ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನೋಡ ನೋಡುತ್ತಿದ್ದಂತೆ ಬಾಂಬ್‌ನಂತೆ ಸಿಡಿಯಿತು ಚಾರ್ಜ್‌ಗೆ ಇಟ್ಟ ಮೊಬೈಲ್: ಕೂದಲೆಳೆ ಅಂತರದಲ್ಲಿ ಬಾಲಕಿ ಪಾರು

Viral Video: ಮೊಬೈಲ್ ಸ್ಫೋಟಗೊಳ್ಳುವ ಪ್ರಕರಣ ಇತ್ತೀಚೆಗೆ ಜಾಸ್ತಿಯಾಗಿದ್ದು, ಇದೀಗ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಬಾಲಕಿಯೊಬ್ಬಳು ಮನೆಯಲ್ಲಿ ಮೊಬೈಲ್ ಬಳಸುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಈ ಸ್ಪೋಟದ ತೀವ್ರತೆಗೆ ಬಾಲಕಿ ಸೋಫಾದ ಕೆಳಗೆ ಬಿದ್ದಿದ್ದಾಳೆ. ಇದರ ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚಾರ್ಜ್‌ಗಿಟ್ಟ ಮೊಬೈಲ್ ಸ್ಪೋಟ.

ನವದೆಹಲಿ, ಮಾ. 12: ಇತ್ತೀಚೆಗೆ ಮಕ್ಕಳಲ್ಲಿ ಮೊಬೈಲ್ ಬಳಕೆ ಬಗ್ಗೆ ಅರಿವು ಮೂಡಿಸಿದರೂ ಇದಕ್ಕೆ ಕಡಿವಾಣ ಬಿದ್ದಿಲ್ಲ. ಅದರಲ್ಲೂ ಮೊಬೈಲ್ ಸ್ಫೋಟಗೊಳ್ಳುವ ಪ್ರಕರಣ ಇತ್ತೀಚೆಗೆ ಜಾಸ್ತಿಯಾಗಿದ್ದು, ಇದೀಗ ಅಂತಹದ್ದೇ ಮತ್ತೊಂದು ಆತಂಕದ ಘಟನೆ ನಡೆದಿದೆ. ಬಾಲಕಿಯೊಬ್ಬಳು ಮನೆಯಲ್ಲಿ ಮೊಬೈಲ್ ವೀಕ್ಷಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಪೋಟಗೊಂಡಿದೆ. ಈ ಸ್ಪೋಟದ ತೀವ್ರತೆಗೆ ಬಾಲಕಿ ಸೋಫಾದ ಕೆಳಗೆ ಬಿದ್ದಿದ್ದಾಳೆ. ಇದರ ಭಯಾನಕ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು (Viral Video) ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 9ರಂದು ಈ ಘಟನೆಯು ನಡೆದಿದ್ದು ಆಕೆಯ ಮನೆಯೊಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಬಾಲಕಿ ಸೋಫಾದ ಮೇಲೆ ಕುಳಿತುಕೊಂಡು ತನ್ನ ಫೋನ್ ಅನ್ನು ಸ್ಕ್ರೋಲ್ ಮಾಡುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಭಯಾನಕ ವಿಡಿಯೊ ಇಲ್ಲಿದೆ:



ಬಾಲಕಿಯು ಮನೆಯ ಸೋಫಾದ ಮೇಲೆ ಕುಳಿತುಕೊಂಡು ಚಾರ್ಜಿಂಗ್‌ಗೆ ಹಾಕಿದ್ದ ಫೋನ್ ಬಳಕೆ ಮಾಡಿದ್ದಳು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಫೋನ್ ಸ್ಫೋಟವಾಗಿದೆ. ಇದರಿಂದಾಗಿ ಅವಳು ಸಮತೋಲನ ಕಳೆದುಕೊಂಡು ಸೋಫಾದಿಂದ ಬಿದ್ದಿದ್ದಾಳೆ. ಅದೃಷ್ಟವಶಾತ್, ಭಯಾನಕ ಘಟನೆಯ ಹೊರತಾಗಿಯೂ, ಸ್ಫೋಟದಿಂದ ಬಾಲಕಿಗೆ ಯಾವುದೇ ಗಾಯವಾಗಿಲ್ಲ.

ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ

ಸ್ಫೋಟದ ಬಳಿಕ ಫೋನ್‌ನಿಂದ ಬೆಂಕಿ ಮತ್ತು ಹೊಗೆ ಬರಲಾರಂಭಿಸಿದೆ. ಗಾಬರಿಗೊಂಡ ಬಾಲಕಿಯೂ ಜೋರಾಗಿ ಅಳುತ್ತಾ ಅಲ್ಲಿಂದ ಓಡಿ ಹೋಗಿದ್ದಾಳೆ. ಅಷ್ಟರಲ್ಲಿ, ಹಾನಿಗೊಳಗಾದ ಮೊಬೈಲ್ ಫೋನ್ ಉರಿಯುತ್ತಲೇ ಇತ್ತು. ಈ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದಂತೆ ಅನೇಕ ವೀಕ್ಷಕರು ಮೊಬೈಲ್ ಫೋನ್‌ಗಳ ಸುರಕ್ಷತೆಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಫೋನ್‌ಗಳು ಚಾರ್ಜ್ ಮಾಡುವಾಗ ಬಳಸಿದರೆ ಅಪಾಯಕಾರಿಯಾಗಬಹುದು ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಪೋಷಕರು ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ. ಚೀನನಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಮಧ್ಯೆ ಕೆಲವು ಇದು ಎಐ ಿರ್ಮಿತ ವಿಡಿಯೊ ಇರಬಹುದು ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.