ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಾಲಕನ ಬಾಯಲ್ಲೇ ಸ್ಫೋಟಗೊಂಡ ಮೊಬೈಲ್‌ ಬ್ಯಾಟರಿ; ಭಯಾನಕ ವಿಡಿಯೋ ವೈರಲ್‌

Viral Video: ಮೊಬೈಲ್ ಫೋನ್ ಅಂಗಡಿಯೊಂದರಲೇ ಲಿಥಿಯಂ ಆಧಾರಿತ ಫೋನ್ ಬ್ಯಾಟರಿ ಸ್ಫೋಟಗೊಂಡ ಘಟನೆ ನಡೆದಿದೆ. ಮೊಬೈಲ್ ಫೋನ್ ಬ್ಯಾಟರಿಯನ್ನು ಬಾಯಲ್ಲಿಟ್ಟು ಕಚ್ಚಿದ ಪರಿ ಣಾಮ ಅದು ಸ್ಫೋಟಗೊಂಡಿದೆ. ಅಂಗಡಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಸದ್ಯ ಈ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ

ಲಿಥಿಯಂ ಫೋನ್ ಬ್ಯಾಟರಿ ಸ್ಫೋಟ

ನವದೆಹಲಿ,ಫೆ.6: ಚಾರ್ಜ್‌ಗಿಟ್ಟ ಮೊಬೈಲ್ ಸ್ಫೋಟಗೊಂಡು ಅವಘಡ ಉಂಟಾಗಿರುವ ಅನೇಕ ಘಟನೆಗಳು ಇತ್ತೀಚೆಗೆ ನಡೆದಿದೆ. ಇದೀಗ ಮೊಬೈಲ್ ಫೋನ್ ಅಂಗಡಿಯೊಂದರಲೇ ಲಿಥಿಯಂ ಆಧಾರಿತ ಫೋನ್ ಬ್ಯಾಟರಿ ಸ್ಫೋಟಗೊಂಡ ಘಟನೆ ನಡೆದಿದೆ. ಮೊಬೈಲ್ ಫೋನ್ ಬ್ಯಾಟರಿಯನ್ನು ಬಾಯಲ್ಲಿಟ್ಟು ಕಚ್ಚಿದ ಪರಿಣಾಮ ಅದು ಸ್ಫೋಟಗೊಂಡಿದೆ. ಅಂಗಡಿಯ ಸಿಸಿಟಿವಿ ದೃಶ್ಯಾವಳಿ ಯಲ್ಲಿ ಈ ದೃಶ್ಯ (Viral Video) ಸೆರೆಯಾಗಿದೆ. ಸದ್ಯ ಈ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

ಈ ಆತಂಕಕಾರಿ ಘಟನೆಯು ಬ್ಯಾಟರಿ ನಿರ್ವಹಣೆ ಮತ್ತು ಸುರಕ್ಷತಾ ಜಾಗೃತಿಯ ಬಗ್ಗೆ ಹೊಸ ಕಳವಳಗಳನ್ನು ಹುಟ್ಟು ಹಾಕಿದೆ. ವಿಡಿಯೊದಲ್ಲಿ ಬಾಲಕನೊಬ್ಬ ಮೊಬೈಲ್ ಶಾಪ್ ಮುಂದೆ ಮೊಬೈಲ್ ಹಿಡಿದು ನಿಂತಿರುವ ದೃಶ್ಯ ಕಂಡು ಬಂದಿದೆ. ಆಗ ಅಲ್ಲೇ ಇದ್ದ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹಿಡಿದು ಅದು ಅಸಲಿ ಎಂದು ಪರೀಕ್ಷಿಸಲು ಅಥವಾ ಕುತೂಹಲಕ್ಕೆ ಅದನ್ನು ಜೋರಾಗಿ ಕಚ್ಚಿದ್ದಾನೆ.

ವಿಡಿಯೋ ನೋಡಿ:



ಅದೇ ಸಂದರ್ಭದಲ್ಲಿ ಜ್ವಾಲೆಗಳು ಮತ್ತು ಕಿಡಿಗಳು ತಕ್ಷಣವೇ ಸ್ಫೋಟಗೊಂಡಿದೆ. ಬಾಲಕನ ಮುಖದ ಬಳಿಯೇ ಸ್ಫೋಟ ಸಂಭವಿಸಿದ್ದರಿಂದ ಬಾಯಿ ಮತ್ತು ಮುಖಕ್ಕೆ ಗಂಭೀರವಾದ ಸುಟ್ಟ ಗಾಯಗಳಾಗಿವೆ. ಅಂಗಡಿ ಸಿಬ್ಬಂದಿ ಮತ್ತು ಹತ್ತಿರದ ಗ್ರಾಹಕರು ಸಹಾಯ ಮಾಡಲು ಧಾವಿಸಿದ್ದು ಹುಡುಗನನ್ನು ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಯಲಾಯಿತು.

Viral Video: ಅಭ್ಯಾಸದ ವೇಳೆ ಬಾಸ್ಕೆಟ್‌ಬಾಲ್ ಪೋಲ್ ಕುಸಿದು ರಾಷ್ಟ್ರೀಯ ಆಟಗಾರ ಸಾವು

ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ ಮತ್ತು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಅವುಗಳ ಹೆಚ್ಚಿನ ಶಕ್ತಿಯ ಸಾಂದ್ರತೆಯಿಂದಾಗಿ ಬಳಸಲಾಗುತ್ತದೆ. ಅದರ ಪುಡಿ ಮಾಡುವಿಕೆ ಅಥವಾ ಕಚ್ಚಿದರೆ ಅವು ಅತ್ಯಂತ ಅಪಾಯಕಾರಿ. ಬ್ಯಾಟರಿ ಕವಚಕ್ಕೆ ಹಾನಿಯುಂಟಾ ದರೆ ಥರ್ಮಲ್ ರನ್‌ಅವೇ ಎಂದು ಕರೆಯಲ್ಪಡುವ ರಾಸಾಯನಿಕ ಕ್ರಿಯೆಗೆ ಕಾರಣವಾಗಬಹುದು‌. ಇದು ಸ್ಫೋಟಗಳಿಗೆ ಕಾರಣ ವಾಗಬಹುದು. ಹಾಗಾಗಿ ಫೋನ್ ಬ್ಯಾಟರಿಗಳನ್ನು ಎಂದಿಗೂ ಶಾಖ, ಚೂಪಾದ ವಸ್ತುಗಳು, ಒತ್ತಡ ಅಥವಾ ತೇವಾಂಶಕ್ಕೆ ಬಿಡಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.