UP Horror : ಹೆತ್ತ ತಾಯಿ, ನಾಲ್ವರು ತಂಗಿಯರನ್ನು ಬರ್ಬರವಾಗಿ ಕೊಲೆಗೈದ ಪಾಪಿ
UP Horror : ಉತ್ತರ ಪ್ರದೇಶದಲ್ಲೊಂದು ಅಮಾನುಷ ಘಟನೆ ನಡೆದಿದ್ದು, ಒಂದೇ ಕುಟುಂಬದ ಐವರು ಕೊಲೆಯಾಗಿದ್ದಾರೆ. ಸ್ವಂತ ಮಗನೇ ತನ್ನ ತಾಯಿ ಹಾಗೂ ನಾಲ್ವರು ಸಹೋದರಿಯರನ್ನು ಕೊಲೆ ಮಾಡಿದ್ದಾನೆ.


ಲಖನೌ: ಉತ್ತರ ಪ್ರದೇಶದಲ್ಲೊಂದು (Uttar Pradesh) ಅಮಾನುಷ ಘಟನೆ ನಡೆದಿದ್ದು, (UP Horror) ಒಂದೇ ಕುಟುಂಬದ ಐವರು ಕೊಲೆಯಾಗಿದ್ದಾರೆ. ಸ್ವಂತ ಮಗನೇ ತನ್ನ ತಾಯಿ ಹಾಗೂ ನಾಲ್ವರು ಸಹೋದರಿಯರನ್ನು ಕೊಲೆ ಮಾಡಿದ್ದಾನೆ. ಲಖನೌನ ಹೊಟೆಲ್ ಒಂದರಲ್ಲಿ ಇವರ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿದ ಆರೋಪಿಯನ್ನು ಅರ್ಷದ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ಆರೋಪಿ ಆಗ್ರಾ ಮೂಲದವನಾಗಿದ್ದು, ಕೌಟುಂಬಿಕ ಗಲಾಟೆ ಹಿನ್ನಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಮೃತರನ್ನು ಆಲಿಯಾ (9), ಅಲ್ಶಿಯಾ (19), ಅಕ್ಸಾ (16) ಮತ್ತು ರಹಮೀನ್ (18) ಹಾಗೂ ಅರ್ಷದ್ ತಾಯಿ ಅಸ್ಮಾ ಎಂದು ತಿಳಿದು ಬಂದಿದೆ. ಮೃತ ಹುಡುಗಿಯರೆಲ್ಲರೂ ಆತನ ಸಹೋದರಿಯರಾಗಿದ್ದಾರೆ.
ಆಗ್ರಾ ಮೂಲದ ಕುಟುಂಬ ಹೊಸ ವರ್ಷವನ್ನು ಆಚರಿಸಲು ಲಕ್ನೋಗೆ ಬಂದಿತ್ತು. ಆರೋಪಿ ಮೊದಲಿಗೆ ಮಲಗಿದ್ದ ತಾಯಿಯನ್ನು ಬ್ಲೇಡ್ ಸಹಾಯದಿಂದ ಹತ್ಯೆ ಮಾಡಿದ್ದು, ಬಳಿಕ ನಿದ್ರೆಗೆ ಜಾರಿದ್ದ ಸಹೋದರಿಯರನ್ನು ಕೊಲೆಗೈದಿದ್ದಾನೆ. ಶರಂಜಿತ್ ಹೋಟೆಲ್ ಕೊಠಡಿಯಲ್ಲಿ ಶವಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
न्यू ईयर पर लखनऊ के होटल में 5 मर्डर24 साल के अरशद ने अपनी मां असमा और 4 बहनों की हत्या कर दी। ये परिवार आगरा में कुबेरपुर का रहने वाला है। आरोपी अरशद को पुलिस ने गिरफ्तार किया। पारिवारिक विवाद में सामूहिक नरसंहार की बात सामने आई। pic.twitter.com/7QuENPYmNH— Sachin Gupta (@SachinGuptaUP) January 1, 2025
ಕೇಂದ್ರ ಲಕ್ನೋದ ಡಿಸಿಪಿ ರವೀನಾ ತ್ಯಾಗಿ ಮಾತನಾಡಿ, ರಾಜ್ಯ ರಾಜಧಾನಿಯ ನಾಕಾ ಪ್ರದೇಶದ ಹೋಟೆಲ್ ಶರಣಜಿತ್‌ನಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಸದ್ಯ ಹೋಟೆಲ್ಗೆ ವಿಧಿ ವಿಜ್ಞಾನ ತಂಡ ಆಗಮಿಸಿದ್ದು, ಘಟನಾ ಸ್ಥಳದಲ್ಲಿ ಸಾಕ್ಷ್ಯಿಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ತನಿಖೆಗೆ ಪೊಲೀಸರು ಮುಂದಾಗಿದ್ದು, ಕೊಲೆ ಹಿಂದಿನ ಉದ್ದೇಶದ ಕುರಿತು ಸಂಪೂರ್ಣ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ವಿಜ್ಞಾನಿಯ ಅಪ್ರಾಪ್ತ ಮಗ, ಶಾಲೆಗೆ ಹೋಗು ಎಂದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ಮೊದಲು ತನ್ನ ತಾಯಿ ಆಕಸ್ಮಿಕವಾಗಿ ಬಿದ್ದು ಮೃತಟ್ಟಿದ್ದಾಳೆ ಎಂದು ವಿಜ್ಞಾನಿಯಾಗಿರುವ ತನ್ನ ತಂದೆ ಮತ್ತು ಪೊಲೀಸರ ದಾರಿ ತಪ್ಪಿಸಿದ್ದ ಬಾಲಕ ಬಳಿಕ ವಿಚಾರಣೆ ವೇಳೆ ಮನೆಯಲ್ಲಿ ತನ್ನ ತಾಯಿಯನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್ 3 ರಂದು 11ನೇ ತರಗತಿಯ ವಿದ್ಯಾರ್ಥಿ, ತನ್ನ ತಾಯಿ ಆರತಿ ವರ್ಮಾ ಅವರನ್ನು ಗೋಡೆಗೆ ತಳ್ಳಿದ್ದಾನೆ. ಆರತಿ ವರ್ಮಾ ಅವರ ತಲೆ ಬಲವಾದ ಪೆಟ್ಟಾಗಿ ಮೃತಪಟ್ಟಿದ್ದರು.
ಈ ಸುದ್ದಿಯನ್ನೂ ಓದಿ : Murder Case: ಸಿಗರೇಟ್ ಪ್ಯಾಕ್ ಕದ್ದನೆಂದು ಯುವಕನ ಥಳಿಸಿ ಕೊಲೆ
https://youtu.be/SQAHr_hBXow?si=7bw70aUhb3oxVK_s