ನವದೆಹಲಿ, ಮಾ. 3: ಅಮೆರಿಕ ಇಸ್ರೇಲ್ ಮತ್ತು ಇರಾನ್ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಈ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚು ಕಾಲ ಆಡಳಿತದಲ್ಲಿದ್ದ ನಾಯಕರಲ್ಲಿ ಖಮೇನಿ ಕೂಡ ಒಬ್ಬರು. ಅವರು 1989ರಲ್ಲಿ 50ನೇ ವಯಸ್ಸಿನಲ್ಲಿ ಸರ್ವೋಚ್ಚ ನಾಯಕರಾಗಿ ಆಯ್ಕೆಯಾಗಿದ್ದರು. ಅಮೆರಿಕದ ಬೆಂಬಲದೊಂದಿಗೆ ನಡೆಸಿದ ಇಸ್ರೇಲಿ ದಾಳಿಯಲ್ಲಿ ಇದೀಗ ಮೃತಪಟ್ಟರು. ಅವರ ಹತ್ಯೆಗೆ ಪ್ರತಿಭಟನೆ ವ್ಯಕ್ತವಾಗುತ್ತಿರುವ ಮಧ್ಯೆ ದೆಹಲಿಯ ಮೊಬೈಲ್ ಅಂಗಡಿಯೊಂದು ಖಮೇನಿ ಅವರ ಚಿತ್ರವಿರುವ ಮೊಬೈಲ್ ಕವರ್ ಅನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಇರಾನ್‌ನಲ್ಲಿ ಸುಪ್ರೀಂ ಲೀಡರ್ ಖಮೇನಿ ತಮ್ಮದೇ ಆದ ಸೇನೆಯನ್ನು ಕಟ್ಟಿಕೊಂಡಿದ್ದರು. ಆದರೆ ಆ ಭದ್ರ ಕೋಟೆಯೊಳಗೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿ ಹತ್ಯೆಗೈದಿದೆ. ಈ ಹತ್ಯೆಯು ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಪ್ರದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳನ್ನು ಹುಟ್ಟುಹಾಕಿದೆ. ಈ ನಡುವೆ ದೆಹಲಿಯ ಮುಸ್ತಫಾಬಾದ್ ಪ್ರದೇಶದಲ್ಲಿರುವ ಮೊಬೈಲ್ ಅಕ್ಸೆಸರಿ ಅಂಗಡಿಯೊಂದು ಖಮೇನಿ ಫೋಟೊ ಇರುವ ಮೊಬೈಲ್ ಕವರ್ ಮಾರಾಟ ಮಾಡುತ್ತಿದೆ.
ವಿಡಿಯೊ ನೋಡಿ:
ವೈರಲ್ ವಿಡಿಯೊದಲ್ಲಿ ಅಂಗಡಿಯ ಮಾಲಕನು ಖಮೇನಿ ಫೋಟೊ ಒಳಗೊಂಡ ಮೊಬೈಲ್ ಕವರ್ ಗ್ರಾಹಕರಿಗೆ ತೋರಿಸುತ್ತಿರುವುದು ಕಂಡು ಬಂದಿದೆ. ಅಲ್ಲದೆ ಮಾಲಕ ಅದೇ ಚಿತ್ರವಿರುವ ಕವರ್ ಅನ್ನು ಮೊಬೈಲ್‌ಗೆ ಅಳವಡಿಸಿರುವುದನ್ನು ಕಾಣಬಹುದು. ಸದ್ಯ ಈ ಕ್ಲಿಪ್ ಆರು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಗಳಿಸಿದ್ದು ತಕ್ಷಣವೇ ವೈರಲ್ ಆಗಿದೆ.
ಮನುಷ್ಯರಿಗೆ ಮಾತ್ರ ಅಲ್ಲ, ಈಗ ಹುಲಿಗಳಿಗೂ 'ಇಂಟರ್ಮಿಟೆಂಟ್ ಫಾಸ್ಟಿಂಗ್'!
ಈ ವಿಡಿಯೊ ವೈರಲ್ ಆಗಿ ಪರ-ವಿರೋಧ ಚರ್ಚೆಗಳು ಶುರುವಾಗಿದೆ. ವಿವಾದ ಭುಗಿಲೇಳುತ್ತಿದ್ದಂತೆ ಅಂಗಡಿ ಮಾಲಕ ಸ್ಪಷ್ಟನೆಯೊಂದನ್ನು ನೀಡಿದ್ದಾನೆ. ʼʼಈ ವಿಡಿಯೊದ ಉದ್ದೇಶ ಉತ್ಪನ್ನವನ್ನು ಪ್ರದರ್ಶಿಸುವುದು ಮಾತ್ರ. ಯಾರ ಭಾವನೆಗಳನ್ನು ಅಥವಾ ಆದ್ಯತೆಗಳನ್ನು ನೋಯಿಸುವ ಉದ್ದೇಶವಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಆಯ್ಕೆ ಇದೆ. ನಾವು ನಮ್ಮ ಕೆಲಸವನ್ನು ಮಾಡಿಕೊಡುತ್ತಿದ್ದೇವೆʼʼ ಎಂದು ಹೇಳಿದ್ದಾನೆ.
ಅಮೆರಿಕ ಮತ್ತು ಇಸ್ರೇಲ್ ರಾಜಧಾನಿ ಟೆಹರಾನ್ ಸೇರಿದಂತೆ ಇರಾನ್‌ನ ಅನೇಕ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು "ಪ್ರಮುಖ ಯುದ್ಧ ಕಾರ್ಯಾಚರಣೆ" ಎಂದು ಬಣ್ಣಿಸಿದ್ದಾರೆ.