Viral News: 18 ವರ್ಷದ ಹುಟ್ಟುಹಬ್ಬಕ್ಕೆ ಒಂದೇ ದಿನ ಇರುವಾಗಲೇ ಮಗನನ್ನು ಕೊಂದ ಸೈಕೋ ತಾಯಿ!
ತಾಯಿಯೊಬ್ಬಳು ತನ್ನ 17 ವರ್ಷದ ಮಗನ ಕತ್ತನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಾಳೆ. ಮಾರ್ಚ್ 1ಕ್ಕೆ ಹುಟ್ಟುಹಬ್ಬ ಆಚರಿಸಿಕೊಂಡು 18 ವರ್ಷಕ್ಕೆ ಕಾಲಿಡುವ ಮುನ್ನವೇ ತಾಯಿ ಆತನ ಜೀವ ತೆಗೆದಿದ್ದಾಳೆ. ಇದೀಗ ಆಕೆಯನ್ನು ಪೊಲೀಸರು ಬಂಧಿಸಿ ಕೋರ್ಟ್‍ಗೆ ಒಪ್ಪಿಸಿದ್ದಾರೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.


ಮಿಚಿಗನ್: ತಾಯಿಯಾದವಳು ತನ್ನ ಕರುಳಿನ ಕುಡಿಗಳನ್ನು ಕಣ್ಣಿನ ರೆಪ್ಪೆಯಂತೆ ಜೋಪಾನ ಮಾಡುತ್ತಾಳೆ ಎಂದು ಹೇಳುತ್ತಾರೆ. ಆದರೆ ಮಿಚಿಗನ್‍ನಲ್ಲಿ ತಾಯಿಯೊಬ್ಬಳು ಹೆತ್ತ ಮಗನನ್ನೇ ಕ್ರೂರವಾಗಿ ಕೊಲೆ ಮಾಡಿದ್ದಾಳೆ. ಹದಿಹರೆಯದ ಮಗನನ್ನು ಅಪಾರ್ಟ್‍ಮೆಂಟ್‍ನಲ್ಲಿ ಕತ್ತು ಕೊಯ್ದು ಕೊಲೆ ಮಾಡಿದ್ದಾಳೆ. ಹಾಗಾಗಿ ಆಕೆಯ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ.ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ಕೊಲೆಯಾದ ಮಗ 17 ವರ್ಷದ ಆಸ್ಟಿನ್ ಪಿಕಾರ್ಟ್ ಆಗಿದ್ದು, ಆತನನ್ನು ಕೊಂದ ತಾಯಿ 39 ವರ್ಷದ ಕೇಟಿ ಲೀ ಎಂದು ಗುರುತಿಸಲಾಗಿದೆ. ಈಕೆ ತನ್ನ ಮಗನಿಗೆ 18 ವರ್ಷ ತುಂಬಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಆತನ ಜೀವ ತೆಗೆದಿದ್ದಾಳೆ. ಮಾರ್ಚ್ 1 ಶನಿವಾರಕ್ಕೆ ಆಸ್ಟಿನ್ ಪಿಕಾರ್ಟ್‌ಗೆ 18 ವರ್ಷ ತುಂಬಲಿದೆಯಂತೆ.
ಮಗನನ್ನು ಕೊಲೆ ಮಾಡಿದ ಸ್ವಲ್ಪ ಸಮಯದ ನಂತರ ಅವಳು ಪೊಲೀಸರಿಗೆ ಕರೆ ಮಾಡಿ ತನ್ನ ಮಗನ ಗಂಟಲನ್ನು ಚಾಕುವಿನಿಂದ ಕತ್ತರಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. 18 ವರ್ಷ ತುಂಬುವ ಮೊದಲು ತನ್ನನ್ನು ಕೊಲ್ಲುವಂತೆ ಮಗ ಕೇಳಿಕೊಂಡಿದ್ದಾನೆ ಹಾಗಾಗಿ ಈ ಕೊಲೆ ಮಾಡಿದ್ದೇನೆ ಎಂದು ಆಕೆ ಹೇಳಿದ್ದಾಳೆ.
ಪೊಲೀಸ್ ಅಧಿಕಾರಿಗಳು ಆಕೆಯ ಮನೆಗೆ ಬಂದಾಗ, ಆಕೆ ರಕ್ತಸಿಕ್ತವಾದ ಚಾಕುವನ್ನು ಹಿಡಿದುಕೊಂಡು ಬಾಗಿಲು ತೆರೆದಿದ್ದಾಳಂತೆ. ಕೂಡಲೇ ಪೊಲೀಸ್ ಅಧಿಕಾರಿಗಳು ಅವಳನ್ನು ವಶಕ್ಕೆ ತೆಗೆದುಕೊಂಡಿದ್ದಾರಂತೆ. ಬಂಧನಕ್ಕೊಳಗಾದಾಗ ನಂತರ ಅವಳು ತನ್ನನ್ನು ಕೊಲ್ಲುವಂತೆ ಪೊಲೀಸರನ್ನು ಬೇಡಿಕೊಂಡಿದ್ದಾಳೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆಕೆಯನ್ನು ವಶಕ್ಕೆ ತೆಗೆದುಕೊಂಡ ನಂತರ, ಪೊಲೀಸರು ಅಪಾರ್ಟ್‍ಮೆಂಟ್‍ಗೆ ಹೋದಾಗ 17 ವರ್ಷದ ಆಸ್ಟಿನ್ ದೇಹವು ರಕ್ತದ ಮಡುವಿನಲ್ಲಿ ಹಾಸಿಗೆಯ ಮೇಲೆ ಕಂಡುಬಂದಿದೆ. ಶವಪರೀಕ್ಷೆಯ ನಂತರ ಅವನ ಕುತ್ತಿಗೆ ಕತ್ತರಿಸಿದ ಕಾರಣ ಅವನು ಸಾವನ್ನಪ್ಪಿದ್ದಾನಂತೆ.
ಈ ಸುದ್ದಿಯನ್ನೂ ಓದಿ:UP Horror : ಹೆತ್ತ ತಾಯಿ, ನಾಲ್ವರು ತಂಗಿಯರನ್ನು ಬರ್ಬರವಾಗಿ ಕೊಲೆಗೈದ ಪಾಪಿ
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಸ್ವಂತ ಮಗನೇ ತನ್ನ ತಾಯಿ ಹಾಗೂ ನಾಲ್ವರು ಸಹೋದರಿಯರನ್ನು ಕೊಲೆ ಮಾಡಿದ ಘಟನೆಯೊಂದು ನಡೆದಿತ್ತು. ಲಖನೌನ ಹೊಟೆಲ್ ಒಂದರಲ್ಲಿ ಇವರ ಶವಗಳು ಪತ್ತೆಯಾಗಿತ್ತು. ಕೊಲೆ ಮಾಡಿದ ಆರೋಪಿಯನ್ನು ಅರ್ಷದ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಆರೋಪಿ ಆಗ್ರಾ ಮೂಲದವನಾಗಿದ್ದು, ಕೌಟುಂಬಿಕ ಗಲಾಟೆ ಹಿನ್ನಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಮಗ ಮೊದಲಿಗೆ ಮಲಗಿದ್ದ ತಾಯಿಯನ್ನು ಬ್ಲೇಡ್ ಸಹಾಯದಿಂದ ಹತ್ಯೆ ಮಾಡಿದ್ದು, ಬಳಿಕ ನಿದ್ರೆಗೆ ಜಾರಿದ್ದ ಸಹೋದರಿಯರನ್ನು ಕೊಲೆಗೈದಿದ್ದಾನೆ. ಶರಂಜಿತ್ ಹೋಟೆಲ್ ಕೊಠಡಿಯಲ್ಲಿ ಶವಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಕಾ ಪ್ರದೇಶದ ಹೋಟೆಲ್ ಶರಣಜಿತ್‌ನಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.ಆದರೆ ಕೊಲೆ ಹಿಂದಿನ ಉದ್ದೇಶದ ಬಗ್ಗೆ ಸರಿಯಾಗಿ ತಿಳಿದುಬಂದಿಲ್ಲವಂತೆ.