ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಿಳಾ ರೈಡರ್‌ ಮೇಲೆ ಕಾರ್ ಚಲಾಯಿಸಿ ಪರಾರಿಯಾದ ದುಷ್ಕರ್ಮಿಗಳು! ಹೆಲ್ಮೆಟ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ

Viral News: ಗುರುಗ್ರಾಮ್ ನಲ್ಲಿ ಮಹಿಳಾ ಬೈಕರ್‌ವೊಬ್ಬರಿಗೆ ಎದುರಾದ ಅನುಭವವನ್ನು ಶೇರ್ ಮಾಡಿದ್ದಾರೆ. ಬೈಕ್ ನಲ್ಲಿ ಸಿಯಾ ಎಂಬ ಮಹಿಳೆ ತನ್ನ ರೈಡಿಂಗ್ ಗ್ರೂಪ್ ಜೊತೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬೈಕರ್ ಅನ್ನು ಹಿಂಬಾಲಿಸಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಈ ರಭಸಕ್ಕೆ ಸಿಯಾ ರಸ್ತೆಗೆ ಬಿದ್ದಿದ್ದು ಬೈಕ್ ಕೆಲವು ಮೀಟರ್‌ಗಳ ಕಾಲ ರಸ್ತೆಗೆ ಎಸೆಯಲ್ಪಟ್ಟಿದೆ‌. ಈ ಇಡೀ ಘಟನೆ ಬೈಕ್‌ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಹಿಳಾ ರೈಡರ್ ಹಿಂಬಾಲಿಸಿ ಡಿಕ್ಕಿ ಹೊಡೆದು ಪರಾರಿಯಾದ ಪುಂಡರು

ಗುರುಗ್ರಾಮ,ಸೆ‌.14: ಮಹಿಳೆಯರಿಗೆ ಸಾರ್ವಜನಿಕ ಸ್ಥಳದಲ್ಲೂ ರಕ್ಷಣೆ ಇಲ್ಲ ಅನ್ನುವಂತಹ ಅನೇಕ ಘಟನೆಗಳು ಇತ್ತೀಚೆಗೆ ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಗುರುಗ್ರಾಮ್ ನಲ್ಲಿ ಮಹಿಳಾ ಬೈಕರ್ ವೊಬ್ಬರಿಗೆ ಎದುರಾದ ಅನುಭವವನ್ನು ಶೇರ್ (Viral News) ಮಾಡಿದ್ದಾರೆ. ಬೈಕ್ ನಲ್ಲಿ ಸಿಯಾ ಎಂಬ ಮಹಿಳೆ ತನ್ನ ರೈಡಿಂಗ್ ಗ್ರೂಪ್ ಜೊತೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬೈಕರ್ ಅನ್ನು ಹಿಂಬಾಲಿಸಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಈ ರಭಸಕ್ಕೆ ಸಿಯಾ ರಸ್ತೆಗೆ ಬಿದ್ದಿದ್ದು ಬೈಕ್ ಕೆಲವು ಮೀಟರ್‌ಗಳ ಕಾಲ ರಸ್ತೆಗೆ ಎಸೆಯಲ್ಪಟ್ಟಿದೆ‌. ಈ ಇಡೀ ಘಟನೆ ಬೈಕ್‌ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಬಗ್ಗೆ ಅಳಲು ತೋಡಿಕೊಂಡ ಮಹಿಳೆ ಇಂದು ಗುರುಗ್ರಾಮ್‌ನ ರಸ್ತೆಗಳಲ್ಲಿ ಬಹಳಷ್ಟು ಅಸುರಕ್ಷಿತ ಭಾವನೆ ಮೂಡಿದೆ. ಇಂತಹ ಜನರಿಗೆ ಜನರಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯಾರ ಭಯವೂ ಇಲ್ಲ, ಎಂದು ಈ ಸನ್ನಿವೇಶವನ್ನು ವಿವರಿಸಿದ್ದಾರೆ. ಈ ವಿಡಿಯೊ ನೋಡಿ ಕೆಲವರು ನಗರದಲ್ಲಿನ ರಸ್ತೆ ಸುರಕ್ಷತೆ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

​ಇನ್‌ಸ್ಟಾಗ್ರಾಮ್‌ನಲ್ಲಿ ಸಿಯಾ ವಿಡಿಯೊ ಹಂಚಿಕೊಂಡಿದ್ದು ಭಾನುವಾರದಂದು ಗುರುಗ್ರಾಮ್‌ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ತಮ್ಮ ಬೈಕಿಂಗ್ ಗುಂಪಿನ ಸದಸ್ಯರೊಂದಿಗೆ 'ಏಪ್ರಿಲಿಯಾ ಆರ್‌ ಎಸ್ 457' ಸ್ಪೋರ್ಟ್ಸ್ ಬೈಕ್ ಅನ್ನು ಚಲಾಯಿಸುತ್ತಿದ್ದಾಗ ಈ ಘಟನೆ ನಡೆದಿದೆ. ತಮ್ಮ ಪ್ರಯಾಣದ ಆರಂಭದಿಂದಲೂ ಕಾರ್ ನಲ್ಲಿದ್ದ ಗುಂಪೊಂದು ತಮ್ಮನ್ನು ಹಿಂಬಾಲಿಸಲು ಪ್ರಯತ್ನಿಸುತ್ತಿದ್ದರು ಎಂದು ಅವರು ದೂರಿದ್ದಾರೆ.

ವಿಡಿಯೋ ನೋಡಿ:



ಕಾರ್‌ನಲ್ಲಿದ್ದ ವ್ಯಕ್ತಿಗಳನ್ನು ಗಮನಿಸಿದಾಗ ಕುಡಿತದ ನಶೆಯಲ್ಲಿರುವಂತೆ ಕಂಡು ಬಂದಿದೆ. ಕಾರ್ ತನ್ನ ಬೈಕ್ ನ ಹತ್ತಿರ ತಲುಪಿಸಿ ಆಕ್ರಮಣಕಾರಿಯಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ. ಸಿಯಾ ಕಾರ್ ನಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದಾಗಲೂ ಬೈಕ್ ನಿಲ್ಲಿಸುವಂತೆ ಬೆದರಿಕೆ ಹಾಕಿದ್ದಾರೆ.

Viral Video: ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ; ಜನಪ್ರಿಯವಾಗುತ್ತಿದೆ ದೇಶದ ಹೆಲ್ತ್‌ ಟೂರಿಸಂ

ಕಾರ್ ತಮ್ಮ ಬೈಕ್ ಅನ್ನು ತಡೆಯದಂತೆ ಮುಂದೆ ಸಾಗಲು ಪ್ರಯತ್ನಿಸುತ್ತಿದೆ. ಆದಾಗ್ಯೂ, ಕಾರು ಚಾಲಕ ಅತ್ಯಂತ ರಭಸವಾಗಿ ಬಂದು ಸಿಯಾ ಅವರ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿ ಯಾಗಿ ದ್ದಾರೆ. ಡಿಕ್ಕಿಯ ರಭಸಕ್ಕೆ ಸಿಯಾ ರಸ್ತೆಗೆ ಬಿದ್ದಿದ್ದು ಅವರ ಬೈಕ್ ಕೆಲವು ಮೀಟರ್‌ಗಳ ಕಾಲ ರಸ್ತೆಯಲ್ಲಿ ಎಳೆಯಲ್ಪಟ್ಟಿದೆ. ಡಿಕ್ಕಿಯ ನಂತರ, ಅವರ ಸ್ನೇಹಿತರೊಬ್ಬರು ಕಾರನ್ನು ಹಿಂಬಾಲಿಸಿ ಚಾಲಕನನ್ನು ತಡೆಯಲು ಪ್ರಯತ್ನಿಸಿದ್ದಾರೆ

ರೆಡ್ ಸಿಗ್ನಲ್ ಬಳಿ ಮಹಿಳೆಯ ಸ್ನೇಹಿತ ಚಾಲಕನ ಬಳಿ ಪ್ರಶ್ನಿಸಿದಾಗ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಚಾಲಕ ಅಲ್ಲಿಂದಲೂ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಕಾಲ್ಕಿತ್ತಿದ್ದಾನೆ. ರಸ್ತೆಯನ್ನು ಬಳಸುವ ಇತರರಿಗೆ ಅಪಾಯವನ್ನುಂಟುಮಾಡಿ, ಪರಾರಿಯಾಗುವ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಯಾ ತನ್ನ ವೀಡಿಯೊದಲ್ಲಿ ಗುರುಗ್ರಾಮ ಪೊಲೀಸರಿಗೆ ಮನವಿ ಮಾಡಿದರು. ಅನೇಕರು ಗುರುಗ್ರಾಮ ಸಂಚಾರ ಪೊಲೀಸ್ ಟ್ಯಾಗ್ ಮಾಡಿ, ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.