ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕ್ರೂರಿಗಳ ಚಿತ್ರಹಿಂಸೆಗೆ ನರಳಿ ನರಳಿ ಪ್ರಾಣ ಬಿಟ್ಟ ಹೋರಿ- ಆಘಾತಕಾರಿ ವಿಡಿಯೊ ಇಲ್ಲಿದೆ

ಹಲವು ಮಂದಿ ಸೇರಿ ಹೋರಿಯೊಂದನ್ನು ಟ್ರ್ಯಾಕ್ಟರ್ ಗೆ ಕಟ್ಟಿ ಎಳೆದುಕೊಂಡು ಹೋಗಲು ಯತ್ನಿಸಿದ್ದು ಹೋರಿಯ ಕುತ್ತಿಗೆಗೆ ಕಟ್ಟಿದ್ದ ಹಗ್ಗ ಬಿಗಿಯಾಗಿ ಅದು ಸ್ಥಳದಲ್ಲೇ ಸಾವನ್ನಪ್ಪಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದ್ದು, ಸಾಕಷ್ಟು ಮಂದಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಶಹಜಹಾನ್‌ಪುರದ ಭೈನ್‌ಸಾಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ

ಶಹಜಹಾನ್‌ಪುರ: ಪ್ರಾಣಿಗಳ ಮೇಲೆ ಮನುಷ್ಯನ ದೌರ್ಜನ್ಯದ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಇಂತಹ ಒಂದು ಘಟನೆ ಉತ್ತರ ಪ್ರದೇಶದ (uttarpradesh) ಶಹಜಹಾನ್‌ಪುರದಲ್ಲಿ( Shahjahanpur ) ನಡೆದಿದೆ. ಹೋರಿಯೊಂದರ (bull death) ಮೇಲೆ ಕೆಲವು ವ್ಯಕ್ತಿಗಳು ದೌರ್ಜನ್ಯ ನಡೆಸಿದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral video) ಆಗಿದೆ. ಕೆಲವು ಯುವಕರು ಸೇರಿ ಹೋರಿಯನ್ನು ಟ್ರ್ಯಾಕ್ಟರ್‌ಗೆ ಕಟ್ಟಿ ಹಾಕಿ ಎಳೆದು ಸಾಯಿಸುತ್ತಿರುವ ಈ ವಿಡಿಯೋ ನೋಡಿ ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹೋರಿಯ ಕುತ್ತಿಗೆಗೆ ಹಗ್ಗ ಬಿಗಿದು ಅದನ್ನು ಟ್ರ್ಯಾಕ್ಟರ್‌ ಗೆ ಕಟ್ಟಿ ಎಳೆದುಕೊಂಡು ಹೋಗುತ್ತಿರುವ ಭಯಾನಕ ದೃಶ್ಯ ಕೆಮರಾದಲ್ಲಿ ಸೆರೆಯಾಗಿದೆ.

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಹೋರಿಯೊಂದರ ಕುತ್ತಿಗೆಗೆ ಹಗ್ಗ ಬಿಗಿದು ಅದನ್ನು ಟ್ರ್ಯಾಕ್ಟರ್ ಗೆ ಕಟ್ಟಿ ಎಳೆದು ಸಾಯುಸುತ್ತಿರುವ ಭಯಾನಕ ಘಟನೆಯ ವಿಡಿಯೋದಲ್ಲಿ ಅಸಹಾಯಕ ಹೋರಿಯು ಹಗ್ಗದಿಂದ ತನ್ನನ್ನು ತಾನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕೊನೆಗೆ ನೆಲಕ್ಕೆ ಬಿದ್ದು ಸಾವನ್ನಪ್ಪಿದ ದೃಶ್ಯಗಳನ್ನು ಕಾಣಬಹುದು. ಈ ಘಟನೆ ಶಹಜಹಾನ್‌ಪುರದ ಭೈನ್‌ಸಾಟಾ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ. ದಾರಿ ತಪ್ಪಿ ಹೋಗುತ್ತಿದ್ದ ಹೋರಿಯನ್ನು ಹಿಡಿದು ಹಗ್ಗಗಳಿಂದ ಕಟ್ಟಿ ಟ್ರ್ಯಾಕ್ಟರ್‌ ಮೂಲಕ ಎಳೆಯಲು ಪ್ರಯತ್ನಿಸುತ್ತಿದ್ದಂತೆ ಹಗ್ಗ ಬಿಗಿಯಾಗಿ ಹೋರಿ ಉಸಿರುಗಟ್ಟಿ ಸಾವನ್ನಪ್ಪಿತು ಎನ್ನಲಾಗುತ್ತಿದೆ.

ಶನಿವಾರ ಮಧ್ಯಾಹ್ನ ಭೈನ್‌ಸಾಟಾ ಗ್ರಾಮದ ಕೆಲವರು ದಾರಿತಪ್ಪಿ ಹೋಗಿದ್ದ ಹೋರಿಯನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿದರು. ಇದಾದ ಬಳಿಕ ಹೋರಿಯನ್ನು ಹಗ್ಗಗಳಿಂದ ಟ್ರ್ಯಾಕ್ಟರ್‌ನ ಹಿಂದೆ ಕಟ್ಟಿ ತೆಗೆದುಕೊಂಡು ಹೋಗಲು ಪ್ರಯತ್ನಿಸಲಾಯಿತು. ಟ್ರ್ಯಾಕ್ಟರ್ ಹಿಂದೆ ಹಲವಾರು ಜನರು ಕೋಲು ಮತ್ತು ಹಗ್ಗಗಳನ್ನು ಹಿಡಿದುಕೊಂಡು ನಡೆಯುತ್ತಿದ್ದರು. ಸ್ವಲ್ಪ ದೂರ ನಡೆದ ಬಳಿಕ ಹಗ್ಗವು ಹೋರಿಯ ಕುತ್ತಿಗೆಗೆ ಬಿಗಿಯಾಗಿದ್ದರಿಂದ ಹೋರಿ ಉಸಿರುಗಟ್ಟಿ ಸಾವನ್ನಪ್ಪಿದೆ ಎನ್ನಲಾಗಿದೆ.



ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹೋರಿಯನ್ನು ಈ ರೀತಿ ಸಾಯಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅನೇಕರು ಒತ್ತಾಯಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಮತ್ತು ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆ ಕಾಯ್ದೆಯ ಪ್ರಕಾರ ಪ್ರಾಣಿಗಳ ವಿರುದ್ಧದ ಯಾವುದೇ ಕ್ರೌರ್ಯವು ಶಿಕ್ಷಾರ್ಹ ಅಪರಾಧವಾಗಿದೆ.

ಇದನ್ನೂ ಓದಿ: CET 2025: ಬೀದರ್, ಶಿವಮೊಗ್ಗ ಆಯ್ತು, ಇದೀಗ ಧಾರವಾಡದಲ್ಲಿಯೂ ಬೆಳಕಿಗೆ ಬಂತು ಜನಿವಾರಕ್ಕೆ ಕತ್ತರಿ ಪ್ರಕರಣ

ವಿಶ್ವ ಹಿಂದೂ ಪರಿಷತ್ ನ ಗೋ ರಕ್ಷಣಾ ದಳದ ಪ್ರಾಂತೀಯ ಸಚಿವ ವಿಪಿನ್ ಮಿಶ್ರಾ ಅವರು ಹೋರಿಯನ್ನು ಹಿಡಿದು ತೆಗೆದುಕೊಂಡು ಹೋಗಲು ಸಹಾಯ ಮಾಡಿದ ಟ್ರ್ಯಾಕ್ಟರ್ ಚಾಲಕ ಅಮಿತ್ ಕುಮಾರ್, ಪರಮೇಶ್ವರ ದಯಾಳ್ ಮತ್ತು ಹರಿ ರಾಮ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಘಟನೆಯನ್ನು ಪ್ರಾಣಿ ಪ್ರಿಯರು ತೀವ್ರವಾಗಿ ಖಂಡಿಸಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಟ್ರ್ಯಾಕ್ಟರ್ ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಪ್ರಕರಣದ ಕುರಿತು ದೂರು ದಾಖಲಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಹೋರಿಯ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿ ಹರ್ಪಾಲ್ ಸಿಂಗ್ ಬಲಿಯಾನ್ ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author