಾಗಿದೆ ಎಂಬುದನ್ನು ತಿಳಿಸುತ್ತೇವೆ ಎಂದು ಪೊಲೀಸ್ ವರಿಷ್ಠಾ ಧಿಕಾರಿ ಡಾ. ತೇಜ್‌ವೀರ್ ಸಿಂಗ್ (Tejveer Singh) ಅವರು ಹೇಳಿಕೆ ನೀಡಿದ್ದಾರೆ.
ಆರೋಪ ಮಾಡಿದ್ದ ವ್ಯಕ್ತಿ ವಿರುದ್ಧ ಕಠಿಣ ಶಿಕ್ಷೆ ಜಾರಿಗೆ ತರಲು ಸೋಶಿಯಲ್ ಮಿಡಿಯಾದಲ್ಲಿ ಅಧಿಕಾರಿಗಳನ್ನು ಟ್ಯಾಗ್ ಮಾಡಿ ವಿಡಿಯೋ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಮೂಲಕ ನೆಟ್ಟಿಗರು ವಿಡಿಯೋ ಬಗ್ಗೆ ನಾನಾ ತರನಾಗಿ ಕಾಮೆಂಟ್ ಹಾಕಿದ್ದಾರೆ. ಮದುವೆ ಊಟ ಎಂದು ಸವಿಯುವ ಬದಲು ಅದನ್ನು ಅನುಮಾನಿಸಿ ನೋಡುವಂತೆ ಕೆಲವರು ಮಾಡಿಬಿಡುತ್ತಾರೆ ಎನ್ನಲು ಈ ವಿಡಿಯೋ ಸಾಕ್ಷಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಹಾಕಿದ್ದಾರೆ. ನೈರ್ಮಲ್ಯ ಕಾಯ್ದುಕೊಳ್ಳದೆ ಬೇಜವಬ್ದಾರಿ ಹೊಂದಿರುವವರಿಗೆ ಕೆಲಸ ನೀಡಿದ್ದು ಕೂಡ ತಪ್ಪು ಎಂದು ಮತ್ತೊಬ್ಬ ಬಳಕೆದಾರನು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇತರ ಅಂಗಡಿ ಮುಂಗ ಟ್ಟಿನ ಆಹಾರ ತಯಾರಿಕೆಯ ವ್ಯವಸ್ಥೆಗಳಲ್ಲಿ ನೈರ್ಮಲ್ಯ ವಿಚಾರಗಳು ಆಗಾಗ ಸುದ್ದಿಯಾಗುತ್ತಿದೆ. ಈ ಬಗ್ಗೆ ಜನರು ಕೂಡ ಕಳವಳ ವ್ಯಕ್ತ ಪಡಿಸಿದ್ದಾರೆ.