Viral Video: ಆಸ್ಪತ್ರೆಯಿಂದ ನೇರ ಪರಲೋಕಕ್ಕೆ! ಐಸಿಯುನಲ್ಲೇ ನಡೀತು ಶೂಟೌಟ್-ರೌಡಿ ಶೀಟರ್‌ನ ಬರ್ಬರ ಹತ್ಯೆ!
ಗುರುವಾರ (ಜುಲೈ 17) ಮುಂಜಾನೆ ಜನನಿಬಿಡ ರಾಜಾ ಬಜಾರ್ ಪ್ರದೇಶದಲ್ಲಿನ ಪಾಟ್ನಾದ ಪರಾಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೆರೋಲ್ ಮೇಲೆ ಹೊರಬಂದ ಕೈದಿ ಚಂದನ್ ಮಿಶ್ರಾ ಮೇಲೆ ನಾಲ್ವರು ಅಪರಿಚಿತ ವ್ಯಕ್ತಿಗಳು ಮನಬಂದಂತೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಪಟನಾ: ಬಿಹಾರದಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ದಾಳಿ ಮಾಡಿ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಇದೀಗ ಗುರುವಾರ (ಜುಲೈ 17) ಮುಂಜಾನೆ ಜನನಿಬಿಡ ರಾಜಾ ಬಜಾರ್ ಪ್ರದೇಶದಲ್ಲಿನ ಪಟನಾದ ಖಾಸಗಿ ಆಸ್ಪತ್ರೆಯೊಳಗೆ ಪೆರೋಲ್ ಮೇಲೆ ಹೊರಬಂದ ಕೈದಿಯೊಬ್ಬನ ಮೇಲೆ ನಾಲ್ವರು ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಪೊಲೀಸರ ಪ್ರಕಾರ, ಶಾಸ್ತ್ರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು ಬಕ್ಸಾರ್ ಜಿಲ್ಲೆಯ ನಿವಾಸಿ ಚಂದನ್ ಮಿಶ್ರಾ ಎಂದು ಗುರುತಿಸಲಾಗಿದೆ. ಈತ ಒಬ್ಬ ಅಪರಾಧಿಯಾಗಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇವೂರ್ ಜೈಲಿನಲ್ಲಿ ಬಂಧಿಸಲ್ಪಟ್ಟಿದ್ದ. ಮಿಶ್ರಾ ಪರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ದುಷ್ಕರ್ಮಿಗಳು ಮಿಶ್ರಾ ಆಸ್ಪತ್ರೆಗೆ ದಾಖಲಾಗಿದ್ದ ಕೊಠಡಿ ಸಂಖ್ಯೆ 209 ರ ಕಟ್ಟಡಕ್ಕೆ ನುಗ್ಗಿ ಗುಂಡು ಹಾರಿಸಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
Paras Hospital CCTV Footage Where Criminals killed a patient admitted at Paras Hospital in Patna by entering the hospital premises.
— Siddhant Anand (@JournoSiddhant) July 17, 2025
Four criminals came in a vehicle, parked it outside the hospital, entered the ICU, carried out the killing, and fled.#PatnaLawOrder pic.twitter.com/VUVCLJVM8L
ಈ ಘಟನೆಯಿಂದ ಆಸ್ಪತ್ರೆಯಲ್ಲಿದ್ದವರು ಶಾಕ್ ಆಗಿದ್ದಾರೆ. ಗುಂಡಿನ ದಾಳಿಯ ನಂತರ, ಪಾಟ್ನಾ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಚಂದನ್ ಮಿಶ್ರಾ ಒಬ್ಬ ಭಯಾನಕ ಅಪರಾಧಿ ಮತ್ತು ಅವನ ವಿರುದ್ಧ ಒಂದು ಡಜನ್‌ಗೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಪ್ರಾಥಮಿಕ ತನಿಖೆಯಲ್ಲಿ ವಿರುದ್ಧ ಗುಂಪಿನಿಂದ ಗ್ಯಾಂಗ್‍ನವರು ಅವನನ್ನು ಕೊಲೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಗುಂಡು ತಗುಲಿದ ಕಾರಣ ಆತ ಸ್ಥಳದಲ್ಲೇ ನಿಧನನಾಗಿದ್ದಾನೆ.
ಸಿಸಿಟಿವಿ ದೃಶ್ಯಗಳಲ್ಲಿ ಶೂಟರ್‌ನ ಮುಖಗಳು ಸೆರೆಯಾಗಿವೆ ಮತ್ತು ಅವರನ್ನು ಗುರುತಿಸಲು ಪೊಲೀಸರು ಈಗಾಗಲೇ ಬಕ್ಸಾರ್ ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಮತ್ತು ಶೀಘ್ರದಲ್ಲೇ ಪೊಲೀಸರು ಅಪರಾಧಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಸೀತಾಮರ್ಹಿಯಲ್ಲಿ ಸ್ಥಳೀಯ ಉದ್ಯಮಿ, ರೈತ ಮತ್ತು ವಕೀಲರನ್ನು ಪಾಟ್ನಾದಲ್ಲಿ ಅಪರಾಧಿಯೊಬ್ಬ ಗುಂಡಿಕ್ಕಿ ಕೊಂದಿದ್ದು, ಬಿಹಾರದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.ಬಿಹಾರದಲ್ಲಿ ಒಂದರ ಮೇಲೊಂದು ಅಪರಾಧಗಳು ನಡೆಯುತ್ತಿದ್ದ ಕಾರಣ ಪ್ರತಿಪಕ್ಷಗಳಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಕಾಂಗ್ರೆಸ್ ಬಿಹಾರವನ್ನು ಭಾರತದ "ಅಪರಾಧಿಗಳ ರಾಜಧಾನಿ" ಎಂದು ಕರೆದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ನಿರಂತರವಾಗಿ ದಾಳಿ ನಡೆಸುತ್ತಿವೆ.
ಈ ಸುದ್ದಿಯನ್ನೂ ಓದಿ:Viral Video: ಹಾವು ಕಚ್ಚಿ ಮಹಿಳೆ ಸಾವು; ದಿಂಬಿನಡಿಯಲ್ಲಿತ್ತು ವಿಷ ಸರ್ಪ! ವೈರಲ್ ವಿಡಿಯೊ ಇಲ್ಲಿದೆ
ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಸೋಶಿಯಲ್ ಮೀಡಿಯಾದಲ್ಲಿ " ಅಪರಾಧಿಗಳು ಐಸಿಯುಗೆ ನುಗ್ಗಿ ಆಸ್ಪತ್ರೆಗೆ ದಾಖಲಾದ ರೋಗಿಯ ಮೇಲೆ ಗುಂಡು ಹಾರಿಸಿದ್ದಾರೆಂದರೆ ಬಿಹಾರದಲ್ಲಿ ಯಾರಾದರೂ ಸುರಕ್ಷಿತರಾಗಿದ್ದಾರೆಯೇ?" ಎಂದು ಬರೆದಿದ್ದಾರೆ.