ರಾಂಚಿ, ಸೆ. 26: ಇಂದು ಸೋಷಿಯಲ್ ಮೀಡಿಯಾದಲ್ಲಿ ವಿಚಿತ್ರ ಘಟನೆಗಳು ವೈರಲ್ (Viral News) ಆಗುತ್ತಿರುತ್ತವೆ. ಅದೇ ರೀತಿ ಕೋತಿಯೊಂದು ಮದ್ಯದ ಅಂಗಡಿಗೆ ತೆರಳಿ ಸಾರಾಯಿ ಕುಡಿದ ವಿಡಿಯೊವೊಂದು ವೈರಲ್ ಆಗುತ್ತಿದೆ. ಜಾರ್ಖಂಡ್ ರಾಜಧಾನಿ ರಾಂಚಿಯ ಹತ್ತಿರ ಇರುವ ಓರ್ಮಂಜಿಯ ಬ್ಲಾಕ್ ಚೌಕ್‌ನಲ್ಲಿ ಈ ಘಟನೆ ನಡೆದಿದೆ. ಕೋತಿಯು ಜನ ಸೇರಿದ್ದರೂ ಯಾವುದೇ ಅಳುಕು ಪ್ರದರ್ಶಿಸದೆ ಸೀದಾ ಮದ್ಯದ ಅಂಗಡಿಗೆ ಒಳಹೊಕ್ಕಿದೆ.
ಮದ್ಯದ ಅಂಗಡಿಗೆ ಕೋತಿ ಗ್ರಾಹಕನಂತೆ ಬಂದಿದೆ. ಆರಂಭದಲ್ಲಿ ಅಂಗಡಿಯ ಮಾಲಕ ಕೋತಿ ಆಚೆ- ಇಚೆ ಓಡಾಡುವುದನ್ನು ಕಂಡು ನೋಡುತ್ತಾ ನಿಂತಿದ್ದ. ಕೂಡಲೇ ಅದು ಮದ್ಯದ ಬಾಟಲಿ ನೋಡಿ ಕೈಗೆತ್ತಿಕೊಂಡು ಕುಡಿಯಲು ಪ್ರಾರಂಭಿಸಿತು.
ವಿಡಿಯೊ ನೋಡಿ:
ಬಾಟಲಿಯಿಂದ ಮದ್ಯ ಸೇವಿಸಿದ್ದಲ್ಲದೆ ನಂತರ ಅಂಗಡಿಯ ಒಳಗೆಯೇ ನಿದ್ದೆ ಮಾಡುವ ಮೂಲಕ ನೆರೆದವರನ್ನು ಅಚ್ಚರಿಗೆ ದೂಡಿತು. ಮದ್ಯದ ಅಮಲು ತಟ್ಟುತ್ತಿದ್ದಂತೆ ಕೋತಿಗೆ ತೀವ್ರ ತೂಕಡಿಕೆ ಏರತೊಡನತು. ಕುಡಿದ ಮತ್ತಿನಲ್ಲಿ ಅದು ಅಂಗಡಿಯ ಮೇಜಿನ ಮೇಲೆಯೇಆರಾಮವಾಗಿ ನಿದ್ರಿಸಿತು.
ಸ್ಕೂಟರ್ ಸವಾರರನ್ನು ಉಳಿಸಲು ಹೋಗಿ ಬಸ್ ಪಲ್ಟಿ; 20 ಮಂದಿಗೆ ಗಾಯ
ಈ ಘಟನೆಯು ಸ್ಥಳೀಯರಿಗೆ ತಮಾಷೆಯಾಗಿ ಕಂಡಿತು. ಕೋತಿ ಮದ್ಯ ಸೇವಿಸಿ ನಿದ್ರೆಗೆ ಜಾರಿದ ವಿಷಯ ತಿಳಿದ ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಅಂಗಡಿಯ ಮಾಲೀಕರು ಪ್ರಾಣಿ ರಕ್ಷಣಾ ತಂಡಕ್ಕೆ ತಿಳಿಸಿದರು. ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ, ಕೋತಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರ ವಹಿಸಿ, ಅಂಗಡಿಯಿಂದ ಹೊರಗೆ ಕರೆದೊಯ್ದರು.